Home Interesting Population : ಇದೊಂದು ಬಾಕಿ ಇತ್ತು ನೋಡಿ, ಮದುವೆಯಾಗದೆ ಮಕ್ಕಳು ಮಾಡಿದರೆ ಕೂಡಾ ಸಿಗುತ್ತೆ ಸರಕಾರಿ...

Population : ಇದೊಂದು ಬಾಕಿ ಇತ್ತು ನೋಡಿ, ಮದುವೆಯಾಗದೆ ಮಕ್ಕಳು ಮಾಡಿದರೆ ಕೂಡಾ ಸಿಗುತ್ತೆ ಸರಕಾರಿ ಸೌಲಭ್ಯ!

Hindu neighbor gifts plot of land

Hindu neighbour gifts land to Muslim journalist

ಚೀನಾ ದೇಶ ಅಲ್ಲಿನ ಜನತೆಗೆ ವಿಶೇಷ ಸೌಲಭ್ಯವೊಂದನ್ನು ನೀಡಿದೆ. ಏನಪ್ಪಾ ಅಂದ್ರೆ, ಮದುವೆಯಾಗದೆ ಮಕ್ಕಳು ಮಾಡಿದರೆ ಸರಕಾರಿ ಸೌಲಭ್ಯ ಸಿಗುತ್ತದೆಯಂತೆ. ಈ ಬಗ್ಗೆ ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ವಿಚಿತ್ರವಾದ ನಿಯಮ ಯಾಕೆ ಅಂತೀರಾ? ಕಾರಣ ಇದೆ. ಜನನ ಪ್ರಮಾಣ ಕುಸಿಯುತ್ತಿದ್ದು, ಇದನ್ನು ಹೆಚ್ಚಿಸುವ ಸಲುವಾಗಿ ಬೀಜಿಂಗ್ ಇಂತಹ ಪ್ರಯತ್ನವನ್ನು ಮಾಡಲು ಹೊರಟಿದೆ. ಸಿಚುವಾನ್ ಚೀನಾದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಈ ಪ್ರಾಂತ್ಯವು ಚೀನಾದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಸದ್ಯ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಈ ಮೊದಲು ಸಿಚುವಾನ್‌ನಲ್ಲಿ ವಿವಾಹಿತ ಮಹಿಳೆಯರು ಮಾತ್ರವೇ ಜನ್ಮ ನೀಡಬೇಕು ಎಂದಿದ್ದು, ಆದರೆ ಪ್ರಾಂತ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮದುವೆ ಮತ್ತು ಜನನದ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣದಿಂದ ಅವಿವಾಹಿತರು ಮಕ್ಕಳಿಗೆ ಜನ್ಮ ನೀಡಬಹುದು ಎಂಬ ನಿಯಮ ಜಾರಿ ಮಾಡಲಾಗಿದೆ. ಈ ಹೊಸ ನಿಯಮಗಳು ಫೆಬ್ರವರಿ 15 ರಿಂದ ಜಾರಿಗೆ ಬರಲಿವೆ.

ನಿಯಮದ ಪ್ರಕಾರ, ವಿವಾಹಿತ ದಂಪತಿಗಳು ಮತ್ತು ಅವಿವಾಹಿತ ಮಹಿಳೆ, ಪ್ರಾಂತೀಯ ಅಧಿಕಾರಿಗಳ ಬಳಿ ಮೊದಲು ನೋಂದಾವಣೆ ಮಾಡಬೇಕು. ಆ ನಂತರ ಅವರು ತಾವು ಬಯಸಿದಷ್ಟು ಮಕ್ಕಳನ್ನು ಹೊಂದಬಹುದಾಗಿದೆ. ಜನಸಂಖ್ಯೆಯ ಸಮತೋಲನಕ್ಕಾಗಿ, ಅಭಿವೃದ್ಧಿಗಾಗಿ ನಿಚುವಾನ್‌ನ ಆರೋಗ್ಯ ಆಯೋಗ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಚೀನಾದ ಜನಸಂಖ್ಯೆ ಕಳೆದ ಆರು ದಶಕಗಳಲ್ಲಿ ಕಳೆದ ವರ್ಷವೇ ಮೊದಲ ಬಾರಿಗೆ ಕುಸಿತಗೊಂಡಿದ್ದು, ಈ ಕಾರಣದಿಂದಾಗಿ ಅಧಿಕಾರಿಗಳು ವಿವಾಹಿತ ಮಹಿಳೆಯರಿಗೆ ಹೆರಿಗೆ ರಜೆಯಲ್ಲಿ ತಮ್ಮ ಸಂಬಳವನ್ನು ನೀಡುತ್ತದೆ. ಸದ್ಯ ಸಿಚುವಾನ್‌ನಲ್ಲಿಯೂ, ಈ ಸೌಲಭ್ಯವನ್ನು ಈಗ ಅವಿವಾಹಿತ ಮಹಿಳೆಯರು ಮತ್ತು ಪುರುಷರಿಗೆ ನೀಡಲಾಗುತ್ತದೆ. ಮದುವೆಯಾಗದೆ ಮಕ್ಕಳು ಮಾಡಿದರೆ ಸರಕಾರಿ ಸೌಲಭ್ಯ ಸಿಗುತ್ತದೆ.