Home Interesting Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ...

Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ ಬಾಗಿಲು ಮುಚ್ಚಿದ್ದೇಕೆ? ಒಳಗೆ ಇರುವುದಾದ್ರೂ ಏನು?

Puri

Hindu neighbor gifts plot of land

Hindu neighbour gifts land to Muslim journalist

Puri: ಸುಮಾರು 46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇವಾಲಯದ (Puri Jagannath Temple) ರತ್ನ ಭಂಡಾರದ ಬಾಗಿಲು ತೆರೆದಿದೆ. ಈ ಮೂಲಕ ಹಲವು ವರ್ಷಗಳಿಂದ ಭಕ್ತರಲ್ಲಿ ಹಾಗೂ ದೇಗುಲದ ನಿಗೂಢ ಕೋಣೆಯಲ್ಲಿ ಅಡಗಿರುವ ಕುತೂಹಲಗಳಿಗೆ ತೆರೆ ಬೀಳಲಿವೆ.

Udupi: ಬಾರ್‌ ಮಾಲೀಕನ ಮನೆಯಲ್ಲಿ ಅಗ್ನಿ ಅವಘಢ-ದಂಪತಿ ಆಸ್ಪತ್ರೆಗೆ ದಾಖಲು

ಅಂದಹಾಗೆ ಹಲವರಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ ಬರೋಬ್ಬರಿ 46 ವರ್ಷಗಳ ನಂತರ ಏಕೆ ಪುರಿ(Puri) ದೇವಾಲಯದ ಖಜಾನೆ ತೆರೆಯಲಾಗುತ್ತಿದೆ? ಅದೂ ಕೂಡ ಇದ್ದಕ್ಕಿದ್ದಂತೆ ಸಮಿತಿ ರಚಿಸಿ? ಇಷ್ಟು ವರ್ಷ ಅದನ್ನು ತೆರೆಯಲಿಲ್ಲ ಏಕೆ? ತೆರೆಯಲು ಆಗದಿದ್ದಕ್ಕೆ ಕಾರಣವೇನು? 46 ವರ್ಷಗಳ ಹಿಂದೆ ಏನೇನಾಗಿತ್ತು? ಎಂಬುದು. ಹಾಗಿದ್ರೆ ಅದೆಲ್ಲದಕ್ಕೂ ಇಲ್ಲಿದೆ ಉತ್ತರ.

ಅಂದು ನಡೆದದ್ದೇನು?
1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ(Odisha government) ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು.

ಅಲ್ಲದೆ 1979ರ ಬಳಿಕ ಹಲವು ಬಾರಿ ರತ್ನಭಂಡಾರದ ಬಾಗಿಲು ತೆರೆದು ದಾಸ್ತಾನು ಲೆಕ್ಕ ಹಾಕುವ ಪ್ರಯತ್ನಗಳು ನಡೆದವಾದರೂ ಆ ಯಾವ ಪ್ರಯತ್ನಗಳು ಯಶಸ್ವಿಯಾಗಿರಲಿಲ್ಲ. 2018ರ ಎಪ್ರಿಲ್‌ನಲ್ಲಿ ಒಡಿಶಾ ಹೈಕೋರ್ಟ್‌ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 16 ಮಂದಿಯ ಸಮಿತಿ ರತ್ನಭಂಡಾರದ ಪ್ರವೇಶಕ್ಕೆ ಮುಂದಾದರೂ ಒಳಗಿನ ಚೇಂಬರ್‌ನ ಬೀಗದ ಕೀ ಸಿಗದ ಕಾರಣ ಪ್ರವೇಶ ವಿಫ‌ಲವಾಯಿತು. ಪುರಿಯ ಜಿಲ್ಲಾಧಿಕಾರಿ ಕೀ ತಂದಿರಲಿಲ್ಲ. ಕೀ ಕಳೆದು ಹೋದ ಸಂಗತಿ ಕೋಟ್ಯಂತರ ಜಗನ್ನಾಥನ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಒಳ ಭಂಡಾರಕ್ಕೆ 3 ಕೀಗಳಿದ್ದು ಒಂದು ಪುರಿಯ ಗಜಪತಿ (ದೊರೆ), ಇನ್ನೊಂದು ದೇಗುಲ ಆಡಳಿತ ಮಂಡಳಿ, ಮತ್ತೂಂದು ದೇಗುಲ ಸೇವಕರ ಬಳಿ ಇತ್ತು. ಆದರೆ 1963ರ ಪುರಿಯ ಗಜಪತಿ ದೇಗುಲ ಹಕ್ಕು ಸ್ವಾಮ್ಯದ ಕೇಸ್‌ ಸೋತ ಬಳಿಕ ತನ್ನ ಬಳಿ ಇದ್ದ ಕೀಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು ಎನ್ನಲಾಗಿದೆ.

ಚುನಾವಣ ವಿಷಯವಾದ ರತ್ನಭಂಡಾರ:
ಬಿಜೆಪಿ 2024ರ ಸಾರ್ವತ್ರಿಕ ಮತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ(Vidhana Sabhe) ರತ್ನ ಭಂಡಾರದ ಬೀಗದ ಕೀ ಕಳೆದು ಹೋದ ಸಂಗತಿಯನ್ನೇ ಹೈಲೈಟ್‌ ಮಾಡಿತು. ಪ್ರಧಾನಿ ನರೇಂದ್ರ ಮೋದಿ(PM modi) ಮತ್ತು ಗೃಹ ಸಚಿವ ಅಮಿತ್‌ ಶಾ ಪ್ರತೀ ಸಭೆಯಲ್ಲೂ ಇದೇ ವಿಚಾರ ಮುಂಚೂಣಿಗೆ ತಂದರು. ಜತೆಗೆ ಪ್ರಭು ಜಗನ್ನಾಥನ ಆಶೀರ್ವಾದವಿದ್ದರೆ ಅಧಿಕಾರ ಹಿಡಿಯುವುದಾಗಿ ಘೋಷಿಸಿದರು. ಕೊರೊನಾ ಕಾಲದಲ್ಲಿ ಮುಚ್ಚಿದ್ದ ಶ್ರೀ ಜಗನ್ನಾಥ ಮಂದಿರದ ಮೂರು ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿದರು. ಅದರಂತೆ ಒಡಿಶಾದಲ್ಲಿ ಎರಡು ದಶಕಗಳ ಬಳಿಕ ಆಡಳಿತಾರೂಢ ಬಿಜೆಡಿ ಸೋಲುಂಡು ಬಿಜೆಪಿ ಅಧಿಕಾರಕ್ಕೆ ಏರಿತು. ಈಗಾಗಲೇ ದೇವಸ್ಥಾನದ ಎಲ್ಲ ನಾಲ್ಕು ಬಾಗಿಲುಗಳನ್ನು ತೆರೆದಿದ್ದು ಅದರ ಮುಂದುವರಿದ ಭಾಗವಾಗಿ ರತ್ನಭಂಡಾರದ ಬಾಗಿಲು ತೆರೆದು ಅಲ್ಲಿನ ದಾಸ್ತಾನು ಲೆಕ್ಕ ಹಾಕಲು ಒಡಿಶಾ ಬಿಜೆಪಿ ಸರಕಾರ ಮುಂದಾಗಿದೆ.

ಎಲ್ಲಿದೆ ಈ ಭಂಡಾರ?
ಪುರಿ ಜಗನ್ನಾಥ ದೇವಸ್ಥಾನದ ಉತ್ತರ ಭಾಗದ ಜಗನ್ಮೋಹನ ಎಂಬ ಪ್ರದೇಶದಲ್ಲಿ ಈ ರತ್ನ ಭಂಡಾರವಿದ್ದು ದೇವಾಲಯದ ಮಾದರಿಯನ್ನು ಹೊಂದಿದೆ. ಇದು 11.78 ಮೀಟರ್‌ ಎತ್ತರವಿದ್ದು ಇದರಲ್ಲಿ ಹೊರ ಭಂಡಾರ (ಬಾಹರ್‌ ಭಂಡಾರ್‌), ಒಳ ಭಂಡಾರ (ಭೀತರ್‌ ಭಂಡಾರ್‌) ಎಂಬ ಗೋಪುರಗಳಿವೆ. ಇದರಲ್ಲಿ 5 ಚೇಂಬರ್‌ಗಳಿದ್ದು ಹೊರ ಭಂಡಾರಕ್ಕಿಂತ ಒಳ ಭಂಡಾರ ವಿಶಾಲವಾಗಿದೆ.

ಈ ಚಿನ್ನಾಭರಣ ನೀಡಿದ್ದು ಯಾರು?
ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್‌ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.

RSS – PM Modi: RSS ಅನ್ನು ದೂರವಿಡಲು ಮೋದಿ ಮಾಡಿದ್ದಾರಾ ಪ್ಲಾನ್ ?!