Home Entertainment ಓದುಗರೇ ನಿಮಗೊಂದು ಸವಾಲು | ಬಂಡೆಗಳ ನಡುವೆ ಅಡಗಿ ಕೂತಿರೋ ಚಿರತೆಯನ್ನು ಪತ್ತೆ ಹಚ್ಚಬಲ್ಲಿರಾ?

ಓದುಗರೇ ನಿಮಗೊಂದು ಸವಾಲು | ಬಂಡೆಗಳ ನಡುವೆ ಅಡಗಿ ಕೂತಿರೋ ಚಿರತೆಯನ್ನು ಪತ್ತೆ ಹಚ್ಚಬಲ್ಲಿರಾ?

Hindu neighbor gifts plot of land

Hindu neighbour gifts land to Muslim journalist

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ.ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ನೀವು ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿರುವ ಚಿರತೆಯನ್ನು ಪತ್ತೆ ಹಚ್ಚಬೇಕಿದೆ.

ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ನೀವು ಬಂಡೆಗಳಿಂದ ತುಂಬಿರುವ ಪ್ರದೇಶವನ್ನು ನೋಡಬಹುದು. ಆದರೆ, ಆ ಫೋಟೋದ ಒಂದು ಭಾಗದಲ್ಲಿ ಚಿರತೆಯೊಂದು ಕುಳಿದಿದೆ. ಅದನ್ನು ಪತ್ತೆಹಚ್ಚುವುದು ನಿಮಗೆ ಚಾಲೆಂಜ್ ಆಗಿದೆ. ಬಂಡೆಗಳ ಬಣ್ಣ ಮತ್ತು ಚಿರತೆಯ ಬಣ್ಣಕ್ಕೆ ಕೊಂಚ ಸಾಮ್ಯತೆ ಇದೆ. ಒಂದನ್ನೊಂದು ಬೆರೆತು ಹೋಗಿವೆ. ಈ ಚಿತ್ರವನ್ನು ಸುಧೀರ್​ ಶಿವರಾಮ್​ ಎಂಬ ಛಾಯಚಿತ್ರಗಾರ ರಾಜಸ್ಥಾನದ ಬೇರಾ ಪ್ರದೇಶದಿಂದ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ಸೆರೆಹಿಡಿದಿದ್ದಾರೆ.

ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಚಿರತೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. 10 ಸೆಕೆಂಡ್​ ಸಮಯದಲ್ಲಿ ನೀವು ಚಿರತೆಯನ್ನು ಫೋಟೋದಲ್ಲಿ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಸರಿ ನಿಮ್ಮ ಟೈಮ್ ಮುಕ್ತಾಯ ಆಗಿದೆ. ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಚಿರತೆಯನ್ನು ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ.