Home Interesting Viral Post । ‘ ಮರಣ ಪ್ರಮಾಣಪತ್ರ ’ ಕಳೆದು ಹೋಗಿದೆಯೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ...

Viral Post । ‘ ಮರಣ ಪ್ರಮಾಣಪತ್ರ ’ ಕಳೆದು ಹೋಗಿದೆಯೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಸತ್ತ ವ್ಯಕ್ತಿ, ಭಯಗೊಂಡ ನೆಟ್ಟಿಗರು !

Hindu neighbor gifts plot of land

Hindu neighbour gifts land to Muslim journalist

ಇಂಟರ್ನೆಟ್ ಎನ್ನುವುದು ವಿಲಕ್ಷಣ ವಿಷಯಗಳ ಒಕ್ಕೂಟ. ಅಲ್ಲಿ ಚಿತ್ರ ವಿಚಿತ್ರ ವಿಷಯಗಳು ದಿನಂಪ್ರತಿ ತೆರೆದು ಕೊಳ್ಳುತ್ತಲೇ ಇರುತ್ತವೆ. ಅನೇಕ ಅಸಾಮಾನ್ಯ ಊಹಿಸಲು ಸಾಧ್ಯವಾಗದ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೆ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ಸತ್ತ ವ್ಯಕ್ತಿ ನೀಡಿದ ಜಾಹೀರಾತು ಜನರನ್ನು ಭಯಪಡಿಸಿದೆ.

ಸತ್ತ ವ್ಯಕ್ತಿಯೊಬ್ಬ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವ ಕುರಿತಂತೆ ಈ ಸುದ್ದಿ ಹರಿದಾಡುತ್ತಿದೆ. ಈ ಕುರಿತಾದ ಪೋಸ್ಟ್ ಅನ್ನು ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿ ರೂಪಿನ್ ಶರ್ಮಾ ಎಂಬುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದು ಒಬ್ಬ ವ್ಯಕ್ತಿ ಸತ್ತಾಗ ಮಾತ್ರ ಕೊಡ ಮಾಡಲಾಗುವ ದಾಖಲೆಯಾಗಿದೆ. ಹಾಗಾದರೆ, ಸತ್ತ ವ್ಯಕ್ತಿ ಎದ್ದು ಬಂದು ಮರಣದ ಪ್ರಮಾಣಪತ್ರ ಮಿಸ್ ಆಗಿದೆ ಎಂದು ಜಾಹಿರಾತು ನೀಡಿದನಾ ?!

” ಅಸ್ಸಾಂನ ಲುಮ್ಡಿಂಗ್ ಬಜಾರ್‌ನಲ್ಲಿ ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂಬ ಜಾಹೀರಾತನ್ನು ನಾನು ಓದಿದೆ. ಅದರಲ್ಲಿ ನೋಂದಣಿ ಮತ್ತು ಕಳೆದುಹೋದ ಪ್ರಮಾಣಪತ್ರದ ಕ್ರಮಸಂಖ್ಯೆಯನ್ನೂ ನಮೂದಿಸಲಾಗಿದೆ. ಇದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ ” ಎಂದು ಶರ್ಮಾ ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.

ಅವನ ಸಾವಿನ ಪ್ರಮಾಣಪತ್ರವನ್ನು ಕಳೆದುಕೊಳ್ಳುವ ಬಗ್ಗೆ ಮ್ಯಾನ್ಸ್ ಪತ್ರಿಕೆಯ ಜಾಹೀರಾತು ಹಾಕಿದ್ದಕ್ಕೆ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಗಳನ್ನು ಮಾಡಿದ್ದಾರೆ. ಕಳೆದುಹೋದ ವಸ್ತುವನ್ನು, ಅಂದರೆ ಮರಣ ಪ್ರಮಾಣ ಪಾತ್ರ ದೊರೆತ ಆ ಜಾಹಿರಾತು ನೀಡಿದ ವ್ಯಕ್ತಿ ಎಲ್ಲಿ ತಲುಪಬೇಕು ? ಎಂದು ತಮಾಷೆಯಾಗಿ ಕೇಳಿದ್ದಾರೆ. ಇನ್ನು ಕೆಲವರು, ” ಈ ವ್ಯಕ್ತಿ ಸತ್ತಿದ್ದು, ಪರಲೋಕದಿಂದ ಅಲ್ಲಿ ಜಾಬ್ ಅಪ್ಲಿಕೇಶನ್ ಅಥವಾ ಪರಲೋಕದಲ್ಲಿ ‘ ವಾಸ್ತವ್ಯ ಸರ್ಟಿಫಿಕೇಟ್ ‘ ಗಾಗಿ ಅರ್ಜಿ ಹಾಕಲು ಸ್ವರ್ಗದಿಂದ ಸಹಾಯ ಕೇಳುತ್ತಿದ್ದಾನಾ ? ” ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ.