Home International ಶಿಕ್ಷಕಿಯನ್ನು ಮನಸ್ಸೋ ಇಚ್ಛೆ ಥಳಿಸಿದ ವಿದ್ಯಾರ್ಥಿ! ಸಾಯೋ ರೀತಿಯಲ್ಲಿ ಹೊಡೆಯೋಕೆ ಕಾರಣ ಇಷ್ಟೇ!

ಶಿಕ್ಷಕಿಯನ್ನು ಮನಸ್ಸೋ ಇಚ್ಛೆ ಥಳಿಸಿದ ವಿದ್ಯಾರ್ಥಿ! ಸಾಯೋ ರೀತಿಯಲ್ಲಿ ಹೊಡೆಯೋಕೆ ಕಾರಣ ಇಷ್ಟೇ!

Hindu neighbor gifts plot of land

Hindu neighbour gifts land to Muslim journalist

Florida teacher : ಮೊಬೈಲ್(mobile) ನಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಇದೆ. ಇಂದಿನ ದಿನದಲ್ಲಿ ಸೋಷಿಯಲ್ ಮೀಡಿಯಾದ ಮೂಲಕ ಅದೆಷ್ಟೋ ಮೋಸ, ವಂಚನೆ ನಡೆಯುತ್ತಲಿವೆ. ಸಾಕಷ್ಟು ಅನಾಹುತಗಳು ಸಂಭವಿಸಿದ್ದೂ ಇದೆ. ಯುವ ವಯಸ್ಸಿನವರಿಗೆ ಮೊಬೈಲ್ ಸಂಗಾತಿಯಂತೆಯೇ ಆಗಿಬಿಟ್ಟಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಕೈಯಲ್ಲಿ ಮೊಬೈಲ್ ಇರಲೇಬೇಕು. ಇದರಿಂದ ಆಗುವ ದುರಂತಗಳು ಸಾಕಷ್ಟು. ಹಾಗೆಯೇ ಇಲ್ಲೊಬ್ಬ ಯುವಕನ ಕೋಪಕ್ಕೆ ಶಿಕ್ಷಕಿ ಗುರಿಯಾಗಿದ್ದಾರೆ. ಶಿಕ್ಷಕಿಯೊಬ್ಬರು ತನ್ನ ವಿಡಿಯೋ ಗೇಮ್‌(video game) ಕಿತ್ತುಕೊಂಡರು ಎಂಬ ಕಾರಣಕ್ಕೆ ಯುವಕ ಏನು ಮಾಡಿದ್ದಾನೆ ಗೊತ್ತಾ?

ಅಮೆರಿಕಾ(America)ದ ಫ್ಲೋರಿಡಾದ ಹೈಸ್ಕೂಲ್‌ ವೊಂದರಲ್ಲಿ, ವಿಡಿಯೋ ಗೇಮ್‌ ಕಿತ್ತುಕೊಂಡ ಕಾರಣಕ್ಕೆ 17 ವರ್ಷದ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು (Florida teacher) ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್(viral video) ಆಗಿದೆ.

ವಿದ್ಯಾರ್ಥಿ ತರಗತಿ ನಡೆಯುವಾಗ ವಿಡಿಯೋ ಗೇಮ್‌ ಬಳಸಿದ್ದಾನೆ. ಇದನ್ನು ನೋಡಿದ ಶಿಕ್ಷಕಿ ಅದನ್ನು ಆತನಿಂದ ಕಿತ್ತುಕೊಂಡಿದ್ದಾರೆ. ತನ್ನ ತರಗತಿ ಮುಗಿದ ನಂತರ ಶಿಕ್ಷಕಿ ಹೊರಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿ ತರಗತಿಯಿಂದ ಹೊರಗೆ ಹೋದ ಶಿಕ್ಷಕಿಯ ಹಿಂದೆಯೇ ಬಂದು ಸಿಟ್ಟಿನಿಂದ ಕಾಲಿನಿಂದ ಒದ್ದಿದ್ದಾನೆ. ಈ ವೇಳೆ ಕೆಳಗೆ ಬಿದ್ದ ಶಿಕ್ಷಕಿಗೆ ಇನ್ನಷ್ಟು ಮನಸೋ ಇಚ್ಛೆ ಥಳಿಸಿದ್ದಾನೆ.

ಇದರ ಪರಿಣಾಮ ಶಿಕ್ಷಕಿ(teacher) ಪ್ರಜ್ಞೆ ತಪ್ಪಿದ್ದಾರೆ. ವಿದ್ಯಾರ್ಥಿಯ ಈ ಕೃತ್ಯವನ್ನು ಕಂಡು ಪಕ್ಕದ ತರಗತಿಯ ಶಿಕ್ಷಕರು ಓಡಿ ಬಂದಿದ್ದಾರೆ. ಎಲ್ಲರೂ ಸೇರಿ ವಿದ್ಯಾರ್ಥಿಯನ್ನು ಅಲ್ಲಿಂದ ಬೇರೆಡೆಗೆ ಎಳೆತಂದಿದ್ದಾರೆ. ಆದರೂ ಆತ ಶಿಕ್ಷಕಿಗೆ ಪ್ರಜ್ಞೆ ತಪ್ಪಿದ ನಂತರವೂ ಥಳಿಸಲು ಮುಂದಾಗುತ್ತಿದ್ದ. ಕೊನೆಗೆ ಹೇಗೋ ಹರಸಾಹಸಪಟ್ಟು ಆತನನ್ನು ಅಲ್ಲಿಂದ ಬೇರೆಡೆಗೆ ಕರೆತರಲಾಯಿತು.

ಮಾಹಿತಿ ಮೇರೆಗೆ, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.

https://twitter.com/FightHaven/status/1628993023165222912?s=20