Home Breaking Entertainment News Kannada Rakshith Shetty : ಕಿರಿಕ್ ಪಾರ್ಟಿ -2 ಯಾವಾಗ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ...

Rakshith Shetty : ಕಿರಿಕ್ ಪಾರ್ಟಿ -2 ಯಾವಾಗ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ರಕ್ಷಿತ್ ಶೆಟ್ಟಿ!!!

Hindu neighbor gifts plot of land

Hindu neighbour gifts land to Muslim journalist

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಾಲೇಜು ಯುವಕರ ನೆಚ್ಚಿನ ಸಿನಿಮಾ ಆಗಿಬಿಟ್ಟಿತ್ತು. ಎಲ್ಲಾರ ಬಾಯಲ್ಲೂ ಆ ಸಿನಿಮಾ ಹಾಡೇ ಗುನುಗುತ್ತಿತ್ತು. ಸಖತ್ ಸದ್ದು ಮಾಡಿರುವ ಈ ಸಿನಿಮಾ ಇತ್ತೀಚೆಗೆ 6 ವರ್ಷಗಳನ್ನು ಪೂರೈಸಿದೆ. ಆದರೆ ಇದೀಗ ಅಭಿಮಾನಿಗಳು ಕಿರಿಕ್ ಪಾರ್ಟಿ -1 ಆಯ್ತು, ಕಿರಿಕ್ ಪಾರ್ಟಿ-2 ಯಾವಾಗ? ಅಂತ ಪ್ರಶ್ನೆ ಕೇಳ್ತಾ ಇದ್ದಾರೆ. ಸದ್ಯ ಈ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

‘ಕಿರಿಕ್ ಪಾರ್ಟಿ’ ನಂತರದ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ ಅದ್ಭುತ ಸಕ್ಸಸ್ ಕಂಡಿದ್ದು, ಎಲ್ಲರ ಮನಗೆದ್ದಿರುವ ಚಿತ್ರವಾಗಿದೆ. ಸದ್ಯ ಅಭಿಮಾನಿಗಳ ಒಂದೇ ಪ್ರಶ್ನೆ ‘ಕಿರಿಕ್‌ ಪಾರ್ಟಿ-2′ ಯಾವಾಗ? ಈ ಪ್ರಶ್ನೆ ರಕ್ಷಿತ್‌ ಶೆಟ್ಟಿ ಅವರಿಗೆ ಎಲ್ಲಿ ಹೋದರೂ ಎದುರಾಗುತ್ತಿತ್ತಂತೆ. ಹಾಗಾಗಿ ರಕ್ಷಿತ್‌ ಶೆಟ್ಟಿ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ‘ಕಿರಿಕ್‌ ಪಾರ್ಟಿ-2′ ಮಾಡುವ ಯಾವ ಯೋಚನೆ ಇಲ್ಲ ಎಂದಿದ್ದು, ಜೊತೆಗೆ ತಮ್ಮ ಮುಂದಿನ ಚಿತ್ರಗಳ ಕುರಿತು ಅಪ್‌ಡೇಟ್ಸ್‌ ನೀಡಿದ್ದಾರೆ.

ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆ ಚಿತ್ರದ ನಂತರ ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ಮೂಡಿಬರುವ “ರಿಚರ್ಡ್‌ ಆ್ಯಂಟನಿ” ಚಿತ್ರಕ್ಕೆ ರಕ್ಷಿತ್ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ನಟನೆ, ನಿರ್ದೇಶನದ ಜವಾಬ್ದಾರಿಯನ್ನು ರಕ್ಷಿತ್ ಶೆಟ್ಟಿ ಹೊತ್ತಿದ್ದು, ಈಗಾಗಲೇ ಈ ಸಿನಿಮಾದ ಫ‌ಸ್ಟ್‌ಲುಕ್‌ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ.

“ರಿಚರ್ಡ್‌ ಆ್ಯಂಟನಿ” ನಂತರ ರಕ್ಷಿತ್‌ “ಪುಣ್ಯಕೋಟಿ” ಮತ್ತು “ಎಂ2ಎಂ” (ಮಾರ್ನಿಂಗ್‌ ಟು ಮೋಕ್ಷ) ಚಿತ್ರ ಮಾಡಲಿದ್ದಾರೆ. ಒಟ್ಟಾರೆ ರಕ್ಷಿತ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳ ನಂತರ “ಕಿರಿಕ್‌ ಪಾರ್ಟಿ-2” ಮಾಡಲಿದ್ದಾರೆ. ಈ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತರಲಿದ್ದಾರೆ ಎಂದಿದ್ದಾರೆ.

ಇನ್ನು ಇದೀಗ ಬಿಡುಗಡೆಗೆ ಸಿದ್ಧವಾಗಿರುವ “ಸಪ್ತಸಾಗರದಾಚೆ ಎಲ್ಲೋ” ಚಿತ್ರ ಲವ್‌ಸ್ಟೋರಿಯಿಂದ ಕೂಡಿದೆ. ಈ ಚಿತ್ರದಲ್ಲಿ ರಕ್ಷಿತ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್‌ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವಾಗಿದ್ದು, ಹೇಮಂತ್‌ ಕುಮಾರ್‌ ನಿರ್ದೇಶನ ಹಾಗೂ ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್‌ ಬಣ್ಣ ಹಚ್ಚಿದ್ದಾರೆ.