Home Interesting ಜಸ್ಟ್ 500 ಪೇ ಮಾಡಿ ಪಡೆಯಿರಿ ಜೈಲು ಅನುಭವ | ನಿಮಗೆ ಜೈಲು ಶಿಕ್ಷೆ ಯೋಗವಿದೆ...

ಜಸ್ಟ್ 500 ಪೇ ಮಾಡಿ ಪಡೆಯಿರಿ ಜೈಲು ಅನುಭವ | ನಿಮಗೆ ಜೈಲು ಶಿಕ್ಷೆ ಯೋಗವಿದೆ ಎಂದು ಜ್ಯೋತಿಷಿ ಹೇಳಿದ್ರೆ ಇಲ್ಲಿಗೆ ಹೋಗಿ!

Hindu neighbor gifts plot of land

Hindu neighbour gifts land to Muslim journalist

ಕೆಲವೊಂದಷ್ಟು ಜನರಿಗೆ ಜೈಲು ವಾಸದ ಅನುಭವ ಮಾಡಬೇಕು ಎಂದು ಅನಿಸಿರುತ್ತೆ. ಹೇಗಿರುತ್ತೆ ಅಲ್ಲಿನ ವಾತಾವರಣ, ಜನ, ಊಟ ಈತರ ಒಂದೊಂದೇ ಆಲೋಚನೆಗಳು ಬಂದಿರುತ್ತೆ. ಇಂತವರಿಗಾಗಿ ಇಲ್ಲೊಂದು ಕಡೆ ಜೈಲು ಅನುಭವವನ್ನು ಮಾಡಲು ಅವಕಾಶ ಒಂದಿದೆ. ಜಸ್ಟ್ 500 ಪೇ ಮಾಡಿದ್ರೆ ಆಯ್ತು, ಫುಲ್ ಅನುಭವ ಮಾಡಿಕೊಂಡು ಬರಬಹುದು.

ಹೌದು. ಉತ್ತರಾಖಂಡ್​​ನ ಜೈಲು ಆಡಳಿತ ಹೊಸ ಆಫರ್ ಒಂದನ್ನು ನೀಡಿದೆ. ಅದು 500 ರೂಪಾಯಿಗೆ ಒಂದು ದಿನ ಜೈಲಿನಲ್ಲಿರಲು ಅವಕಾಶ ಮಾಡಿಕೊಡುತ್ತಿದೆ. ಈ ಹಲ್ದ್ವಾನಿ ಕಾರಾಗೃಹವನ್ನು 1903ರಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಪ್ರವಾಸಿ ಖೈದಿಗಳೆಂದು ಉಪಚಾರ ಮಾಡಲಾಗುತ್ತದೆ.

ಇದೊಂದು ಹಳೆಯ ಜೈಲಾಗಿದ್ದು, ಪ್ರಸ್ತುತ ಇಲ್ಲಿ ಖೈದಿಗಳನ್ನು ಇರಿಸುವುದಿಲ್ಲ. ಈ ಜೈಲನ್ನು ಪ್ರವಾಸಿಗರಿಗೆ ತಂಗಲು ಬೇಕಾದ ಮಾದರಿಯಲ್ಲಿ ಲಾಡ್ಜ್​​​ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಇಲ್ಲಿ ಉಳಿದುಕೊಳ್ಳಲು ಬರುವವರಿಗೆ ಕಾರಾಗೃಹದ ಅನುಭವ ಆಗುವಂತಹ ವ್ಯವಸ್ಥೆ ರೂಪಿಸಲಾಗುತ್ತದೆ.

ಹಿರಿಯ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ ಜೈಲಿನಲ್ಲಿ ಉಳಿದುಕೊಳ್ಳಲು ಬರಬಹುದು.  ಖೈದಿಗಳು ಧರಿಸುವಂತಹ ಬಟ್ಟೆ ಹಾಗೂ ಕಾರಾಗೃಹದ ಅಡುಗೆ ಕೋಣೆಯಲ್ಲೇ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ ಎಂದು ಜೈಲಿನ ಉಪ ಜೈಲು ಅಧೀಕ್ಷಕ ಸತೀಶ್ ಸುಖಿಜಾ ತಿಳಸಿದ್ದಾರೆ.

ಈ ಜೈಲಿನ ಕುರಿತು ರಾಜ್ಯದ ಜೈಲು ಆಡಳಿತ ಅಧಿಕಾರಿ ಮಾತನಾಡಿದ್ದು, ಈ ಜೈಲು ಜ್ಯೋತಿಷ್ಯರು ಬಂಧನ ಯೋಗವಿದೆ ಎನ್ನುವವರಿಗೆ ಸೂಕ್ತವಾಗಿದ್ದು, ನೀವಿನ್ನು ಚಿಂತಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಯಾಕಂದ್ರೆ, ಹೆಚ್ಚಿನವರಿಗೆ ಭವಿಷ್ಯ ತಿಳಿದುಕೊಳ್ಳೋ ಹುಚ್ಚು ಇರುತ್ತದೆ. ಈ ವೇಳೆ ಕೆಲವರಿಗೆ ಜ್ಯೋತಿಷ್ಯರು ನಿಮಗೆ ಜಾತಕದ ಪ್ರಕಾರ ಜೈಲು ಶಿಕ್ಷೆಗೆ ಒಳಗಾಗುತ್ತೀರಿ ಎಂದು ಹೇಳುತ್ತಾರೆ. ಇಂತವರು ಇಲ್ಲಿಗೆ ಬನ್ನಿ ಎಂದು ಹೇಳಿದ್ದಾರೆ.