Home International ‘2021 ವಿಶ್ವ ಸುಂದರಿ’ ಕಿರೀಟ ಪೋಲಾಂಡ್‌ನ ಕರೊಲಿನಾ ಬಿಲಾವ್‌ಸ್ಕಾ ಮುಡಿಗೆ !

‘2021 ವಿಶ್ವ ಸುಂದರಿ’ ಕಿರೀಟ ಪೋಲಾಂಡ್‌ನ ಕರೊಲಿನಾ ಬಿಲಾವ್‌ಸ್ಕಾ ಮುಡಿಗೆ !

Hindu neighbor gifts plot of land

Hindu neighbour gifts land to Muslim journalist

2021ನೇ ವಿಶ್ವ ಸುಂದರಿ ಕಿರೀಟ ಪೋಲಾಂಡ್ ನ ಕರೊಲಿನಾ ಬಿಲಾವ್‌ಸ್ಕಾ ಅವರ ಮುಡಿಗೇರಿದೆ. ಅಮೆರಿಕದ ಶ್ರೀಸೈನಿ ಮೊದಲ ರನ್ನರ್ ಅಪ್ ಪಟ್ಟ ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ವಾರಣಾಸಿಯ ಮಾನಸಾ ಸೆಮಿಫೈನಲ್ ಪ್ರವೇಶಿಸಿ ಗಮನ ಸೆಳೆದರು.

ಮಾನಸಾಗೆ ಟಾಪ್ 13ನೇ ಸ್ಥಾನ ಸಿಕ್ಕಿದೆ.

ಪ್ಯೂರ್ಟೋ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಕೋಕಾ ಕೋಲಾ ಮ್ಯೂಸಿಕ್ ಹಾಲ್‌ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕರೊಲಿನಾ ಬಿಲಾವ್‌ಸ್ಕಾ ಅವರು MISS WORLD 2021 ಆಗಿ ಹೊರ ಹೊಮ್ಮಿದರು. ಜಮೈಕಾದ ಟೋನಿ ಆನ್‌ಸಿಂಗ್ ಅವರು ಕರೊಲಿನಾ ಬಿಲಾವ್‌ಸ್ಕಾಗೆ ವಿಶ್ವಸುಂದರಿ ಕಿರೀಟ ತೊಡಿಸಿದರು.