Home Interesting ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಗೀಚಿದ ಲಂಡನ್ ಬೆಕ್ಕು ; ಅಷ್ಟಕ್ಕೂ ಇದು ಮಾಡಿದ...

ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಗೀಚಿದ ಲಂಡನ್ ಬೆಕ್ಕು ; ಅಷ್ಟಕ್ಕೂ ಇದು ಮಾಡಿದ ಸಾಧನೆಯಾದ್ರು ಏನು?

Hindu neighbor gifts plot of land

Hindu neighbour gifts land to Muslim journalist

ಗಿನ್ನೆಸ್ ದಾಖಲೆ ಎಂಬುದು ಅಷ್ಟು ಸುಲಭದ ಮಾತಲ್ಲ. ಇಂತಹ ಅದ್ಭುತವಾದ ದಾಖಲೆಯ ಪುಟ ಸೇರಲು ದೊಡ್ಡ ಸಾಧನೆಯೇ ಮಾಡಿರಬೇಕು. ಯಾಕಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕವೇ ಈ ಗಿನ್ನಿಸ್ ದಾಖಲೆ ಪುಸ್ತಕ. ಪ್ರತಿ ವರ್ಷ ಪ್ರಕಟವಾಗುವ ಈ ಪುಸ್ತಕದಲ್ಲಿ ಮನುಷ್ಯ ಸಾಧನೆಗಳಲ್ಲದೆ, ಪ್ರಾಕೃತಿಕ ವಿಸ್ಮಯಗಳೂ ಕೂಡ ದಾಖಲಾಗತ್ತದೆ.

ಇಂತಹ ಅದ್ಭುತವಾದ ಪುಸ್ತಕದಲ್ಲಿ ಬೆಕ್ಕು ಕೂಡ ತನ್ನ ದಾಖಲೆಯನ್ನು ಬರೆದಿದೆ ಎಂದರೆ ನೀವು ನಂಬುತ್ತೀರಾ?.. ನಂಬಲೇಬೇಕು. ಅಷ್ಟಕ್ಕೂ ಮನೆಯಲ್ಲಿ ಕೊಟ್ಟಿದ್ದನ್ನು ತಿಂದುಕೊಂಡು ಬಿದ್ದುಕೊಂಡಿರುವ ಬೆಕ್ಕು, ಹೇಗೆ ಗಿನ್ನಿಸ್ ದಾಖಲೆ ಪಡೆಯಿತು ಎಂಬುದು ಸಾಮಾನ್ಯವಾಗಿ ಎಲ್ಲರ ತಲೆಗೂ ಬಂದಿರಬಹುದು. ಹಾಗಿದ್ರೆ, ಬನ್ನಿ ದಾಖಲೆ ಬರೆಯುವಂತಹ ಕೆಲಸ ಅದೇನು ಮಾಡಿತು ಎಂಬುದನ್ನು ಮುಂದಕ್ಕೆ ಓದಿ.

ಗಿನ್ನಿಸ್ ದಾಖಲೆ ಸೃಷ್ಟಿಸಿರುವುದು ಲಂಡನ್‌ನ ಫ್ಲಾಜಿ ಎಂಬ ಹೆಣ್ಣು ಬೆಕ್ಕು. ಇದು ಪ್ರಪಂಚದಲ್ಲೇ ಹೆಚ್ಚು ವರ್ಷ ಬದುಕುವ ಮೂಲಕ ದಾಖಲೆ ಬರೆದಿದೆ. ಸಾಮಾನ್ಯವಾಗಿ ಬೆಕ್ಕುಗಳು ಕೇವಲ 12 ರಿಂದ 18 ವರ್ಷ ಬದುಕಬಲ್ಲವು. ಆದರೆ ಫ್ಲಾಜಿ ಮಾತ್ರ ಬರೋಬ್ಬರಿ 26 ವರ್ಷಗಳ ಕಾಲ ಬದುಕಿದೆ.

ಬೆಕ್ಕಿನ ವಯಸ್ಸು ಮನುಷ್ಯರ 120 ವರ್ಷಕ್ಕೆ ಸಮ ಎಂದು ಗಿನ್ನಿಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಈ 26 ವರ್ಷಗಳಲ್ಲಿ ಪ್ಲಾಜಿ ಮೂವರು ಮಾಲೀಕರನ್ನು ಹೊಂದಿದೆ ಎಂಬುದು ಮತ್ತಷ್ಟು ಇಂಟೆರೆಸ್ಟಿಂಗ್ ಸಂಗತಿಯಾಗಿದೆ. ಒಟ್ಟಾರೆ, ಯಾವುದೇ ಪ್ರಾಣಿ, ಮನುಷ್ಯರಿಗೆ ನಾನೇನು ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದೆ ಈ ಬೆಕ್ಕು..