Home Interesting ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್...

ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಈ ಹಿಂದೆ ಮಹಿಳೆಯರನ್ನು ಗುರಾಯಿಸುವ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಒಂದು ವೈರಲ್ ಆಗಿದ್ದು, 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಮಹಿಳೆ ಅಥವಾ ಯುವತಿಯನ್ನು ಗುರಾಯಿಸುವುದು ಭಾರತೀಯ ದಂಡ ಸಂಹಿತೆ ಅಡಿ ಬಂಧಿಸಲಾಗುವುದು ಎಂದು ಹೇಳಲಾಗಿದೆ.

ನವಂಬರ್ 27 ರಂದು ರಾಷ್ಟ್ರೀಯ ಅಪರಾಧ ತನಿಖಾ ಸಂಸ್ಥೆ (NCIB) ಹೆಸರಿನ ಎನ್‌ಜಿಒ ಸಂಸ್ಥೆ ಟ್ವಿಟ್ಟೊಂದನ್ನು ಮಾಡಿದ್ದು, ಹಿಂದಿಯಲ್ಲಿ ಈ ಟ್ವಿಟ್ ಮಾಡಲಾಗಿದ್ದು, NCIB Headquarters ಹೆಸರಿನಡಿ ಈ ಕಾತೆ ವೇರಿಫೈ ಆಗಿದ್ದು,14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಮಹಿಳೆ ಅಥವಾ ಯುವತಿಯನ್ನು ಗುರಾಯಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ಹಾಗೂ 509 ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಟ್ವಿಟ್ ಮಾಡಿದೆ. ಆದ್ರೆ, ಈ ಮಾಹಿತಿ ಎಷ್ಟು ಸತ್ಯ ಎಂಬ ಮಾಹಿತಿ ಸಿಗದೆ ಹೆಚ್ಚಿನವರು ಗೊಂದಲಕ್ಕಿಡಾಗಿದ್ದಾರೆ. ಎನ್‌ಸಿಬಿಐ ಹೆಸರು ಹಾಗೂ ಟ್ವಿಟ್ಟರ್ ಹ್ಯಾಂಡಲ್ ಆಗಿರುವ NCIB Headquarters ಹಾಗೂ ಅದರ ಕೆಂಪು ಹಾಗೂ ನೀಲಿ ಬಣ್ಣದ ಲೋಗೋ ಜನರಿಗೆ ಅದು ಪೊಲೀಸ್ ಇಲಾಖೆಗೆ ಸೇರಿದ ಖಾತೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ. ಆದರೆ ಟ್ವಿಟ್ಟರ್ ಯುಆರ್‌ಎಲ್ ಕ್ಲಿಕ್ ಮಾಡಿದಲ್ಲಿ ಮಾತ್ರ ಅದು ಸರ್ಕಾರಿ ಸಂಸ್ಥೆಯಲ್ಲ ಎಂಬುದು ತಿಳಿಯುತ್ತದೆ.

ಕಾನೂನಿನ ಪ್ರಕಾರ ನೋಡುವುದಾದರೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294, ಅಶ್ಲೀಲ ಕೃತ್ಯಗಳು ಹಾಗೂ ಹಾಡುಗಳ ಬಗೆಗಿನ ವಿವಾದಗಳ ಬಗ್ಗೆ ವ್ಯವಹರಿಸುತ್ತದೆ. ಯಾರು ಇತರರಿಗೆ ಕಿರಿಕಿರಿ ಮಾಡುವ ಸಲುವಾಗಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಪದಗಳ (Obscene words) ಹಾಡನ್ನು ಹಾಡುತ್ತಾರೋ ಅಂತವರಿಗೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ದಂಡ ಎರಡನ್ನು ವಿಧಿಸಲಾಗುತ್ತದೆ.

ಹಾಗೆಯೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509ರ ಪ್ರಕಾರ ಮಹಿಳೆಯ ವಿಧೇಯತೆಯನ್ನು (Obedience) ಅವಮಾನಿಸುವ ಉದ್ದೇಶದಿಂದ ಹಾವಭಾವದ ಮೂಲಕ ವ್ಯವಹರಿಸುವ ಹಾಗೂ ಸನ್ನೆಯ ಮೂಲಕ ಅಸಭ್ಯವಾಗಿ ವರ್ತಿಸುವ ಸನ್ನೆ ಮಾಡಿ ಕರೆಯುವ ಮುಂತಾದ ಕೃತ್ಯಗಳ ವಿರುದ್ಧ ಇರುವ ಸೆಕ್ಷನ್ ಆಗಿದ್ದು ಇಂತಹ ಪ್ರಕರಣಗಳಲ್ಲಿ ಒಂದು ವರ್ಷದಿಂದ ಮೂರು ವರ್ಷದವರೆಗೆ ಸರಳ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಆದರೆ ಈ ಎರಡು ಸೆಕ್ಷನ್‌ಗಳು ಮಹಿಳೆ ಘನತೆಗೆ ಕುಂದು ಉಂಟು ಮಾಡುವ ಪ್ರಕರಣಗಳಲ್ಲಿ ಶಿಕ್ಷೆ ನೀಡುತ್ತದೆ. ಮಹಿಳೆಯನ್ನು ಗುರಾಯಿಸುವುದು ಕೂಡ ತಪ್ಪು ಎಂಬುದು ಈ ಸೆಕ್ಷನ್ ಕೆಳಗೆ ಬರಬಹುದು. ಆದರೆ ಎನ್‌ಜಿಒ ಹೇಳಿದಂತೆ ಗುರಾಯಿಸುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ಸೆಕ್ಷನ್ ಇಲ್ಲ. ಹಾಗಾಗಿಯೇ 14 ಸೆಕೆಂಡ್‌ಗಿಂತ ಹೆಚ್ಚು ಗುರಾಯಿಸಿದರೆ ಜೈಲು ಶಿಕ್ಷೆ ಎಂದು ಹೇಳುವುದಕ್ಕೆ ಯಾವುದೇ ಸೆಕ್ಷನ್ ಇಲ್ಲ ಎಂಬುದು ಪೊಲೀಸ್ ಮೂಲಗಳ ಮಾಹಿತಿ. ಹೀಗಾಗಿ ಇದೊಂದು ದಾರಿ ತಪ್ಪಿಸುವ ಟ್ವಿಟ್ ಎಂಬ ಆರೋಪ ಕೇಳಿ ಬಂದಿದೆ.