Home Interesting ದಿನಾ ರಾತ್ರಿ ಮಲಗಿದಾಗ ಕಿಸ್, ಆಲಿಂಗನದ ಅನುಭವ |ಪ್ರೇತದ ಕಾಟ ಎಂದು ಕೊಂಡ ಯುವತಿ |...

ದಿನಾ ರಾತ್ರಿ ಮಲಗಿದಾಗ ಕಿಸ್, ಆಲಿಂಗನದ ಅನುಭವ |ಪ್ರೇತದ ಕಾಟ ಎಂದು ಕೊಂಡ ಯುವತಿ | ನಿಜ ಗೊತ್ತಾದಾಗ ದಂಗಾದಳು!!!

Hindu neighbor gifts plot of land

Hindu neighbour gifts land to Muslim journalist

ವೀಕೆಂಡ್‌ ಪಾರ್ಟಿ ಮಾಡಿ, ಅಮಲಿನಲ್ಲಿ ಬಂದು ಮಲಗಿದ ಯುವತಿಗೆ ಮಧ್ಯರಾತ್ರಿ ಯಾರೋ ಚುಂಬಿಸಿದ ಅನುಭವವಾಗುತ್ತಿತ್ತು. ಅನಂತರ ಆಕೆಯ ಕೆಲ ಖಾಸಗಿ ಅಂಗಗಳನ್ನು ಮುಟ್ಟಿದ ಅನುಭವ ಆಗುತ್ತಿತ್ತು. ನಿದ್ದೆ ಅಮಲಿನಲ್ಲಿ ಎಚ್ಚರವಾಗಿ ನೋಡಿದರೆ ಕೇವಲ ನೆರಳು ಮಾತ್ರ ಕಾಣುತ್ತಿತ್ತು. ಆರಂಭದಲ್ಲಿ ವಿಕೇಂಡ್‌ನಲ್ಲಿ ಮಾತ್ರ ಇದ್ದ ಅನುಭವ ನಂತರ ಬಳಿಕ ಬಹುತೇಕ ದಿನಗಳಲ್ಲೇ ಆಗೋಕೆ ಶುರು ಆಗುತ್ತಿತ್ತು.

ಆದರೆ ಯಾವಾಗಲೂ ಬೆಳಗ್ಗೆ ಎದ್ದು ನೋಡಿದರೆ ಬಾಗಿಲು ಬಂದ್ ಆಗಿರುತ್ತಿತ್ತು. ಯಾರೂ ಡೋರ್ ತೆಗೆದು ಒಳಗೆ ಬಂದಿಲ್ಲ. ಹಾಗಾದರೆ ಮಧ್ಯ ರಾತ್ರಿ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವುದು ಪ್ರೇತದ ಕಾಟ ಎಂದು ಯುವತಿ ನಂಬಿದ್ದಾಳೆ. ಆದರೆ, ಮೊದಲೇ ಮದ್ಯದ ನಶೆಯಲ್ಲಿರುವ ಕಾರಣ ಪ್ರತಿ ರಾತ್ರಿ ನಡೆಯುವ ಈ ಲೈಂಗಿಕ ಆಟ ಯಾರೆಂದು ಸ್ಪಷ್ಟವಾಗಿ ಅರಿವಿಗೆ ಬರುತ್ತಿಲ್ಲ. ಆದರೆ ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಅನ್ನೋದಂತೂ ಗೊತ್ತಿತ್ತು.

ನಂತರ ಈ ಮನೆಯಲ್ಲಿ ಪ್ರೇತದ ಕಾಟ ಇದೆ ಅನ್ನೋ ಕೆಲವರ ಮಾತು ಯುವತಿ ನಂಬಿಕೆಗೆ ಪುಷ್ಠಿ ನೀಡಿತ್ತು. ಆದರೆ ಬರಬರುತ್ತಾ ಆಲಿಂಗನ, ಚುಂಬನ ಹೆಚ್ಚಾಗುತ್ತಿದ್ದಂತೆ ನಡೆಯುತ್ತಿರುವ ವಿಚಾರವನ್ನು ಯವತಿ ತನ್ನ ಬಾಯ್‌ಫ್ರೆಂಡ್‌ಗೆ ಹೇಳಿದ್ದು, ಯುವತಿಯ ಪ್ರೇತದ ಕತೆ ಕೇಳಿ ಬಾಯ್‌ಫ್ರೆಂಡ್ ಕೂಡಾ ಭಯಗೊಂಡಿದ್ದಾನೆ. ಹಾಗಾಗಿ ಏನೇ ಆಗಲು ಎಂದು ಸತ್ಯ ಅರಿಯಲು ಯುವತಿಯ ಬೆಡ್‌ರೂಂನಲ್ಲಿ ಸಿಸಿಟಿವಿ ಕ್ಯಾಮಾರ ಅಳವಡಿಸಿದ್ದಾನೆ. ಯಾವಾಗ ಸಿಸಿಟಿವಿ ಹಾಕಿದರೋ, ಈ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯ ನೋಡಿ ಯುವತಿ ನಿಜಕ್ಕೂ ಶಾಕ್ ಆಗಿದ್ದಾಳೆ. ಇಷ್ಟು ದಿನ ಪ್ರೇತದ ಕಾಟ ಎಂದು ನಂಬಿದ್ದ ಯುವತಿಗೆ, ಅದು ಪ್ರೇತ ಅಲ್ಲ. ತನ್ನ ಮನೆಯ ಮಾಲೀಕ ಅನ್ನೋದು ಸಿಸಿಟಿವಿಯಿಂದ ಬಹಿರಂಗಗೊಂಡಿದೆ. ಈ ಘಟನೆ ಸಿಂಗಾಪುರದಲ್ಲಿ ನಡೆದಿದೆ. ಸಿಂಗಾಪೂರದ ಹೌಸಿಂಗ್ ಅಂಡ್ ಡೆವಲಪಿಂಗ್ ಬೋರ್ಡ್(HDB) ನಿರ್ಮಾಣ ಮಾಡಿದ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ.

6 ತಿಂಗಳ ಹಿಂದೆ ಇಲ್ಲಿಗೆ ಯುವತಿ ವಾಸಕ್ಕಾಗಿ ಬಂದಿದ್ದಾಳೆ. ಯುವತಿ ತನ್ನ ಬಾಯ್‌ಫ್ರೆಂಡ್ ಜೊತೆ ಬಂದು ಈ ಮನೆಯನ್ನು ಬಾಡಿಗೆ ಪಡೆದಿದ್ದರು. ಈ ಮನೆಯ ಬಾಡಿಗೆಯನ್ನು(Rent) ಯುವತಿಯ ಬಾಯ್‌ಫ್ರೆಂಡ್ ಕಟ್ಟುತ್ತಿದ್ದಾನೆ. ಆದರೆ ಮನೆಯಲ್ಲಿ ಯುವತಿ ಮಾತ್ರ ವಾಸವಾಗಿದ್ದು, ಬಾಯ್‌ಫ್ರೆಂಡ್ (Boy Friend) ಬೇರೆ ಮನೆಯಲ್ಲಿ ವಾಸವಾಗಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡ ಮಾಲೀಕ, ವಾರದಲ್ಲಿ 3 ರಿಂದ 4 ದಿನ ರಾತ್ರಿ ಪಾರ್ಟಿಗೆ ಯುವತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ಆಹ್ವಾನಿಸಿ, ಬಳಿಕ ಕಂಠಪೂರ್ತಿ ಕುಡಿಸಿ ಬಾಯ್‌ಫ್ರೆಂಡ್‌ನ್ನು ಆತನ ಮನೆಗೆ ಬಿಡುತ್ತಿದ್ದ. ಕುಡಿದ ಅಮಲಿನಲ್ಲಿ ಬಂದು ಮಲಗುತ್ತಿದ್ದ ಯುವತಿ(Women) ಮನೆಗೆ ಆಗಮಿಸುತ್ತಿದ್ದ ಮಾಲೀಕ, ತನ್ನಲ್ಲಿರುವ ಮತ್ತೊಂದು ಕೀ ಬಳಸಿ ಒಳ ನುಗ್ಗುತ್ತಿದ್ದ.

ಮದ್ಯದ ನಶೆಯಲ್ಲಿದ್ದ ಯುವತಿಗೆ ಕಿಸ್ ಮಾಡಿ, ಆಲಿಂಗಿಸಿ, ಲೈಂಗಿಕವಾಗಿ(sexually abused) ಬಳಸಿ ಈ ಮನೆ ಮಾಲೀಕ ಹೋಗುತ್ತಿದ್ದ. ಇದು ಪ್ರೇತದ(Ghost) ಕೆಲಸ ಎಂದೇ ಭಾವಿಸಿದ್ದ ಯುವತಿ, ಮಾಲೀಕನ ಮೇಲೆ ಅನುಮಾನ ಪಟ್ಟಿಲ್ಲ. ಆದರೆ ಯಾವಾಗ ಬಾಯ್‌ಫ್ರೆಂಡ್ ಮಾಲೀಕನಿಗೆ ಗೊತ್ತಿಲ್ಲದಂತೆ ಸಿಸಿಟಿವಿ ಅಳವಡಿಸಿದ ಕಾರಣ ಈ ವಿಚಾರ ಬಯಲಾಗಿದೆ. ಸಿಸಿಟಿವಿಯಲ್ಲಿ 38 ವರ್ಷದ ಮನೆಯ ಮಾಲೀಕನ ಅಸಲಿಯತ್ತ ಬಹಿರಂಗವಾಗುತ್ತಿದ್ದಂತೆ, ಯುವತಿ ಹಾಗೂ ಬಾಯ್‌ಫ್ರೆಂಡ್ ಮಾಲೀಕನ ಮನೆಗೆ ತೆರಳಿ ಮಾಲೀಕ ಪತ್ನಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಮಾಲೀಕನ ಮನೆಯಲ್ಲಿ ಕೋಲಾಹಲವೇ ಎದ್ದಿದೆ. ಇತ್ತ ಕಡೆ ಯುವತಿ ಮನೆ ಖಾಲಿ ಮಾಡಿ ಬೇರೋಂದು ಮನೆಗೆ ತೆರಳಿದ್ದಾಳೆ.