Home Interesting Weekend With Ramesh : ವಾರದ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು...

Weekend With Ramesh : ವಾರದ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್!

Weekend With Ramesh

Hindu neighbor gifts plot of land

Hindu neighbour gifts land to Muslim journalist

Weekend With Ramesh :ಕನ್ನಡಿಗರ ಹೆಮ್ಮೆ, ಪುಣ್ಯಾತ್ಮ ಎಂದೇ ಸೈ ಎನಿಸಿಕೊಂಡ ಡಾ. ಸಿಎನ್ ಮಂಜುನಾಥ್ ವೀಕೆಂಡ್ (Weekend With Ramesh) ಕುರ್ಚಿಗೆ ಏರಲಿದ್ದಾರೆ.

ಜೀ ಕನ್ನಡ ವಾಹಿನಿ ನಡೆಸಿಕೊಡುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಶೋ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಇಬ್ಬರು ಮಹಾನ್ ವ್ಯಕ್ತಿಗಳು ವೀಕೆಂಡ್ ಕುರ್ಚಿ ಏರಿ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ(Divya spandana) ಕಾಣಿಸಿಕೊಂಡಿದ್ದರು. ಎರಡನೇ ಅತಿಥಿಯಾಗಿ ಖ್ಯಾತ ಡಾನ್ಸರ್, ನೃತ್ಯ ನಿರ್ದೇಶಕ, ನಟ ಪ್ರಭುದೇವ (Prabhu Deva)ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಅಲ್ಲಿ ಕಾಣಿಸಿಕೊಂಡಿದ್ದರು .

ಆದರೆ ಇದೀಗ 3ನೇ ವಾರದ ಅತಿಥಿ ಯಾರು ಎನ್ನುವುದೇ ಅಭಿಮಾನಿಗಳಲ್ಲಿ ಕಾತುರವನ್ನು ಮೂಡಿಸಿದೆ. ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಾರದ ವೀಕೆಂಡ್ ಕುರ್ಚಿ ಏರಲಿರುವ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್(Dr. C N Manjunath) ಅವರನ್ನು ನೋಡಿ ಪ್ರೇಕ್ಷಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಡಾ.ಸಿ ಎನ್ ಮಂಜುನಾಥ್ ಅವರ ಮಾತುಕತೆಯನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಹಲವಾರು ಪ್ರೇಕ್ಷಕರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಜೀ ಕನ್ನಡ ತನ್ನ ಸಾಮಾಜಿಕ ಜಾಲತಾಣದ ಅಧಿಕೃತ ಪೇಜ್‌ನಲ್ಲಿ ಗೆಸ್ಟ್ ಯಾರೆಂದು ಯೋಚನೆ ಮಾಡಿ ಎನ್ನುವ ಪೋಸ್ಟ್ ಅನ್ನು ತನ್ನ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿದ ಅಭಿಮಾನಿಗಳು ಸರಿಯಾಗಿ ಈ ಪೋಸ್ಟರ್ ನ ಬಗ್ಗೆ ಕಾಮೆಂಟ್ (comment)ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಾ.ಸಿ ಎನ್ ಮಂಜುನಾಥ್ ನಮ್ಮ ವೀಕೆಂಡ್ ವಿತ್ ರಮೇಶ್ ನ ಮೂರನೇ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಚಿಕೆಯನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ನಮ್ಮ ಮಾಜಿ ಪ್ರಧಾನಿ ಆಗಿರುವ ದೇವೇಗೌಡರ ಅಳಿಯ ಡಾ. ಸಿಎನ್ ಮಂಜುನಾಥ್ ಇವರು ತಮ್ಮ ವ್ಯಕ್ತಿತ್ವ, ಕೆಲಸ, ಶಿಸ್ತು, ಸೂಕ್ತ ನಿರ್ದೇಶನ, ಮಾರ್ಗದರ್ಶನ ಇನ್ನು ಹಲವಾರು ಉತ್ತಮ ಗುಣಗಳಿಂದ ತನ್ನನ್ನು ಗುರುತಿಸಿಕೊಂಡಂತಹ ಅತ್ಯದ್ಭುತ ನಿರ್ದೇಶಕ ಡಾಕ್ಟರ್ ಸಿ ಎನ್ ಮಂಜುನಾಥ್. ಇವರು ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿ ಅದರಲ್ಲಿ ಅಭಿಮಾನಿಗಳಿಂದ (fans) ಮೇಲುಗೈ ಸಾಧಿಸಿದ್ದಾರೆ.

ವೀಕೆಂಡ್ ವಿತ್ (weekend with Ramesh) ಗೆ ಕೇವಲ ಸಿನಿತೆರಿಯಲ್ಲಿ ಕಾಣಿಸಿಕೊಂಡಂತಹ ವ್ಯಕ್ತಿಗಳನ್ನು ಮಾತ್ರ ಕರೆ ತರುತ್ತೀರಾ ಮತ್ತು ಕನ್ನಡ ಭಾಷೆ ಬಾರದಂತಹ ಅತಿಥಿಗಳನ್ನು ವೀಕೆಂಡ್ ಕುರ್ಚಿಯಲ್ಲಿ ಕೂರಿಸುತ್ತೀರಾ ಎಂಬ ಬೇಸರವನ್ನು ಅಭಿಮಾನಿಗಳು ಹೊರ ಹಾಕಿದ್ದರು. ಆದರೆ ಈಗ ವೀಕೆಂಡ್ ಕುರ್ಚಿಯಲ್ಲಿ ಡಾ.ಸಿ ಎನ್ ಮಂಜುನಾಥ್ ಅವರನ್ನು ನೋಡಿ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

ಜೀ ವಾಹಿನಿಯ ಸಾಮಾಜಿಕ ಜಾಲತಾಣದ(social media) ಅಧಿಕೃತ ಪೇಜಿನಲ್ಲಿ ಪೋಸ್ಟರ್ ಅನ್ನು ಹಾಕಿದ ತಕ್ಷಣ ಅಭಿಮಾನಿಗಳು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿ ಕಮೆಂಟ್ ಮಾಡಿದ್ದಾರೆ.Dr.ಮಂಜುನಾಥ್ ಸರ್’, ‘ನನ್ ಅಪ್ಪಾಜಿ ಗೆ ಅಂಜಿಯೋಗ್ರಾಮ್ ಮಾಡಿದ ಪುಣ್ಯಾತ್ಮ’, ‘Dr ಮಂಜುನಾಥ್ ಸಾರ್, ಕನ್ನಡಿಗರ ಹೆಮ್ಮೆ…ಸೂಪರ್ ಸಾರ್’. ಎಂದು ವಿಭಿನ್ನ ರೀತಿಯಲ್ಲಿ ಡಾ. ಸಿಎನ್ ಮಂಜುನಾಥ್(Dr CN Manjunath) ಇವರ ಪೋಸ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಾರದ 3 ನೇ ವಿಶೇಷ ವ್ಯಕ್ತಿಯ ಸಂಚಿಕೆಯನ್ನು ನೋಡಲು ಪ್ರೇಕ್ಷಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರ ಜೀವನ, ಅವರ ಉತ್ತಮ ಗುಣದ ಬಗ್ಗೆ ಇನ್ನೂ ಇಂಟ್ರಸ್ಟಿಂಗ್(interesting) ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ಈ ವಾರದ ಶನಿವಾರ(Saturday)ಮತ್ತು ಭಾನುವಾರದ(Sunday) ವರೆಗೂ ಕುತೂಹಲದಿಂದ ಕಾಯಬೇಕಾಗಿದೆ.