Home Entertainment ಮದುವೆ ಮಂಟಪದಲ್ಲಿ ನೃತ್ಯ ಮಾಡಿದ ವಧುವಿಗೆ ಚಟಾರನೆ ಕೆನ್ನೆಗೆ ಹೊಡೆದ ವರ |ಮುಂದೆ ಆಗಿದ್ದು ಮಾತ್ರ?

ಮದುವೆ ಮಂಟಪದಲ್ಲಿ ನೃತ್ಯ ಮಾಡಿದ ವಧುವಿಗೆ ಚಟಾರನೆ ಕೆನ್ನೆಗೆ ಹೊಡೆದ ವರ |ಮುಂದೆ ಆಗಿದ್ದು ಮಾತ್ರ?

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್, ಸಂಗೀತ ಹೀಗೆ ಕಾರ್ಯಕ್ರಮ ಇಟ್ಟುಕೊಳ್ಳೋದು ಮಾಮೂಲು. ಅದರಲ್ಲೂ ಈಗ ವಧು-ವರ ಸ್ಟೇಜ್ ಗೆ ಬರೋವರೆಗೂ ಅದ್ದೂರಿ ನೃತ್ಯ ಮಾಡಿ ಎಂಟ್ರಿ ಕೊಡೋದು ಫ್ಯಾಷನ್ ಆಗಿದೆ. ಆದ್ರೆ ಇಲ್ಲೊಂದು ಕಡೆ ವಧು ಡ್ಯಾನ್ಸ್ ಮಾಡಿದಳೆಂಬ ಕಾರಣಕ್ಕೆ ಚಟಾರನೆ ಕೆನ್ನೆಗೆ ಹೊಡೆದ ವರ!!ಮುಂದಕ್ಕೆ ನಡೆದದ್ದು ಮಾತ್ರ ವಿಚಿತ್ರ..

ಹೌದು.ಮದುವೆ ಸಂದರ್ಭದಲ್ಲಿ ವಧು ಡಾನ್ಸ್‌ ಮಾಡಿದ್ದಕ್ಕೆ ಕೋಪಗೊಂಡ ವರನೊಬ್ಬ ಅಲ್ಲೇ ಆಕೆಯ ಕೆನ್ನೆಗೆ ಬಾರಿಸಿದ್ದು, ಇದರಿಂದ ಮದುವೆಯೇ ನಿಂತು ಹೋದಂತಹ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಅಲ್ಲದೇ ಇದೇ ಮಂಟಪದಲ್ಲಿ ವಧುವನ್ನು ಸಂಬಂಧಿ ಯುವಕನಿಗೆ ವಿವಾಹ ಮಾಡಿ ಕೊಡಲಾಗಿದ್ದು, ಇತ್ತ ವರನ ಕಡೆಯವರು ತಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕೆಲ ಮಾಧ್ಯಮಗಳ ವರದಿ ಪ್ರಕಾರ, ವರ ಚೆನ್ನೈನ ಕಂಪನಿಯೊಂದರಲ್ಲಿ ಸೀನಿಯರ್‌ ಇಂಜಿನಿಯರ್‌ ಆಗಿದ್ದು ಈ ವಧುವಿನೊಂದಿಗೆ ನವಂಬರ್‌ 6ರಂದು ವಿವಾಹ ನಿಶ್ಚಿತಾರ್ಥವಾಗಿತ್ತು. ಜನವರಿ 20ರಂದು ಕಡಲೂರಿನ ಪನ್ರತಿಯಲ್ಲಿ ಇವರ ನಡೆಯಬೇಕಾಗಿತ್ತು. ಆ ದಿನ ವಧು ವರ ಇಬ್ಬರು ಜೊತೆಯಾಗಿ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ವಧುವಿನ ಸೋದರ ಸಂಬಂಧಿ ಕೂಡ ಅಲ್ಲಿಗೆ ಬಂದು ವಧು ಹಾಗೂ ವರನ ಭುಜದ ಮೇಲೆ ಕೈಯಿಟ್ಟು ಡಾನ್ಸ್‌ ಮಾಡಲು ಶುರು ಮಾಡಿದ್ದಾನೆ. ಆದರೆ ವರನಿಗೆ ಆತ ಬಂದಿದ್ದು ಇಷ್ಟವಾಗಿಲ್ಲ.ಆದ್ದರಿಂದ ಸೋದರ ಸಂಬಂಧಿ ಹೋಗಲೆಂದು ಕಾದ ಆತ ನಂತರ ಸಿಟ್ಟಿನಿಂದ ವಧುವಿನ ಕೆನ್ನೆಗೆ ಬಾರಿಸಿದ್ದಾನೆ.

ಈತನ ಕೋಪ ವಧು ಹಾಗೂ ಆಕೆಯ ಕುಟುಂಬಸ್ಥರನ್ನು ಆಕ್ರೋಶಕ್ಕೀಡು ಮಾಡಿದೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನೆಂಟರು ಸಂಬಂಧಿಕರು ಎಲ್ಲರ ಎದುರು ಆತ ವಧುವಿನ ಮೇಲೆ ಕೈ ಮಾಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕುಟುಂಬಸ್ಥರು ಮದುವೆಯನ್ನೇ ಮುರಿದಿದ್ದಾರೆ. ಅಲ್ಲದೇ ತಮ್ಮ ಸಂಬಂಧಿಗಳಲ್ಲೇ ಇದ್ದ ಓರ್ವ ಹುಡುಗನೊಂದಿಗೆ, ವಧು ಕೂಡ ಒಪ್ಪಿಗೆ ಸೂಚಿಸಿದ ಬಳಿಕ ಅದೇ ದಿನ ವಿವಾಹ ನಡೆದಿದೆ.

ಇದರಿಂದ ಅವಮಾನಕ್ಕೊಳಗಾದ ವರ ತಾನು ಮದುವೆಯ ಎಲ್ಲಾ ವ್ಯವಸ್ಥೆಗಾಗಿ ಏಳು ಲಕ್ಷ ರೂ. ಖರ್ಚು ಮಾಡಿದ್ದು, ಅದನ್ನು ವಧುವಿನ ಕಡೆಯವರು ನನಗೆ ಪರಿಹಾರವಾಗಿ ನೀಡಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇತ್ತ ವಧುವಿನ ಕಡೆಯವರು ಕೂಡ ವಧುವಿಗೆ ಆತ ಹೊಡೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.