Home Interesting 4 ಕೆಜಿ ತೂಕದ ಮಗುವಿಗೆ ಜನ್ಮವಿತ್ತಳಾ ಮಹಾತಾಯಿ | ಮೈಸೂರಲ್ಲೊಂದು ಅಪರೂಪದ ಘಟನೆ !

4 ಕೆಜಿ ತೂಕದ ಮಗುವಿಗೆ ಜನ್ಮವಿತ್ತಳಾ ಮಹಾತಾಯಿ | ಮೈಸೂರಲ್ಲೊಂದು ಅಪರೂಪದ ಘಟನೆ !

Feet of a newborn baby in the hands of parents. Happy Family oncept. Mum and Dad hug their baby's legs.

Hindu neighbor gifts plot of land

Hindu neighbour gifts land to Muslim journalist

ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಇದೀಗ, ಮೈಸೂರಿನ 24 ರ ಹರೆಯದ ಮಹಿಳೆ 4 ಕೆ.ಜಿ. ತೂಕದ ಹೆಣ್ಣು ಮಗುವಿಗೆ ಜನ್ಮ ವಿತ್ತ ಅಪರೂಪದ ಘಟನೆ ವರದಿಯಾಗಿದೆ.

ಜನನದ ಸಂದರ್ಭದಲ್ಲಿ ಸಾಮಾನ್ಯ ಮಗುವಿನ ತೂಕ ಸುಮಾರು 2.5 ರಿಂದ 3.5 ಕೆಜಿ ಇರುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಮಗುವಿನ ತೂಕ ಜನನ ದ ವೇಳೆ 4 ಕೆ.ಜಿ. ಇದ್ದದ್ದು ವೈದ್ಯ ತಂಡಕ್ಕೂ ಅಚ್ಚರಿ ಮೂಡಿಸಿದೆ. ವೈದ್ಯೋ ನಾರಾಯಣೋ ಹರಿಃ ಎಂಬಂತೆ ಎಷ್ಟೋ ಬಾರಿ ರೋಗಿ ವೈದ್ಯರನ್ನು ದೇವರಂತೆ ಕಾಣುವ ಪ್ರಕರಣಗಳಿವೆ.

ಇದು ಮಹಿಳೆಯ ಮೊದಲ ಗರ್ಭಾವಸ್ಥೆಯಾಗಿದ್ದು , ಆಸ್ಪತ್ರೆಗೆ ಅವರು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಗರ್ಭಾವಸ್ಥೆಯ ಪ್ರತಿ ಹಂತದಲ್ಲೂ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಗರ್ಭಿಣಿ ಮಹಿಳೆಯ ಆರೋಗ್ಯ ಸ್ಥಿತಿ ಸಹಜವಾಗಿ ಆರೋಗ್ಯವಾಗಿದ್ದರು ಎನ್ನಲಾಗಿದೆ. ಗರ್ಭಿಣಿ ಮಹಿಳೆಗೆ ಸಹಜವಾಗಿ ಎಲ್ಲರಿಗೆ ಕಂಡು ಬರುವಂತೆ ಒಂಬತ್ತನೇ ತಿಂಗಳ ಗರ್ಭಾವಸ್ಥೆಯಲ್ಲಿ ಸ್ವಾಭಾವಿಕ ಹೆರಿಗೆ ನೋವು ಕಂಡುಬಂದಿದೆ. ಹೀಗಾಗಿ, ಆ ಕೂಡಲೇ ಅತ್ಯಗತ್ಯ ವಾದ ಆರೈಕೆ ಮತ್ತು ಚಿಕಿತ್ಸೆ ಮೈಸೂರು ಆಸ್ಪತೆಯಲ್ಲಿ ನೀಡಲಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.

ಮಗುವಿಗೆ ಜನ್ಮ ನೀಡಿದ ಬಳಿಕ ನಿಯೋನಾಟಾಲಜಿಸ್ಟ್‌ಗಳು ಮತ್ತು ಮಕ್ಕಳ ವೈದ್ಯರ ತಂಡವು ಸ್ಥಿರತೆ ಮತ್ತು ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಹಿಳೆಯ ಮೇಲ್ವಿಚಾರಣೆ ಮಾಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಮಧ್ಯಮ ವೊಂದು ವರದಿ ಮಾಡಿದೆ. ಪ್ರಸೂತಿ ತಜ್ಞೆ ಡಾ.ಶ್ವೇತಾ ನಾಯಕ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಧುಮೇಹಿಯಲ್ಲದ ತಾಯಿಗೆ ಅಧಿಕ ತೂಕದ ಮಗು ಜನಿಸಿದ ಅಪರೂಪದ ಪ್ರಕರಣಗಳಲ್ಲಿ ಇದು ಒಂದು ಎಂದು ಉಲ್ಲೇಖಿಸಿದ್ದಾರೆ.

ಸಾಮಾನ್ಯವಾಗಿ ದೊಡ್ಡ ಶಿಶುಗಳನ್ನು ಹೊಂದುವುದು ಕುಟುಂಬದ ಲಕ್ಷಣವಾಗಿದೆ ಎಂದು ನಿಯೋನಾಟಾಲಜಿಸ್ಟ್ ಡಾ ಚೇತನ್ ಬಿ ಮಾಹಿತಿ ನೀಡಿದ್ದು, ” ಈ ಶಿಶುಗಳು ಕೆಲವೊಮ್ಮೆ ಜನ್ಮ ನೀಡುವ ಸಮಯದಲ್ಲಿ ಕೆಲವೊಂದು ಸಮಸ್ಯೆ ತಲೆದೋರುತ್ತವೆ. ಹೀಗಾಗಿ ಈ ಹೆರಿಗೆ ಮಾಡುವುದು ವೈದ್ಯ ತಂಡಕ್ಕೆ ಸವಾಲಾಗಿ ಪರಿಣಮಿಸಿತ್ತು. ಆದರೆ ನಮ್ಮ ಪ್ರಸೂತಿ ತಂಡವು ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡುವ ಮೂಲಕ ತಾಯಿ ಮಗುವಿನ ರಕ್ಷಣೆ ಮಾಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹೆರಿಗೆಯ ನಡೆಸಿದ ಮೂರನೇ ದಿನದಲ್ಲಿ ತಾಯಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಿರುವ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ.