Home Interesting Ex Lover : ಈ ಆಸಾಮಿಗೆ ಮದುವೆಯಾದರೂ ಹಳೆ ಪ್ರೇಯಸಿಯದ್ದೇ ಚಿಂತೆಯಂತೆ! ಹುಟ್ಟೋ ಮಗುವಿಗೆ...

Ex Lover : ಈ ಆಸಾಮಿಗೆ ಮದುವೆಯಾದರೂ ಹಳೆ ಪ್ರೇಯಸಿಯದ್ದೇ ಚಿಂತೆಯಂತೆ! ಹುಟ್ಟೋ ಮಗುವಿಗೆ ಆಕೆಯ ಹೆಸರಿಡಬೇಕೆಂಬ ಆಸೆಯಂತೆ!

EX lover

Hindu neighbor gifts plot of land

Hindu neighbour gifts land to Muslim journalist

Ex lover :ಹಲವರ ಜೀವನದಲ್ಲಿ ಪ್ರೀತಿ(Love), ಪ್ರೇಮಗಳಂತಹ ಪ್ರಸಂಗಗಳು ನಡೆದೇ ಇರುತ್ತವೆ. ಇದು ಪ್ರಾಯದ ಸಮಯದಲ್ಲಿ ಸರ್ವೇ ಸಾಮಾನ್ಯ. ಕೆಲವರು ಒಂದೇ ಸಂಬಂಧಕ್ಕೆ ಬೆಲೆ ಕೊಟ್ಟು ಕೊನೇವರೆಗೂ ಜೊತೆಯಲ್ಲಿದ್ದರೆ, ಇನ್ನು ಕೆಲವರು ಪದೇ ಪದೇ ತಮ್ಮ ಸಂಗಾತಿಯನ್ನು ಬದಲಾಯಿಸುತ್ತಿರುತ್ತಾರೆ. ಇದೇನೇ ಆಗಲಿ, ಎಷ್ಟೇ ಜನ ತಮ್ಮ ಬದುಕಲ್ಲಿ ಬರಲಿ, ಮೊದಲಾದ ಪ್ರೇಮವನ್ನು ಮರೆಯಲು ಸಾಧ್ಯವೇ? ಮೊದಲ ಆ ಭೇಟಿ, ಮಾತು, ನಗು, ಸಾಧ್ಯವಾಗಿದ್ದರೆ ಆಗಿರುವ ಮೊದಲ ಆ ಅಪ್ಪುಗೆ ಇವೆಲ್ಲವನ್ನು ಮರೆಯೋದು ಅಷ್ಟು ಸುಲಭವಲ್ಲ ಬಿಡಿ. ಆದ್ರೂ ಮದುವೆಯ ಬಳಿಕ ಹೇಗಾದರೂ ಇದನ್ನು ಮರೆಯಲೇ ಬೇಕು. ನೆನಪಾದರೂ ಅದನ್ನು ತೋರ್ಪಡಿಸದೆ ಮರೆಮಾಚಬೇಕು. ಇಲ್ಲವಾದರೆ ಗಂಡಾಂತರ ಕಟ್ಟಿಟ್ಪ ಬುತ್ತಿ!

ಆದ್ರೆ ಇಲ್ಲೊಬ್ಬ ಆಸಾಮಿಗೆ ಮದುವೆಯಾಗಿ, ಮಗುವಾದರೂ ತನ್ನ ಮಾಜಿ ಗೆಳತಿಯನ್ನು (Ex lover ) ಮರೆಯಲು ಆಗ್ತಿಲ್ಲವಂತೆ! ಅದಕ್ಕಾತ ಏನು ಮಾಡಿದ್ದಾನೆ ಗೊತ್ತಾ? ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾದ ಆ ವ್ಯಕ್ತಿಯೀಗ ತನ್ನ ಮಗುವಿಗೆ ಆಕೆಯದ್ದೇ ಹೆಸರಿ(Name)ಡುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದಾನೆ. ಹೌದು, ರೆಡ್ಡಿಟ್‌ನಲ್ಲಿ ಈ ಕುರಿತಾದ ಸ್ಟೋರಿಯೊಂದನ್ನು ಹಂಚಿಕೊಳ್ಳಲಾಗಿದ್ದು ಇದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ರೆಡ್ಡಿಟ್‌ನಲ್ಲಿ ತನ್ನ ಪೋಸ್ಟ್(Poste) ಹಂಚಿಕೊಂಡಿರುವ ಆ ವ್ಯಕ್ತಿ ‘ಖುಷಿಯ ವಿಚಾರವೆಂದರೆ ನಮಗೆ ಮಗುವಾಗುತ್ತಿದೆ. ಆದರೆ ಮಗು ಗಂಡೋ ಹೆಣ್ಣೋ ಎಂದು ನಮಗೆ ತಿಳಿದಿಲ್ಲ. ಆದರೂ ನಾವು ಮಗುವಿನ ಹೆಸರುಗಳ ಬಗ್ಗೆ ಯೋಚಿಸುತ್ತಿದ್ದೇವೆ. ಒಂದೆರಡು ರಾತ್ರಿಗಳ ಹಿಂದೆ ಈ ಬಗ್ಗೆ ಚರ್ಚಿಸಿದ್ದೇವೆ. ಮುಖ್ಯವಾದ ವಿಷಯವೆಂದ್ರೆ ನಾನೀಗ ಮದುವೆಯಾಗೋ ಮೊದಲು ಸುಮಾರು 6 ವರ್ಷಗಳ ಕಾಲ ಬೇರೆ ಗೆಳತಿಯನ್ನು ಹೊಂದಿದ್ದೆ. ದುರದೃಷ್ಟವಶಾತ್, ಅವಳು ತೀರಿಕೊಂಡಳು ಮತ್ತು ನಾನು ಸಂಪೂರ್ಣವಾಗಿ ಹತಾಶನಾದೆ. ಇನ್ನು ಅದರ ಬಗ್ಗೆ ಯೋಚಿಸುವುದು ನೋವಿನ ಸಂಗತಿ. ಆದರೆ ನನಗವಳು ಪದೇ ಪದೇ ನೆನಪಾಗುತ್ತಾಳೆ. ಹೀಗಾಗಿ ಅವಳ ನೆನಪಿಗಾಗಿ ನನ್ನ ಮಗುವಿಗೆ ಆಕೆಯ ಹೆಸರನ್ನೇ ಇಡಬೇಕೆಂದುಕೊಂಡಿದ್ದೇನೆ. ನಾನು ಸಹ ಆ ಹೆಸರನ್ನು(ನ್ಯಾನ್ಸಿ) ಪ್ರೀತಿಸುತ್ತೇನೆ ‘ ಎಂದು ಬರೆದುಕೊಂಡಿದ್ದಾನೆ.

ಅಲ್ಲದೆ ‘ನಾನು ನನ್ನ ಹೆಂಡತಿಗೆ ಈ ವಿಚಾರವನ್ನು ತಿಳಿಸಿದಾಗ ಅವಳು ಖುಷಿ ಪಡಲ್ಲಿಲ್ಲ. ಬದಲಿಗೆ ಬೇಸರಗೊಂಡು ನಿಮ್ಮ ಹಳೆಯ ಪ್ರೇಯಸಿಯ ಹೆಸರನ್ನು ನಮ್ಮಿಬ್ಫರ ಮಗಳಿಗಿಡುವುದು ಸೂಕ್ತವಲ್ಲವೆಂದು ಹೇಳಿದಳು. ಮಾಜಿ ಪ್ರೇಯಸಿಯ ಹೆಸರನ್ನು ಮಗುವಿಗೆ ಇಡುವುದು ಯಾಕೆ ಬೇಡ ಎಂದು ನನಗೆ ತಿಳಿದಿಲ್ಲ. ಇದರಿಂದ ಅವಳು ಮನಸಲ್ಲಿ ನೊಂದಿದ್ದಾಳೆಯೇ, ಸುರಕ್ಷಿತವಾಗಿಲ್ಲವೇ ಅಥವಾ ಗರ್ಭಾವಸ್ಥೆಯು ಅವಳಿಗೆ ಒತ್ತಡವನ್ನುಂಟುಮಾಡುತ್ತಿದೆಯೇ ಎಂದು ಗೊತ್ತಾಗುತ್ತಿಲ್ಲ. ಆದರೆ ನನಗೆ ಇದರಲ್ಲಿ ಯಾವುದೇ ತೊಂದರೆ ಕಾಣಿಸುತ್ತಿಲ್ಲ’ ಎಂದು ಆತ ಹೇಳಿದ್ದಾನೆ.

ಸದ್ಯ ತನ್ನ ಈಗಿನ ಸಂಸಾರದ ಕುರಿತು ಚಿಂತಿಸದೆ, ತೀರಿ ಹೋದ ಪ್ರೇಯಸಿಯ ಬಗ್ಗೆ ಚಿಂತಿಸುತ್ತಿರುವ, ಅದರಲ್ಲೂ ಅದನ್ನು ತನ್ನ ಹೆಂಡತಿ ಬಳಿ ಹೇಳಿಕೊಂಡಿರುವ ಈತನ ಧೈರ್ಯವನ್ನು ಮೆಚ್ಚಲೇ ಬೇಕು. ಸದ್ಯ ಈ ಪೋಸ್ಟ್ ನೋಡಿದ ನೆಟ್ಟಿಗರು ಈ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.