Home Interesting ಬಾನಿಗೂ ಹೂವಿಗೂ ಪೈಪೋಟಿ, ನೀ ಚಂದವೋ, ನಾ ಚಂದವೋ ! ಪ್ರಕೃತಿಯ ಅದ್ಭುತ ವೈಶಿಷ್ಟ್ಯ!

ಬಾನಿಗೂ ಹೂವಿಗೂ ಪೈಪೋಟಿ, ನೀ ಚಂದವೋ, ನಾ ಚಂದವೋ ! ಪ್ರಕೃತಿಯ ಅದ್ಭುತ ವೈಶಿಷ್ಟ್ಯ!

Hindu neighbor gifts plot of land

Hindu neighbour gifts land to Muslim journalist

Baby blue :ಪ್ರಕೃತಿ ಸೌಂದರ್ಯದ ಸೊಬಗು ನೋಡಲು ಯಾರಿಗೆ ತಾನೆ ಇಷ್ಟ ಇಲ್ಲ. ಪ್ರಕೃತಿಯ ರಮಣೀಯ ದೃಶ್ಯ ನೋಡಲು ಮನಸಿಗೆ ಏನೋ ಹಿತ ಅನಿಸುತ್ತೆ. ನೀವು ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ನೀಲಿ ಕುರುವಂಜಿ (kuruvanji ) ಅಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿರುವ ದೃಶ್ಯ ನೋಡಿರಬಹುದು. ಹಾಗೆಯೇ ಜಪಾನ್ (japan ) ನಲ್ಲಿ ಇದೇ ರೀತಿಯ ಹೂವೊಂದು ಇಡೀ ಬೆಟ್ಟವನ್ನೇ ನೀಲಿಯಾಗಿಸಿದೆ. ಆದರೆ ನೀಲಿ ಕುರವಂಜಿ ಇಲ್ಲಿ ನೆರಳೆಯಾಗಿತ್ತು.

ಹೌದು, ಜಪಾನ್ ನಲ್ಲಿ ಅದೇ ರೀತಿಯ ಹೂವೊಂದು ಸಂಪೂರ್ಣ ಆಕಾಶನೀಲಿ ಬಣ್ಣದಲ್ಲಿದ್ದು, ಇಡೀ ಬೆಟ್ಟಕ್ಕೆ ಆಕಾಶನೀಲಿಯ ರಂಗು ನೀಡಿದೆ. ಬೆಟ್ಟ ಪೂರ್ತಿ ನೀಲಿಯಾಗಿದ್ದು, ಬಾನಿಗೂ ಬೆಟ್ಟಕ್ಕೂ ವ್ಯತ್ಯಾಸ ತಿಳಿಯದಾಗಿದೆ. ಈ ಸುಂದರ ದೃಶ್ಯವನ್ನು ಸವಿಯಲು ಪ್ರವಾಸಿಗರು ಈ ಬೆಟ್ಟದತ್ತ ಹರಿದು ಬರುತ್ತಿದ್ದಾರೆ.

ಇಂತಹ ಮನೋಹರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ಅದಲ್ಲದೆ ಇದರ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಹರಿದು ಬರುತ್ತಿದ್ದಾರೆ . ಈ ಅಪೂರ್ವ ಸೌಂದರ್ಯದ ವಿಡಿಯೋವನ್ನು ಐಎಎಸ್ ಅಧಿಕಾರಿ ಹರಿ ಚಂದನ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದೊಂದು ಅದ್ಭುತ ಲೋಕ ಎಂದಿದ್ದಾರೆ. ಇನ್ನು ಕೆಲವರು ಇದು ಭೂಮಿ ಮೇಲೆ ಇರುವ ಸ್ವರ್ಗ ಎಂದು ಹೇಳಿದರೆ, ಇನ್ನೊಬ್ಬರು ನೀಲಿ ಎಸಳುಗಳ ಅಲೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಆಕಾಶ ಭೂಮಿಯ ಮೇಲೆ ಬಿದ್ದಿದೆ ಎಂದು ಹೇಳಿದ್ದಾರೆ.

ಅಂದಹಾಗೆ ಜಪಾನ್‌ನಲ್ಲಿ ಬೆಟ್ಟಕ್ಕೆ ನೀಲಿ ರಂಗು ನೀಡಿರುವ ಈ ಹೂವಿನ ಹೆಸರು ನೆಮೊಫಿಲ ಅಥವಾ ಬೇಬಿ ಬ್ಲು(nemophila or baby blue) , ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಜಪಾನ್ ರಾಜಧಾನಿ ಟೋಕಿಯೋ ಸಮೀಪದಲ್ಲಿರುವ ಈ ಬೆಟ್ಟ ಈ ಚೆರ್ರಿ ಹೂಗಳ ಅರಳುವಿಕೆಯಿಂದಾಗಿ ಆಕಾಶನೀಲಿ ಬಣ್ಣಕ್ಕೆ ತಿರುಗುತ್ತವೆ. ಅದಲ್ಲದೆ ಈ ಪಾರ್ಕ್‌ನಲ್ಲಿ ಋತುವಿಗೆ ತಕ್ಕಂತೆ ಬದಲಾಗುವ ಅನೇಕ ಹೂಗಳಿವೆ. ಚಳಿಗಾಲದಲ್ಲಿ ಇಲ್ಲಿ ಐಸ್ ರೋಸ್, ಟುಲಿಪ್ಸ್ (tulips), ಪೋಪ್ಪೀಸ್ ಹಾಗೂ ಗುಲಾಬಿ (rose )ಹೂಗಳು ಕಾಣಸಿಗುತ್ತವೆ. ಈ ಪಾರ್ಕ್‌ನಲ್ಲಿ ಜಾಯಿಂಟ್ ವೀಲ್‌ ರೀತಿ ಫೆರ್ರಿ ವೀಲ್ ಇದ್ದು, ಇದನ್ನೇರಿ ಸಮುದ್ರದಕ್ಕಿಂತ 100 ಅಡಿ ಎತ್ತರದಿಂದ ಈ ಸೊಗಸಾದ ಈ ಹೂದೋಟವನ್ನು ಕಾಣಬಹುದಾಗಿದೆ. ನೀಲಿ ಆಕಾಶ, ನೀಲಿ ಹೂಗಳು ನೀಲಿ ಸಮುದ್ರವನ್ನು ಇಲ್ಲಿ ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ನೆಮೊಫಿಲಿಯಾ ಹೂವು 3 ಸೆಂಟಿ ಮೀಟರ್ ದೊಡ್ಡದಾಗಿದೆಯಂತೆ.