Home Entertainment ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

Hindu neighbor gifts plot of land

Hindu neighbour gifts land to Muslim journalist

ಜಗತ್ತನ್ನು ಆಡಿಸುವವನು ಕೇವಲ ಭಗವಂತನೊಬ್ಬನೇ. ನಾವೆಲ್ಲರೂ ಆತನ ಆಟಿಕೆಗಳಷ್ಟೇ. ನಾಳೆ ಏನಾಗಬಹುದು ಎಂಬ ಅರಿವಿಲ್ಲದ ನಾವುಗಳು ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕು.ಹೀಗೆ ಒಟ್ಟಾಗಿ ಪ್ರಪಂಚದ ಸೃಷ್ಟಿ ಕರ್ತನಾದ ಆತ, ಇಲ್ಲೊಂದು ವಿಸ್ಮಯ ಜೋಡಿನ ಹುಟ್ಟಿ ಹಾಕಿದ್ದಾನೆ. ಅದೇನು ಎಂಬುದನ್ನು ಮುಂದೆ ನೋಡಿ.

ಹೌದು. ಇಲ್ಲೊಂದು ಪುಟ್ಟ ಮಕ್ಕಳ ಮದುವೆ ಸಮಾರಂಭದ ಗಮ್ಮತ್ತು. ಆದರೆ ಇದು ನಾವು ಅಂದು ಕೊಂಡಂತೆ ಮಕ್ಕಳ ಮದುವೆ ಅಲ್ಲ.ಗಂಡಿಗೆ 28 ವಯಸ್ಸು, ಹೆಣ್ಣಿಗೆ 25 ವರ್ಷವಾದರೂ ದೈಹಿಕ ಬೆಳವಣಿಗೆ ಕಾಣದೇ ಸಣ್ಣ ಮಕ್ಕಳಂತೆಯೇ ಇವರು ಕಾಣುತ್ತಿರುವ ಜೋಡಿ. ನಾ ಮೊದಲೇ ಹೇಳಿದಂತೆ ಈ ಜೋಡಿಯನ್ನು ಪ್ರಕೃತಿಯೇ ಒಂದು ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಜೋಡಿ ಎಲ್ಲರನ್ನೂ ಗಮನ ಸೆಳೆಯಿತು. ಆರಂಭದಲ್ಲಿ ಬಹಳಷ್ಟು ಜನರು ಇದು ಮಕ್ಕಳ ಮದುವೆ ಎಂದೇ ಅಂದುಕೊಂಡರೂ, ಆ ಬಳಿಕ ಇವರು ಈ ಪ್ರಕೃತಿಯ ವಿಸ್ಮಯ ಎನ್ನುವುದನ್ನು ಜನರೇ ಅರ್ಥ ಮಾಡಿಕೊಂಡು ನವ ವಧುವರರನ್ನು ಆಶೀರ್ವಾದಿಸಿದರು.

28 ವರ್ಷ ವಯಸ್ಸಿನ ವಿಷ್ಣು ಹಾಗೂ 25 ವರ್ಷ ವಯಸ್ಸಿನ ಜ್ಯೋತಿಯ ವಿವಾಹ ಇದೀಗ ಸುದ್ದಿಯಲ್ಲಿದ್ದು, ಎಲ್ಲರಿಗೂ ವಿಸ್ಮಯವಾಗಿಸಿದೆ.ಇವರಿಬ್ಬರು ಕೂಡ ಪದವೀಧರರಾಗಿದ್ದು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಅಪರೂಪದ ಜೋಡಿ ಕಾಲಜ್ಞಾನಿ ಕೈವಾರ ತಾತಯ್ಯನವರ ಕ್ಷೇತ್ರದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಇನ್ನೊಂದು ವಿಶೇಷವಾಗಿದೆ.ಒಟ್ಟಾಗಿ ಈ ಜೋಡಿ ಪುಟ್ಟ ಹೃದಯದ ಮಗುವಿನ ಮನಸ್ಸಿನಂತೆ ನಗು-ನಗುತ್ತಾ ನೂರು ಕಾಲ ಜೊತೆಯಿರಲಿ ಎಂಬುದೇ ನಮ್ಮೆಲ್ಲರ ಆಶಯವಲ್ಲವೇ.!