Home Interesting Rarest Twins Born: ಮೊದಲ ಮಗುವಿನ ಜನನದ ನಂತರ ಎರಡನೇ ಮಗುವಿಗೆ 22 ದಿನದ ನಂತರ...

Rarest Twins Born: ಮೊದಲ ಮಗುವಿನ ಜನನದ ನಂತರ ಎರಡನೇ ಮಗುವಿಗೆ 22 ದಿನದ ನಂತರ ಜನ್ಮ ನೀಡಿದ ಮಹಿಳೆ

Rarest Twins Born
Image Credit: Manchester World

Hindu neighbor gifts plot of land

Hindu neighbour gifts land to Muslim journalist

Rarest Twins Born: ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರಿಗೆ ಅವಳಿ ಮಕ್ಕಳು ಜನಿಸಿದೆ. ಇದರಲ್ಲೇನು ವಿಶೇಷ ಅಂತೀರಾ? ಹೌದು, ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗು ಜನಿಸಿತ್ತು. ಇದು ಬಹಳ ಅಪರೂಪದ ಪ್ರಕರಣ. ಏನಿದು ಘಟನೆ ? ಬನ್ನಿ ತಿಳಿಯೋಣ.

ಮಿರರ್ ವರದಿ ಪ್ರಕಾರ, ಇಂಗ್ಲೆಂಡ್ ನಿವಾಸಿ ಕೇಲಿ ಡಾಯ್ಲ್ ಗರ್ಭಿಣಿಯಾಗಿದ್ದರು. ತಾನು ಅವಳಿ ಮಕ್ಕಳ ತಾಯಿಯಾಗಲಿದ್ದೇನೆ ಎಂದು ವೈದ್ಯರು ಹೇಳಿದಾಗ ಆಕೆ ಖುಷಿಯಿಂದ ಕುಣಿದಾಡಿದ್ದರು. ಎಲ್ಲಾ ಸ್ಕ್ಯಾನ್‌ಗಳು ಸಾಮಾನ್ಯವಾಗಿದ್ದವು. ಆಗ ವೈದ್ಯರು, ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. 22ನೇ ವಾರದವರೆಗೂ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಭಯಾನಕ ನೋವು ಕಾಣಿಸಿಕೊಂಡಿತು. ಹಾಸಿಗೆಯಿಂದ ಏಳುವುದು ಕಷ್ಟವಾಯಿತು, ಕೈಲಿಯನ್ನು ಆಸ್ಪತ್ರೆಗೆ ಕರೆದೊಯ್ದು ಐದು ದಿನಗಳ ಕಾಲ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಆಕೆ ತನ್ನ ಮೊದಲ ಮಗು ಆರ್ಲೋಗೆ ಸ್ವಾಭಾವಿಕವಾಗಿ ಜನ್ಮ ನೀಡಿದಳು. ಆದರೆ ಮಗು ಕೇವಲ 1.1 ಪೌಂಡ್ ತೂಕವನ್ನು ಹೊಂದಿದ್ದರಿಂದ ಮಗು ಮರಣ ಹೊಂದಿತು. ಆಕೆಯ ಹೊಕ್ಕುಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಇದರಿಂದ ಚಿಂತಾಕ್ರಾಂತಳಾದ ಕೈಲಿ, ಇನ್ನೇನು ಕೆಲವೇ ಗಂಟೆಗಳಲ್ಲಿ ಎರಡನೇ ಮಗು ಜನಿಸಲಿದೆ ಎಂದು ವೈದ್ಯರು ಹೇಳಿದಾಗ ಆಕೆಯ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಆದರೆ ಆಕೆಗೆ ಎರಡು ದಿನವಾದರೂ ಮಗು ಜನಿಸಿಲ್ಲ. ಕೂಡಲೇ ಆಕೆಗೆ ಹೆರಿಗೆ ನೋವು ಕೂಡಾ ಹೋಯಿತು. ನಂತರ ವೈದ್ಯರು ಆಕೆಯನ್ನು ಮನೆಗೆ ವಿಶ್ರಾಂತಿಗಾಗಿ ಕಳುಹಿಸಿದರು. ಆದರೆ 22 ದಿನಗಳ ನಂತರ ಆಕೆಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿತು ಕೂಡಲೇ ಆಸ್ಪತ್ರೆಗೆ ದಾಖಲಾದಳು ಆಕೆ.

ಶಸ್ತ್ರಚಿಕಿತ್ಸೆ ಮೂಲಕ ಆಸ್ಟ್ರೋ ಜನಿಸಿದ್ದು, ಅವರಿಗೆ ಈಗ 2 ವರ್ಷ. ಜನನದ ಸಮಯದಲ್ಲಿ ಅವರ ತೂಕ 2 ಪೌಂಡ್ ಆಗಿತ್ತು. ಜನಿಸುವಾಗ ಮಗುವಿನ ಹೃದಯದಲ್ಲಿ ರಂಧ್ರವಿದ್ದು ಮತ್ತು ಮಗುವಿನ ಕಣ್ಣುಗಳಲ್ಲಿ ಸಮಸ್ಯೆ ಇತ್ತು. ಆದರೆ ನಂತರ ಮಗು ಆರೋಗ್ಯವಂತಾಯಿತು. ಇದು ಗರ್ಭಾವಸ್ಥೆಯ ಅತ್ಯಂತ ಅಪರೂಪದ ಪ್ರಕರಣವಾಗಿದೆ. ಇಬ್ಬರು ಮಕ್ಕಳ ನಡುವೆ ಇಷ್ಟೊಂದು ಅಂತರ ಹೇಗೆ ಆಯಿತು ಎಂದು ಸ್ವತಃ ವೈದ್ಯರು ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Heart Attack: ಯುವಕರಲ್ಲಿ ಹೆಚ್ಚುತ್ತಿದೆ ಹೃದಯಘಾತ ಪ್ರಮಾಣ : ಹಠಾತ್ ಹೃದಯಾಘಾತವಾದಾಗ ಏನು ಮಾಡಬೇಕು ?