

ಆಪಲ್ ಫೋನ್ ಅಂದ್ರೆ ಪ್ರತಿಯೊಬ್ಬ ಮೊಬೈಲ್ ಬಳಕೆದಾರರಿಗೂ ಹತ್ತಿರವೇ ಸರಿ. ಯಾಕಂದ್ರೆ, ಸಾಮಾನ್ಯವಾಗಿ ಎಲ್ಲರ ಡ್ರೀಮ್ ಮೊಬೈಲ್ ಎಂದೇ ಹೇಳಬಹುದು. ಆದ್ರೆ, ದುಬಾರಿ ಬೆಲೆಯಿಂದಾಗಿ ಹೆಚ್ಚಿನ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಆಪಲ್ ಫೋನ್ ದರಕ್ಕೆ ಅಂಜಿ ಹಿಂದೇಟು ಹಾಕಿದವರಿಗೆ ಖುಷಿಯ ಸಮಾಚಾರ ಇಲ್ಲಿದೆ.
ಹೌದು. ಆಪಲ್ ಫೋನ್ ಪ್ರಿಯರಿಗೆ ಫ್ಲಿಪ್ಕಾರ್ಟ್ ಕಡೆಯಿಂದ ಗುಡ್ ನ್ಯೂಸ್ ದೊರಕಿದ್ದು, ಆಪಲ್ ಫೋನ್ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಈ ಆಪಲ್ ಫೋನ್ ಕೇವಲ 21,450 ರೂ. ಗಳಿಗೆ ಸಿಗಲಿದೆ. ಅದುವೇ ಹೆಚ್ಚು ಬೇಡಿಕೆ ಇರುವ ಫೋನ್ ಆಪಲ್ ಐಫೋನ್ 11 (Apple iPhone 11 ). ಈ ಫೋನ್ ಸದ್ಯಕ್ಕೆ ನೀವು ಊಹಿಸಲಾಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಅಂದರೆ ಈ ಫೋನ್ ಬರೋಬ್ಬರಿ 19,549 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 21,450ರೂ. ನಲ್ಲಿ ನಿಮ್ಮದಾಗಿಸಿಕೊಳ್ಳಬಹುದು.
ಐಫೋನ್ 11ಫೋನ್ 11 ಸರಣಿಯಲ್ಲಿ ಮೂಲ ಮಾದರಿಯಾಗಿದೆ. ಇದರ ಮುಂದಿನ ಸರಣಿ ಎಂದರೆ ಐಫೋನ್ 11 ಪ್ರೊ ಹಾಗೂ ಐಫೊನ್ 11 ಪ್ರೊ ಮ್ಯಾಕ್ಸ್. ಆಪಲ್ ಐಫೋನ್ 11 2020 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿದೆ. ಹಾಗೆಯೇ ಇಲ್ಲಿಯವರೆಗಿನ ಅತ್ಯಂತ ಜನಪ್ರಿಯ ಐಫೋನ್ ಮಾದರಿಗಳಲ್ಲಿ ಒಂದೆನಿಸಿಕೊಂಡಿದೆ. ಆದರೆ, ಈ ಫೋನ್ ಅನ್ನು ಐಫೋನ್ 14 ಸರಣಿಯ ಬಿಡುಗಡೆಯ ನಂತರ ಸ್ಥಗಿತಗೊಳಿಸಲಾಗಿದೆ. ಆದರೆ, ಸ್ಥಗಿತಗೊಂಡರೂ ಹೆಚ್ಚಿನ ಬೇಡಿಕೆ ಇದಕ್ಕಿದೆ.
ಐಫೋನ್ 11 ಉತ್ತಮ ಕ್ಯಾಮೆರಾ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ಹಿನ್ನೆಲೆ ಬೆಸ್ಟ್ ಎನಿಸಿಕೊಂಡಿದೆ. ಆರಂಭದಲ್ಲಿ ಈ ಫೋನ್ ಅನ್ನು 64,900 ರೂ. ಗಳ ಆರಂಭಿಕ ಬೆಲೆಗೆ 2019 ರಲ್ಲಿ ಲಾಂಚ್ ಮಾಡಲಾಗಿತ್ತು. ಐಫೋನ್ 11 ಫ್ಲಿಪ್‌ಕಾರ್ಟ್‌ನಲ್ಲಿ ಸಾಮಾನ್ಯ ದರ 40,999ರೂ. ಆಗಿದ್ದು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಅಂದರೆ ನೀವು ಈ ಖರೀದಿಯ ಮೇಲೆ 2,049ರೂ. ಗಳ ರಿಯಾಯಿತಿ ಪಡೆಯಬಹುದು.
ಇದರೊಂದಿಗೆ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಜೊತೆಗೆ ವಿನಿಮಯ ಆಫರ್ ಮೂಲಕ ಒಟ್ಟಾರೆ ಈ ಫೋನ್‌ಗೆ 17,500ರೂ. ಗಳ ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಈ ಮೂಲಕ ನೀವು ಐಫೋನ್ 11 ಅನ್ನು 21,450ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.













