Home Interesting ಶೀಘ್ರದಲ್ಲೇ ಬರಲಿದೆ ಅದಾನಿ ಸೂಪರ್ ಆಪ್ | ಚೀನಾದ ದಿಗ್ಗಜ ಕಂಪನಿಗಳ ಶೈಲಿಯೇ ತಯಾರಾಗಿರುವ ಈ...

ಶೀಘ್ರದಲ್ಲೇ ಬರಲಿದೆ ಅದಾನಿ ಸೂಪರ್ ಆಪ್ | ಚೀನಾದ ದಿಗ್ಗಜ ಕಂಪನಿಗಳ ಶೈಲಿಯೇ ತಯಾರಾಗಿರುವ ಈ ಆಪ್ ನ ವಿಶೇಷತೆ ಹೇಗಿದೆ ನೋಡಿ

Hindu neighbor gifts plot of land

Hindu neighbour gifts land to Muslim journalist

ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಜನತೆಗೆ ಸುಲಭವಾಗಿ ಎಲ್ಲಾ ಮಾಹಿತಿ ಒದಗಿಸುವ ನಿಟ್ಟಿನಿಂದ ಸೂಪರ್‌ ಆಪ್ ಒಂದನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.

ಹೌದು. ಏರ್‌ ಪೋರ್ಟ್‌ಗೆ ಭೇಟಿ ನೀಡುವ ಪ್ರಯಾಣಿಕರು ಹಾಗೂ ವೀಕ್ಷಕರಿಗೆ ಅದಾನಿ ಗ್ರೂಪ್‌ನ ಸಮಗ್ರ ಸೇವೆಗಳೂ ಪರಿಚಯವಾಗುವ ನಿಟ್ಟಿನಲ್ಲಿ ಈ ಆಪ್ ಬಿಡುಗಡೆಗೊಳಿಸಲಿದೆ. ಅದಾನಿ ಗ್ರೂಪ್‌ನ ಸ್ಟಾರ್ಟಪ್‌ ಒಂದು ಈ ಸೂಪರ್‌ ಆಯಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ಡಿಜಿಟಲ್‌ ಜಗತ್ತಿನ ಫೆರಾರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅದಾನಿಯವರು ದೇಶದಲ್ಲಿ ಏಳು ವಿಮಾನ ನಿಲ್ದಾಣಗಳನ್ನು ನಡೆಸುತ್ತಿದ್ದಾರೆ. ಮುಂಬಯಿ ಏರ್‌ ಪೋರ್ಟ್‌ನಲ್ಲಿ ಹೊಸ ಟರ್ಮಿನಲ್‌ ಕಟ್ಟುತ್ತಿದ್ದಾರೆ. ಒಟ್ಟಾರೆಯಾಗಿ ದೇಶದ 20% ಏವಿಯೇಶನ್‌ ಟ್ರಾಫಿಕ್‌ ಅವರ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಶಾಪಿಂಗ್‌, ಪೇಮೆಂಟ್‌, ಮನರಂಜನೆ, ಸಾಮಾಜಿಕ ಜಾಲತಾಣ, ಹಣಕಾಸು ಎಲ್ಲವನ್ನೂ ಒಂದೇ ಆಪ್ ಅಡಿಯಲ್ಲಿ ಕೊಡುವುದು ಚೀನಾದ ದಿಗ್ಗಜ ಕಂಪನಿಗಳ ಶೈಲಿ. ಅದಾನಿಯವರೂ ಅಂಥದ್ದೇ ಆಲೋಚನೆಯಲ್ಲಿ ಇದ್ದಂತಿದೆ ಎಂದು ವರದಿಯಾಗಿದೆ. ಮುಂದಿನ ಮೂರರಿಂದ ಆರು ತಿಂಗಳಿನಲ್ಲಿ ಸೂಪರ್‌ ಆಪ್ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.