Home International ಯುವತಿಯ ಭುಜ ಎಳೆದು ಡೇಟಿಂಗ್ ಅಡ್ವೈಸ್ ಕೊಟ್ಟ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ | 30...

ಯುವತಿಯ ಭುಜ ಎಳೆದು ಡೇಟಿಂಗ್ ಅಡ್ವೈಸ್ ಕೊಟ್ಟ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ | 30 ವರ್ಷದ ತನಕ ಡೇಟಿಂಗ್ ಮಾಡಿ, ಆಮೇಲೆ ಸೀರಿಯಸ್ ಆಗು ಅನ್ನೋ ಸಲಹೆ ಬೇರೆ

Hindu neighbor gifts plot of land

Hindu neighbour gifts land to Muslim journalist

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಡೇಟಿಂಗ್ ಬಗ್ಗೆ ಯುವತಿಯೊಬ್ಬಳಿಗೆ ಸಲಹೆ ನೀಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಂದು ಕ್ಯಾಲಿಫೋರ್ನಿಯಾದ ಇರ್ವಿನ್‍ ವ್ಯಾಲಿ ಕಾಲೇಜಿಗೆ ಭೇಟಿ ನೀಡಿದ್ದ 79 ವರ್ಷ ವಯಸ್ಸಿನ ಜೋ ಬೈಡೆನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವತಿಯರ ಗುಂಪೊಂದು ಮುಗಿಬಿದ್ದಿತ್ತು. ಈ ವೇಳೆ ಯುವತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟ ಜೋ ಬೈಡೆನ್ ಆ ಹುಡುಗಿಯರ ಜತೆ ಸಂವಾದಕ್ಕೆ ಇಳಿದಿದ್ದಾರೆ.

ಬೈಡೆನ್ ಓರ್ವ ಹುಡುಗಿಯ ಭುಜದ ಮೇಲೆ ಕೈ ಹಾಕಿ ತನ್ನತ್ತ ತಿರುಗಿಸಿಕೊಂಡು, ” ನಾನು ನನ್ನ ಮೊಮ್ಮಕ್ಕಳಿಗೆ ಡೇಟಿಂಗ್ ಟಿಪ್ಸ್ ಹೇಳುತ್ತಿರುತ್ತೇನೆ. 30 ವರ್ಷ ವಯಸ್ಸಾಗುವವರೆಗೂ ನೀನು ಕೂಡ ಗಂಭೀರವಾಗಿರಬೇಡ. ಯಾಕೆ ಗೊತ್ತಾ? 30 ವರ್ಷ ವಯಸ್ಸಾಗುವವರೆಗೂ ಯಾವ ಹುಡುಗನೂ ಗಂಭೀರವಾಗಿರುವುದಿಲ್ಲ ” ಎಂದು ಸಲಹೆ ನೀಡಿದ್ದಾರೆ. ಅಂದರೆ 30 ವರ್ಷದ ತನಕ ಡೇಟಿಂಗ್ ಮಾಡಿ, ಆಮೇಲೆ ಗಂಭೀರ ಆಗಿ ಅಂದಿದ್ದಾರೆ. ‘ ಗಂಭೀರ ಅಂದ್ರೆ ಮದ್ವೆ ಮಕ್ಳು’ ಅಂತಾನ ಅನ್ನೋದು ಖಚಿತ ಆಗಿಲ್ಲ.

ಈ ವಿಡಿಯೋ ಅನ್ನು 5.2 ಮಿಲಿಯನ್​ ವೀಕ್ಷಕರು ನೋಡಿದ್ದಾರೆ. ನೆಟ್ಟಿಗರು ತಮ್ಮ ಅಸಮಾಧಾನವನ್ನು ರೀಟ್ವೀಟ್ ಮಾಡುವುದರ ಮೂಲಕ ವ್ಯಕ್ತಪಡಿಸಿದ್ಧಾರೆ. ಈ ವಿಡಿಯೋ ನೋಡಲು ತುಂಬಾ ಕಿರಿಕಿರಿ ಎನ್ನಿಸುತ್ತದೆ, ಸಾರ್ವಜನಿಕವಾಗಿ ಮಕ್ಕಳೊಂದಿಗೆ ಅವರು ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮಕ್ಕಳೊಂದಿಗೆ ಬೈಡನ್​ ಹೀಗೆ ವರ್ತಿಸಲು ಅನುವು ಮಾಡಿಕೊಡುತ್ತೀರಾ?’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಡೇಟಿಂಗ್ ಬಗ್ಗೆ ಮಾತನಾಡಲು ಯಾವ ವಯಸ್ಸಿನವರಿಗೂ ಮುಜುಗರವಾಗುತ್ತದೆ. ಅಂಥದ್ದರಲ್ಲಿ ಈ ವಯಸ್ಸಾದ ವ್ಯಕ್ತಿ ಹೀಗೆ ತರುಣಿಯ ಭುಜದ ಮೇಲೆ ಕೈಹಾಕಿ ಮಾತನಾಡುವುದೆಂದರೆ…’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತೊಬ್ಬರು. ಅಲ್ಲೊಬ್ಬರು ಇಲ್ಲೊಬ್ಬರು, ‘ನಿಮ್ಮ ಸಲಹೆ ಸರಿಯಾಗಿದೆ’ ಎಂದಿದ್ದಾರೆ.