Home Interesting Funny Video : ಕಾಡಿನ ರಾಜನ ಮೇಲೆ ಕುಳಿತು ಸವಾರಿ ಮಾಡಿದ ಕಪಿರಾಯ ! ಈ...

Funny Video : ಕಾಡಿನ ರಾಜನ ಮೇಲೆ ಕುಳಿತು ಸವಾರಿ ಮಾಡಿದ ಕಪಿರಾಯ ! ಈ ವೀಡಿಯೋ ನೋಡಿದರೆ ಬಿದ್ದುಬಿದ್ದು ನಗ್ತೀರ!

Hindu neighbor gifts plot of land

Hindu neighbour gifts land to Muslim journalist

ಇಂಟರ್ನೆಟ್ ದುನಿಯಾದಲ್ಲಿ ಎಲ್ಲರೂ ಜೀವಿಸುತ್ತಿದ್ದು, ಅದರಲ್ಲಿ ಅನೇಕ ಅದ್ಭುತ ವಿಷಯಗಳನ್ನು ತಿಳಿಯುತ್ತೇವೆ. ಇಲ್ಲಿ ಹಂಚಿಕೊಳ್ಳುವ ವಿಡಿಯೋ, ಫೋಟೊಗಳು, ಸಂದೇಶಗಳು ಒಂದೇ ಕ್ಷಣದಲ್ಲಿ ವೈರಲ್ ಆಗಿ ಬಿಡುತ್ತೆ. ಇದೀಗ ಒಂದು ಅದ್ಭುತ ವಿಡಿಯೋವೊಂದು ವೈರಲ್ ಆಗುತ್ತಿದ್ದೂ, ನೀವೊಮ್ಮೆ ನೋಡಿದ್ರೆ ಹೀಗೂ ಉಂಟಾ!! ಅಂತ ಬಾಯಿ ಮೇಲೆ ಬೆರಳು ಇಡೋದು ಗ್ಯಾರಂಟಿ. ಹಾಗಾದ್ರೆ ಆ ವಿಡಿಯೋದಲ್ಲಿ ಏನಿದೆ ಅಂತ ನೀವೆ ನೋಡಿ.

ಸಿಂಹವನ್ನು ಕಾಡಿನ ರಾಜ ಅಂತ ಕರಿತಾರೆ. ಅದರ ಶಕ್ತಿ ಮತ್ತು ಚುರುಕುತನದಿಂದಾಗಿ ಅದಕ್ಕೆ ಆ ಸ್ಥಾನಮಾನವನ್ನು ನೀಡಲಾಗಿದೆ. ಯಾವುದೇ ಭಯವಿಲ್ಲದೆ ಕಾಡಿನಲ್ಲಿ ಸುತ್ತಾಡುತ್ತೆ. ಇದರ ಹತ್ತಿರ ಯಾವ ಪ್ರಾಣಿನೂ ಸುಳಿಯಲ್ಲ. ಇದೀಗ ಯಾಕಪ್ಪಾ ಈ ವಿಚಾರ ಅಂತ ತಲೆಗೆ ಹುಳ ಬಿಡ್ಕೊಬೇಡಿ. ವಿಷಯ ಇದೆ. ಅದೇನಪ್ಪಾ ಅಂದ್ರೆ, ಸದಾ ತುಂಟಾಟದಲ್ಲೇ ದಿನ ಕಳಿಯೋ ಮಂಗ, ಸಿಂಹದ ಬೆನ್ನ ಮೇಲೆ ಹತ್ತಿ ಸವಾರಿ ಮಾಡುತ್ತೆ ಅಂದ್ರೆ ನಂಬ್ತೀರಾ!! ಹೌದು, ನೀವು ನಂಬ್ಲೆಬೇಕು ಈ ವೈರಲ್ ಆಗ್ತಿರೋ ವಿಡಿಯೋದಲ್ಲಿ ಇವರೇ ಪ್ರಮುಖ ಪಾತ್ರದಾರಿಗಳು.

ಈ ವೈರಲ್ ವಿಡಿಯೋದಲ್ಲಿ, ಎರಡು ಸಿಂಹಗಳು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆಗ ಅಲ್ಲಿ ಒಂದು ಕೋತಿ ಜಿಗಿದು ಸಿಂಹದ ಬೆನ್ನ ಮೇಲೆ ಕುಳಿತು ಸವಾರಿ ಮಾಡಲು ಆರಂಭಿಸುತ್ತದೆ. ಕುತೂಹಲಕಾರಿಯಾಗಿ, ಸಿಂಹವು ಪ್ರತಿಕ್ರಿಯಿಸದೆ ನಡೆಯುವುದನ್ನು ಮುಂದುವರೆಸಿದೆ. ಇದನ್ನು ನೋಡಿದರೆ ಕೋತಿ ಕಾಡಿನ ರಾಜ, ಸಿಂಹವು ಮಂಗನ ಸೇವಕನ ಹಾಗೇ ಕಾಣಿಸುತ್ತಿದೆ.

ಕಾಡಿನಲ್ಲಿ ಕಂಡ ಈ ಊಹೆಗೂ ನಿಲುಕದ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಡಾ. ವಿವೇಕ್ ಬಿಂದ್ರಾ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “The spirit of doing something can make you ride a lion” ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಸಾಕಷ್ಟು ವೀಕ್ಷಣೆಗಳು ಮತ್ತು ಲೈಕ್ಸ್‌ ಪಡೆದುಕೊಂಡಿದೆ. ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಮಂಗ ಹಾಗೂ ಸಿಂಹ ಇಬ್ಬರೂ ಗೆಳೆಯರ ಹಾಗೆ ವರ್ತಿಸಿರುವುದನ್ನು ನೋಡಿದರೆ ನಿಜಕ್ಕೂ ವಿಚಿತ್ರವಾಗಿ ಕಾಣುತ್ತಿದೆ.