Home International Stairway to Heaven: ಸ್ಟೇರ್ ವೇ ಹತ್ತಲು ಹೋದ ಬ್ರಿಟಿಷ್ ಪ್ರವಾಸಿಗ ಮೃತ್ಯು! ಇಲ್ಲಿದೆ ನೋಡಿ...

Stairway to Heaven: ಸ್ಟೇರ್ ವೇ ಹತ್ತಲು ಹೋದ ಬ್ರಿಟಿಷ್ ಪ್ರವಾಸಿಗ ಮೃತ್ಯು! ಇಲ್ಲಿದೆ ನೋಡಿ ಭಯಾನಕ ವಿಡಿಯೋ

Hindu neighbor gifts plot of land

Hindu neighbour gifts land to Muslim journalist

Stairway to Heaven : ಆಸ್ಟ್ರೀಯಾದ ಸ್ವರ್ಗದ ಮೆಟ್ಟಿಲು ಎಂದೇ ಖ್ಯಾತಿ ಗಳಿಸಿರುವ ಪನೋರಮಾ-ಲ್ಯಾಡರ್ ಫೆರಾಟಾಸ್ (Panorama-ladder Ferratas) ಆಕರ್ಷಕ ಪ್ರವಾಸಿ ತಾಣವಾಗಿದೆ. ಸ್ಟೇರ್‌ವೇ ಟು ಹೆವೆನ್ ಎಂದು ಕೂಡ ಕರೆಯಲಾಗುವ ಈ ತಾಣವನ್ನು ಏರಲು ಹೋದ ಬ್ರಿಟಿಷ್ ಪ್ರವಾಸಿಗನೋರ್ವ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡ(Death News)ಘಟನೆ ವರದಿಯಾಗಿದೆ.

 

ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, 42 ವರ್ಷದ ವ್ಯಕ್ತಿಯೊಬ್ಬರು ಈ ಸ್ಟೇರ್‌ವೇ ಟು ಹೆವನ್‌ ಹತ್ತುವ ವೇಳೆ 90 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿರುವ ಕುರಿತು ಮೆಟ್ರೋ ನ್ಯೂಸ್‌ ವರದಿ ಮಾಡಿದೆ.

 

ಕಡಿದಾದ ಹಾಗೂ ಭಾರಿ ಎತ್ತರವಿರುವ ಬೆಟ್ಟಕ್ಕೆ ಅಳವಡಿಸಿದ ಏಣಿಯನ್ನು ಹತ್ತುವ ವೇಳೆ ಬ್ರಿಟಿಷ್ ಪ್ರವಾಸಿಗ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆತ ಕೆಳಗೆ ಬಿದ್ದ ಕೂಡಲೇ ಅಲ್ಲಿನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ವ್ಯಕ್ತಿಯ ರಕ್ಷಣೆಗಾಗಿ ಹೆಲಿಕಾಪ್ಟರ್ (helicopters) ತಂದು ಕಾರ್ಯಚರಣೆ ಮಾಡಲಾಗಿತ್ತು. ಆದರೂ ಆತನನ್ನು ಉಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಿಲ್ಲ ಎನ್ನಲಾಗಿದ್ದು,ವ್ಯಕ್ತಿಯ ಶವವನ್ನು ಕಣಿವೆಯಿಂದ ಮೇಲೆತ್ತಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.