Home Interesting Raksha Bandhan Gift: ಅಣ್ಣನಿಗೆ ಕಿಡ್ನಿ ದಾನ ಮಾಡಿ ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ...

Raksha Bandhan Gift: ಅಣ್ಣನಿಗೆ ಕಿಡ್ನಿ ದಾನ ಮಾಡಿ ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ ನೀಡಿದ ಸಹೋದರಿ!

Hindu neighbor gifts plot of land

Hindu neighbour gifts land to Muslim journalist

Raksha Bandhan Gift: ಅಣ್ಣ ತಂಗಿಯ ಬಂಧ ನೂರು ಜನುಮಗಳ ಅನುಬಂಧ ಎನ್ನುವ ಹಾಗೆ ರಕ್ಷಾ ಬಂಧನದ ಶುಭ ಗಳಿಗೆಯಲ್ಲಿ ಅಣ್ಣ ತಂಗಿಯ ಅವಿನಾಭಾವ ಸಂಬಂಧದ ಕಥೆಯೊಂದು ಮುನ್ನಲೆಗೆ ಬಂದಿದೆ. ಅಣ್ಣನಿಗೆ(Brother)ತಂಗಿಯೊಬ್ಬಳು(Sister )ಎಂದಿಗೂ ಮರೆಯಲಾಗದ ಅಮೂಲ್ಯ ಉಡುಗೊರೆ(Raksha Bandhan Gift) ನೀಡಿದ್ದಾಳೆ.

ರಕ್ಷಾಬಂಧನದಂದು ಸಹೋದರಿಯರು ಅಣ್ಣಂದಿರಿಗೆ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯುವುದು ಕ್ರಮ. ಈ ವೇಳೆ ಅಣ್ಣನು ತನ್ನ ಸಹೋದರಿಯ ರಕ್ಷಣೆ ಮಾಡುವ ವಾಗ್ದಾನ ನೀಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಕ್ಷಾ ಬಂಧನಕ್ಕೆ ಸಹೋದರಿಯೊಬ್ಬಳು ತನ್ನ ಅಣ್ಣನಿಗೆ ಕಿಡ್ನಿ ದಾನ ಮಾಡುವ ಮೂಲಕ ಅಣ್ಣನಿಗೆ ಜೀವದಾನ ಮಾಡಿದ್ದಾಳೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹರ್ಷೇಂದ್ರ ಎಂಬವರಿಗೆ ಸಹೋದರಿ ಪ್ರಿಯಾಂಕಾ ಕಿಡ್ನಿ ದಾನ ಮಾಡಿದ್ದಾಳೆ.

ಹರ್ಷೇಂದ್ರ ಹಾಗೂ ಸಹೋದರಿ ಪ್ರಿಯಾಂಕ ಅವರು ದೆಹಲಿಯ ನಿವಾಸಿಗಳಾಗಿದ್ದು, ಹರ್ಷೆಂದ್ರ ಅವರು ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರಂತೆ. 2022ರ ವೇಳೆಗೆ ಹರ್ಷೇಂದ್ರ ಅವರಿಗೆ ಆಯಾಸ ಹಾಗೂ ವಿವಿಧ ರೀತಿಯ ಅನಾರೋಗ್ಯ ಸಮಸ್ಯೆ ಉಂಟಾಗಿ ವೈದ್ಯಕೀಯ ತಪಾಸಣೆ ಮಾಡಿಸಿದಾಗ ವೈದ್ಯರು ಕಿಡ್ನಿ ವೈಫಲ್ಯವಾಗಿದ್ದು(Kidney Failure)ಕೊನೆಯ ಹಂತದಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಒಳಗಾದ ಹರ್ಷೇಂದ್ರ ಅವರು ನಿಯಮಿತವಾಗಿ ಡಯಾಲಿಸಿಸ್ಗೆ ಚಿಕಿತ್ಸೆ ಪಡೆಯಬೇಕಾಗಿ ಬಂತು. ಆರೋಗ್ಯ ತೀವ್ರ ಹದಗೆಟ್ಟು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರ ಜೊತೆಗೆ ನಿರಂತರ ರಜೆ ಮಾಡಲು ಕೂಡ ಆಗುತ್ತಿರಲಿಲ್ಲ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗುತ್ತಾ ಹರ್ಷೇಂದ್ರ ಆರೋಗ್ಯ ಹೆಚ್ಚು ಹದಗೆಟ್ಟಿದೆ.

ಇದರಿಂದ ನೊಂದ ಹರ್ಷೇಂದ್ರ ಅವರ ಸಹೋದರಿ ಪ್ರಿಯಾಂಕ ಅಣ್ಣನಿಗೆ ಒಂದು ಕಿಡ್ನಿಯನ್ನು ನೀಡಲು ನಿರ್ಧಾರ ಮಾಡಿದ್ದು, ಹೀಗಾಗಿ, ಹರ್ಷೇಂದ್ರ ಅವರಿಗೆ ಸಹೋದರಿ ಪ್ರಿಯಾಂಕಾಳ ಕಿಡ್ನಿಯನ್ನು ಅಳವಡಿಸಲಾಗಿದೆಯಂತೆ. ನವದೆಹಲಿಯ ಪ್ರಿಮಸ್ ಆಸ್ಪತ್ರೆಯಲ್ಲಿ (Hospital)ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಸದ್ಯ ಹರ್ಷೇಂದ್ರ ಅವರು ಸಂಪೂರ್ಣ ಗುಣಮುಖರಾಗಿದ್ದಾರಂತೆ. ಈ ದುಬಾರಿ ದುನಿಯಾದಲ್ಲಿ ಸಂಬಂಧಗಳಿಗೆ ಬೆಲೆ ಕೊಡುವವರೆ ವಿರಳ! ಅದರಲ್ಲೂ ಹಣ ಕೊಡಬೇಕಾದ ಪರಿಸ್ಥಿತಿ ಬಂದಾಗ ಹಿಂದೆ ಮುಂದೆ ನೋಡುವವರೆ ಹೆಚ್ಚು! ಇದರ ನಡುವೆಯೂ ಅಣ್ಣನಿಗೆ ತನ್ನ ಕಿಡ್ನಿ ದಾನ ಮಾಡುವ ಮೂಲಕ ತಂಗಿ ಅಣ್ಣನ ಕುಟುಂಬದ ಖುಷಿಗೆ ಕಾರಣವಾಗಿದ್ದಾಳೆ.