Home Interesting Optical illusion : ಓದುಗರಿಗೊಂದು ಸವಾಲು : ಎಲೆಗಳ ನಡುವೆ ಸಿಲುಕಿಕೊಂಡಿರುವ ಕಪ್ಪೆಯನ್ನು ಹುಡುಕಬಲ್ಲಿರಾ?

Optical illusion : ಓದುಗರಿಗೊಂದು ಸವಾಲು : ಎಲೆಗಳ ನಡುವೆ ಸಿಲುಕಿಕೊಂಡಿರುವ ಕಪ್ಪೆಯನ್ನು ಹುಡುಕಬಲ್ಲಿರಾ?

Optical illusion

Hindu neighbor gifts plot of land

Hindu neighbour gifts land to Muslim journalist

Optical illusion : ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯುವ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡುವ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ (Optical illusion) ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿತ್ತು, ಓದುಗರನ್ನು ತಲೆಕೆಡಿಸಿಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಎಲೆಗಳೇ ತುಂಬಿ ಹೋಗಿರುವ ಚಿತ್ರದಲ್ಲಿ ಅಡಗಿ ಕೂತಿರೋ ಕಪ್ಪೆಯನ್ನು ಹುಡುಕುವುದು.

Gergely Dudás ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಈ ಫೋಟೋವನ್ನು ಟ್ವೀಟ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಖತ್​ ವೈರಲ್ ಆಗುತ್ತಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ. ಬರಿ ಎಲೆಗಳೇ ತುಂಬಿ ಹೋಗಿವೆ. ಹಚ್ಚಹಸಿರು, ತಿಳಿಹಸಿರು, ಹಳದಿ, ನೇರಳೆ ಬಣ್ಣದ ಎಲೆಗಳು ಎಲ್ಲೆಲ್ಲೂ ಕಾಣುತ್ತಿವೆ. ಆದರೆ ಇಷ್ಟೆಲ್ಲ ಎಲೆಗಳ ಮಧ್ಯೆ ಒಂದು ಕಪ್ಪೆ ಸಿಲುಕಿಕೊಂಡಿದೆ. ನಿಮ್ಮ ಕಣ್ಣು ಮತ್ತು ಬುದ್ಧಿಗೆ ಕೆಲಸ ಕೊಟ್ಟು ಆ ಕಪ್ಪೆಯನ್ನು 10 ನಿಮಿಷದಲ್ಲಿ ಹುಡುಕಿ.

10 ಸೆಕೆಂಡ್ ಸಮಯದಲ್ಲಿ ನಡೆಸಿದ್ದುಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದರೆ ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರಿ ಅಂತ ಒಪ್ಪಿಕೊಂಡರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನು ಗುರುತಿಸಲು ಆಗದೆ ಎಲ್ಲಿದೆ ಅಂತ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಕಂಡುಕೊಳ್ಳಿ. ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ.