Home Interesting Viral Chicken Video: ನಾಲ್ಕು ಕಾಲಿನ ಕೋಳಿ ಮರಿ | ವಿಚಿತ್ರ ಅಲ್ವಾ , ಆದರೆ...

Viral Chicken Video: ನಾಲ್ಕು ಕಾಲಿನ ಕೋಳಿ ಮರಿ | ವಿಚಿತ್ರ ಅಲ್ವಾ , ಆದರೆ ಇದು ನಿಜ, ವಿಡಿಯೋ ನೋಡಿಲ್ಲ ಅಂದ್ರೆ ನಿಜಕ್ಕೂ ದೃಶ್ಯ ಮಿಸ್ ಆಗುತ್ತೆ

Hindu neighbor gifts plot of land

Hindu neighbour gifts land to Muslim journalist

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಸಸ್ಯ ಮತ್ತು ಪ್ರಾಣಿಗಳ ಪಕ್ಷಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು ನಡೆಯುತ್ತಲೇ ಇರುತ್ತದೆ ಹಾಗೂ ನಾವು ಇಂತಹ ಘಟನೆ ನಿಲ್ಲಿಸಲು ಸಹ ಸಾಧ್ಯವಿಲ್ಲ. ಈ ಎಲ್ಲಾ ಕ್ರಿಯೆಗಳು ಪ್ರಕೃತ್ತಿ ನಿಮಿತ್ತ ಆಗಿದೆ. ಹಾಗೆಯೇ ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಚಕಿತಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲಸಾಧ್ಯ ಎನ್ನುವಂತೆ ಮಾಡುತ್ತವೆ.ಹಾಗೆಯೇ ಈ ಕುರಿತ ನಿದರ್ಶನಗಳನ್ನು ನೋಡಿದ್ದೇವೆ ಕೇಳಿದ್ದೇವೆ.
ಸದ್ಯ ಇಲ್ಲೊಂದು ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲುಗಳು ಇದೆಯಂತೆ.

ಇದುವರೆಗೆ ನೀವು ಕೇವಲ 2 ಕಾಲಿನ ಕೋಳಿಗಳನ್ನು ಮಾತ್ರ ನೋಡಿರಬೇಕು. ಆದರೆ ಒಂದು ವಿಸ್ಮಯವು ಜಗತ್ತಿನಲ್ಲಿ ನಡೆದಿದೆ. ಅದು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಜನಿಸಿದ ಕೋಳಿ ಮರಿಗೆ ನಾಲ್ಕು ಕಾಲುಗಳಿವೆ ಎಂದು ವ್ಯಕ್ತಿಯೊಬ್ಬ ತನ್ನ ಮೊಬೈಲ್ ಕ್ಯಾಮರಾದಲ್ಲಿ ಆಘಾತಕಾರಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.

@saquib12pathans ಎಂಬ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದ ಶೀರ್ಷಿಕೆಯು “ಕೋಳಿ ಮರಿಯ ನಾಲ್ಕು ಕಾಲುಗಳು” ಎಂದು ನೀಡಲಾಗಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನೂರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ.

https://www.instagram.com/reel/Cmk2lU2JtJH/?igshid=MDJmNzVkMjY=

ಅದಲ್ಲದೆ ಮರಿ ದೊಡ್ಡದಾದ ಬಳಿಕ ಮತ್ತೆ ವಿಡಿಯೋ ಮಾಡಿ ತೋರಿಸುತ್ತೇನೆ ಎಂದೂ ಆ ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೋ ಇಂಟರ್‌ನೆಟ್‌ ನಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಮೇಲೆ ಇದೊಂದು ಆಶ್ಚರ್ಯ ಸಂಗತಿ ಆಗಿದೆ ಎಂದು ನೀವು ಸಹ ಅಂದುಕೊಳ್ಳುವಿರಿ .