Home Breaking Entertainment News Kannada ‘ಕೋಬ್ರಾ’ ಸಿನಿಮಾದ ಮೊದಲ ದಿನದ ಕಲೆಕ್ಷನ್! ; ಸೂಪರ್ ಡೂಪರ್ ಹಿಟ್ ಜೋಡಿ ಇವ್ರು

‘ಕೋಬ್ರಾ’ ಸಿನಿಮಾದ ಮೊದಲ ದಿನದ ಕಲೆಕ್ಷನ್! ; ಸೂಪರ್ ಡೂಪರ್ ಹಿಟ್ ಜೋಡಿ ಇವ್ರು

Hindu neighbor gifts plot of land

Hindu neighbour gifts land to Muslim journalist

ಶ್ರೀನಿಧಿ ಶೆಟ್ಟಿ ಕನ್ನಡದ ಕೆಜಿಎಫ್ ನಂತರ ತನ್ನ ಚಿತ್ರರಂಗದ ಪಯಣವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಆಫರ್ಗಳು ಕೂಡ ಇವರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಶ್ರೀನಿಧಿ ಶೆಟ್ಟಿ ಅವರಿಗೆ ಬಂಪರ್ ಆಫರ್ ಕೂಡ ಬಂತು. ಅದೇ ಕನ್ನಡದ ಇಂಡಸ್ಟ್ರಿ ಇಂದ ತಮಿಳಿನ ಇಂಡಸ್ಟ್ರಿಯಲ್ಲಿ ಮಿಂಚುವ ಅವಕಾಶ. ಇದನ್ನು ಕೈ ಬಿಡಲಿಲ್ಲ.

ತಮಿಳಿನ ಖ್ಯಾತ ನಟನಾದ ಚಿಯಾನ್ ವಿಕ್ರಮ್ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕೂಡ ರಿಲೀಸ್​ಗಿಂತ ಮುನ್ನ ಭಾರಿ ಹೈಪ್​ ಕ್ರಿಯೇಟ್​ ಮಾಡಿತು. ಹಾಗಾದರೆ ಮೊದಲ ದಿನ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಎಷ್ಟು? ಇಲ್ಲಿದೆ ಮಾಹಿತಿ..


ಶ್ರೀನಿಧಿ ಶೆಟ್ಟಿ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಜನಪ್ರಿಯತೆ ಇದೆ. ಹತ್ತು ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ‘ಕೆಜಿಎಫ್​’ ಚಿತ್ರದ ಬಳಿಕ ಅಳೆದು-ತೂಗಿ ಅವರು ಒಪ್ಪಿಕೊಂಡಿದ್ದೇ ತಮಿಳಿನ ‘ಕೋಬ್ರಾ’ ಸಿನಿಮಾ. ಅವರ ಆಯ್ಕೆ ತಪ್ಪಾಗಿಲ್ಲ. ಆಗಸ್ಟ್​ 31ರಂದು ರಿಲೀಸ್​ ಆಗಿರುವ ಈ ಸಿನಿಮಾ ಉತ್ತಮ ಓಪನಿಂಗ್​ ಪಡೆಯುವಲ್ಲಿ ಯಶಸ್ವಿ ಆಗಿದೆ. ಮೊದಲ ದಿನ ಈ ಚಿತ್ರ ಅಂದಾಜು 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ವರದಿ ಆಗಿದೆ.

ಪ್ರತಿ ಸಿನಿಮಾದಲ್ಲೂ ಚಿಯಾನ್​ ವಿಕ್ರಮ್​ ಅವರು ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಾರೆ. ವಿಭಿನ್ನ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹತ್ತಾರು ಶೇಡ್​ ಇರುವ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸುತ್ತಾರೆ. ‘ಕೋಬ್ರಾ’ ಸಿನಿಮಾದಲ್ಲೂ ಅದು ಮುಂದುವರಿದಿದೆ. 8 ಡಿಫರೆಂಟ್​ ಶೇಡ್​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ನಾನಾ ಅವತಾರಗಳನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಸೂಕ್ತ ಸಮಯದಲ್ಲಿಯೇ ‘ಕೋಬ್ರಾ’ ರಿಲೀಸ್​ ಆಗಿದೆ. ಆಗಸ್ಟ್​ 31ರಂದು ಗಣೇಶ-ಚತುರ್ಥಿ ಪ್ರಯುಕ್ತ ರಜೆ ಇತ್ತು. ಅದರ ಲಾಭವನ್ನು ಈ ಸಿನಿಮಾ ಪಡೆದುಕೊಂಡಿದೆ. ಇನ್ನು, ವಾರಾಂತ್ಯದ ದಿನಗಳಾದ ಶನಿವಾರ (ಸೆ.3) ಮತ್ತು ಭಾನುವಾರ (ಸೆ.4) ‘ಕೋಬ್ರಾ’ ಚಿತ್ರದ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಈ ಸಿನಿಮಾಗೆ ಆರ್​. ಅಜಯ್​ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಇರ್ಫಾನ್​ ಪಠಾಣ್​, ರೋಷನ್​ ಮ್ಯಾಥೀವ್​ ಮುಂತಾದವರು ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಿದ್ದಾರೆ.


ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಮಾರ್ಕೆಟ್ ನಲ್ಲಿ ಸದ್ದು ಮಾಡುತ್ತಿರುವ ಕೋಬ್ರಾ ಇನ್ನೆಷ್ಟು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತೆ ಅನ್ನೋದು ಕಾದು ನೋಡಬೇಕಾಗಿದೆ.