Home Interesting ಬಾಯ್ ಫ್ರೆಂಡ್ ಜೊತೆ ಹುಟ್ಟುಹಬ್ಬ ಸಂಭ್ರಮಿಸಲು ಮನೆಯ ಆಭರಣಗಳನ್ನೇ ಕದ್ದ ಬಾಲಕಿ! ಬಚಾವ್ ಆಗಲು ಎಂತಹ...

ಬಾಯ್ ಫ್ರೆಂಡ್ ಜೊತೆ ಹುಟ್ಟುಹಬ್ಬ ಸಂಭ್ರಮಿಸಲು ಮನೆಯ ಆಭರಣಗಳನ್ನೇ ಕದ್ದ ಬಾಲಕಿ! ಬಚಾವ್ ಆಗಲು ಎಂತಹ ಕಥೆ ಕಟ್ಟಿದಳು ಗೊತ್ತಾ!!

Hindu neighbor gifts plot of land

Hindu neighbour gifts land to Muslim journalist

ಪ್ರೇಮಿಗಳ ನಡುವೆ ಸಾಮಾನ್ಯವಾಗಿ ಹೆಚ್ಚು ಖರ್ಚು ಮಾಡುವವರು ಹುಡುಗರೇ ಎಂದು ಹೇಳಬಹುದು. ಆದರೆ ಇಲ್ಲೊಬ್ಬಳು ಹುಡುಗಿ ತನ್ನ ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪೊಲೀಸರ ಅತಿಥಿಯಾಗಿದ್ದಾಳೆ.

ಹೌದು ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ 18 ವರ್ಷದ ಯುವತಿಯೋರ್ವಳು ಈ ರೀತಿ ಘನಂದಾರಿ ಕಾರ್ಯ ಮಾಡಿದ್ದು ಮನೆಯ ಆಭರಣಗಳಿಂದಲೇ ಬಾಯ್ ಫ್ರೆಂಡ್ ಜೊತೆ ಹುಟ್ಟು ಹಬ್ಬವನ್ನು ಸಂಭ್ರಮಿಸಿದ್ದಾಳೆ. ಸದ್ಯ ಯುವತಿ ಹಾಗೂ ಆಕೆಯ ಪ್ರಿಯಕರನ ಇಬ್ಬರ ವಿರುದ್ಧವೂ ಕಳ್ಳತನ ಪ್ರಕರಣ ದಾಖಲಾಗಿದೆ.

ಹುಡುಗಿ ಕಳ್ಳತನ ಮಾಡಿ, ಹುಟ್ಟುಹಬ್ಬವನ್ನೂ ಸಂಭ್ರಮಿಸಿದ ಬಳಿಕ ತಾನು ಸಿಕ್ಕಿಬೀಳಬಹುದೆಂದು ಭಯಗೊಂಡಿದ್ದಾಳೆ. ಇದಕ್ಕಾಗಿ ಹೊಸ ರೀತಿಯ ಕಥೆಯನ್ನು ಹೆಣೆದು ತಾನೇ ಬಂದು ಪೋಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದಾಳೆ. ‘ನನ್ನ ಸ್ನೇಹಿತನೊಬ್ಬ, ನನ್ನ ಅಶ್ಲೀಲ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾನೆ. ಇದನ್ನು ತೋರಿಸಿ ಯಾವಾಗಲೂ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಆದ್ದರಿಂದ ಬಲವಂತವಾಗಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಆತನಿಗೆ ಒಪ್ಪಿಸಿದ್ದೇನೆ’ ದೂರಿನಲ್ಲಿ ದಾಖಲಿಸಿದ್ದಳು.

ಹುಡುಗಿ ನೀಡಿದ ದೂರಿನನ್ವಯ ನಗರದ ಕಪೂರಬಾವಡಿ ಪೊಲೀಸರಿಗೆ ತನಿಖೆ ಆರಂಬಿಸಿದ್ದಾರೆ. ಬಳಿಕ ಪೋಷಕರೊಂದಿಗೆ ವಿಚಾರಿಸಿ, ಅನುಮಾನಗೊಂಡ ಪೋಲಿಸರು ಪೊಲೀಸರು ಅಪ್ರಾಪ್ತ ಬಾಲಕನನ್ನ ವಿಚಾರಣೆಗೆ ಒಳಪಡಿಸಿದ್ದರು. ಕೊನೆಗೆ ಆ ಪಾಗಲ್ ಪ್ರೇಮಿ ಎಲ್ಲವನ್ನೂ ಬಾಯಿಬಿಟ್ಟಿದಾನೆ. ಕೊನೆಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪೋಲೀಸರಿಗೆ ಎಲ್ಲವೂ ಅರ್ಥವಾಗಿ ಆಕೆ ಅಸಲಿ ಆಟ ಬಯಲಾಗಿದೆ.

ಪ್ರೇಮಿಗಳಿಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಹುಡುಗನ ಹುಟ್ಟುಹಬ್ಬದ ಆಚರಣೆಗೆ ಚಿನ್ನಾಭರಣ ಕದ್ದಿದ್ದು ಎಂದು ಬಾಲಕಿ ಒಪ್ಪಿಕೊಂಡಿದ್ದು, ತನ್ನನ್ನು ಮತ್ತು ಪ್ರಿಯಕರನನ್ನು ಉಳಿಸಿಕೊಳ್ಳಲು ಆಕೆ ಕಥೆ ಕಟ್ಟಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಕದ್ದ ಆಭರಣಗಳನ್ನ ಬಾಲಕಿ ಮಾನ್ಪಾಡಾ ಪ್ರದೇಶದಲ್ಲಿ 53 ಸಾವಿರ ರೂ.ಗಳಿಗೆ ಮಾರಾಟ ಮಾಡಿಡಿದ್ದಳು. ಅಲ್ಲದೆ ಈ ಆಭರಣ ಖರೀದಿಸಿದವನನ್ನೂ ಬಂಧಿಸಲಾಗಿದೆ ಎಂದು ಕಪೂರಬಾವಡಿ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಉತ್ತಮ್ ಸೋನವಾನೆ ತಿಳಿಸಿದ್ದಾರೆ.