Home Interesting Rail Ticket Price During 1947 | ಪಾಕಿಸ್ತಾನದಿಂದ ಭಾರತಕ್ಕೆ ಬರಲು 1947 ರಲ್ಲಿ ಕೊಂಡ...

Rail Ticket Price During 1947 | ಪಾಕಿಸ್ತಾನದಿಂದ ಭಾರತಕ್ಕೆ ಬರಲು 1947 ರಲ್ಲಿ ಕೊಂಡ ರೈಲು ಟಿಕೆಟ್ ವೈರಲ್ : ಅಂದು ಒಂದು ಟಿಕೆಟ್ ಬೆಲೆ ಎಷ್ಟಿದ್ದಿರಬಹುದು ಊಹಿಸಿ ?!

Hindu neighbor gifts plot of land

Hindu neighbour gifts land to Muslim journalist

ನಿನ್ನೆ ತಾನೇ 90 ವರ್ಷದ ಹಳೆಯ, ಅಂದರೆ 1933 ರಲ್ಲಿ ಕೊಂಡುಕೊಂಡ ಸೈಕಲ್ ಒಂದರ ಸೇಲ್ ಬಿಲ್ ವೈರಲ್ ಆಗಿತ್ತು. ಇವತ್ತು ಭಾರತಕ್ಕೆ ಸ್ವತಂತ್ರ ಸಿಕ್ಕ ಕಾಲದ ಹಳೆಯ ರೈಲು ಟಿಕೆಟ್ ಒಂದು ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸೈಕಲ್ ಮತ್ತು ರೈಲು – ಎರಡೂ ಸುದ್ದಿಗಳು ಭರಪೂರ ವೇಗ ಪಡೆದುಕೊಂಡು ವೈರಲ್ ಆಗಿ ಓಡುತ್ತಿವೆ.

ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸಲು ಈ ಟಿಕೆಟ್ ಖರೀದಿ ಆಗಿದೆ. ಒಟ್ಟು ಒಂಬತ್ತು ಮಂದಿಗೆ ಈ ಟಿಕೆಟ್ ನೀಡಲಾಗಿದೆ. ಈ ಟಿಕೆಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇಂತಹ ಹಳೆಯ ಟಿಕೆಟ್‌ಗಳು ಮತ್ತು ಬೆಲೆಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಆಗ ಒಂಬತ್ತು ಜನರ ಟಿಕೆಟ್‌ಗೆ ಕೇವಲ 36 ರೂಪಾಯಿ ಮತ್ತು 9 ಅಣೆಗಳನ್ನು ವಿಧಿಸಲಾಗುತ್ತಿತ್ತು. ಜನರು ಇದನ್ನು ಇಂದಿನ ಟಿಕೆಟ್ ದರದೊಂದಿಗೆ ಹೋಲಿಸುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆ ಟಿಕೆಟ್ ಅನ್ನು 17-09-1947 ರಂದು ಕೊಂಡು ಕೊಳ್ಳಲಾಗಿತ್ತು.

ಆವತ್ತು ಪಾಕಿಸ್ತಾನದ ರಾವಲ್ಪಿಂಡಿಯಿಂದ ಮತ್ತು ಅಮೃತಸರಕ್ಕೆ ಬರಲು ಒಟ್ಟು ಒಬ್ಬರಿಗೆ 4 ರೂಪಾರಿಯ ಟಿಕೆಟ್ ಇತ್ತು. ಅವತ್ತಿನಿಂದ ಇವತ್ತಿಗೆ 75 ವರ್ಷಗಳೇ ಕಳೆದುಹೋಗಿವೆ. ಸುಮಾರು ಮುನ್ನೂರ ಮೂವತ್ತು ಕಿಲೋಮೀಟರ್ಗಳ ಆ ಪ್ರಯಾಣಕ್ಕೆ ಈಗ ಎಷ್ಟು ಮೊತ್ತದ ಟಿಕೇಟಿ ಇರಬಹುದು ಎಂದು ತಿಳುದುಕೊಳ್ಳುವ ಕುತೂಹಲ ಬೇಡವೇ ಬೇಡ. ಕಾರಣ, ರಾವಲಪಿಂಡಿ ಪಾಕಿಸ್ತಾನದಲ್ಲಿದ್ದು, ರಾಷ್ಟ್ರ ವಿಭಜನೆಯ ನಂತರ ಭಾರತದ ಜತೆ ನೇರ ಟ್ರೈನುಗಳ ಓಡಾಟವೇ ಇಲ್ಲ.

ಈ ರೈಲ್ ಟಿಕೆಟ್ ಅನ್ನು ಪಾಕಿಸ್ತಾನ್ ರೈಲ್ ಲವರ್ಸ್ ಎಂಬ ಹೆಸರಿನ ಪೇಜ್ ಫೇಸ್‌ಬುಕ್‌ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಆ ಟಿಕೆಟ್‌ನ ಚಿತ್ರವನ್ನು ಹಂಚಿಕೊಂಡ ಪಾಕಿಸ್ತಾನ್ ರೈಲ್ ಲವರ್ಸ್, “ಸ್ವಾತಂತ್ರ್ಯದ ನಂತರ 17-09-1947 ರಂದು 9 ಜನರಿಗೆ, ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸಲು 36 ರೂಪಾಯಿಗಳು ಮತ್ತು 9 ಆಣೆ ವೆಚ್ಚದ ರೈಲು ಟಿಕೆಟ್‌ನ ಚಿತ್ರ. ಬಹುಶಃ ಅಂದು ಒಂದು ಕುಟುಂಬವು ಭಾರತಕ್ಕೆ ವಲಸೆ ಬಂದಿತು.” ಎಂದು ಬರೆದಿದೆ. ಈ ವೈರಲ್ ರೈಲ್ ಟಿಕೆಟ್ಟಿನದೊಂದಿಗೆ ಹಳೆಯ ಸ್ವಾತಂತ್ರೋತ್ತರದ ತಕ್ಷಣದ ದಿನಗಳ ಇತಿಹಾಸ ನೆನಪಾಗುತ್ತಿದೆ. ಯಾರೋ ಪುಣ್ಯಾತ್ಮರು ಅಂದಿನ ನೆನಪುಗಳನ್ನು ಮುಂದಿನ ತಲೆಮಾರಿಗೆ ನೆನಪಿಸಲೇನೋ ಎಂಬಂತೆ ರೈಲ್ ಟಿಕೆಟ್ ಅನ್ನು ಭದ್ರವಾಗಿ ತಮ್ಮ ಕಬ್ಬಿಣದ ಟ್ರಂಕ್ ನಲ್ಲಿ ಕಾಪಾಡಿಟ್ಟುಕೊಂಡಿದ್ದಾರೆ. ಇಂಟರ್ನೆಟ್ ಜಮಾನ ಅದನ್ನು ಈಗ ದೇಶವಿದೇಶಕ್ಕೆ ತಲುಪಿಸಿದೆ.