Home Interesting Physical relationship with devil: 20ವರ್ಷ ದೆವ್ವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ- ಯಾಪ್ಪಾ.....

Physical relationship with devil: 20ವರ್ಷ ದೆವ್ವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆ- ಯಾಪ್ಪಾ.. ಈಕೆ ಹೇಳೋದೆಲ್ಲಾ ಕೇಳಿದ್ರೆ ನೀವೇ ಬೆವತು ಹೋಗ್ತೀರಾ !!

Hindu neighbor gifts plot of land

Hindu neighbour gifts land to Muslim journalist

 

Physical relationship with devil: ಲೈಂಗಿಕ ಕ್ರಿಯೆಯು ಪ್ರಕೃತಿ ನಿಯಮ. ಯಾವುದೇ ಜೀವಿಯಲ್ಲಿ ಹೆಣ್ಣು ಹಾಗೂ ಗಂಡಿನ ಕೂಡುವಿಕೆಯೇ ಈ ಕ್ರಿಯೆ. ನಮ್ಮ ಮನುಷ್ಯರಲ್ಲಿ ಇದಕ್ಕೆ ಕೆಲವು ಮಿತಿಗಳಿದ್ದು, ಎಲ್ಲರೊಂದಿಗೆ ಕೂಡುವಂತಿಲ್ಲ. ಮದುವೆಯ ಬಳಿಕವಂತೂ ಇದು ಜೀವನದ ಒಂದು ಭಾಗವಾಗುತ್ತದೆ. ಹೆಣ್ಣು-ಗಂಡು ಕೂಡುವುದು ಹಾಗೂ ಈ ಎಲ್ಲಾ ವಿಚಾರಗಳ ಕುರಿತು ಎಲ್ಲರಿಗೂ ಗೊತ್ತಿರೋದೆ. ಇನ್ನು ಕೆಲವರು ಸಲಿಂಗಿಗಳಾಗಿರುವುದೂ ಗೊತ್ತು. ಆದರೆ ದೆವ್ವದೊಂದಿಗೆ ಲೈಂಗಿಕ ಕ್ರಿಯೆ(Physical relationship with the devil) ನಡೆಸುವುದರ ಬಗ್ಗೆ ಕೇಳಿದ್ದೀರಾ? ಯಬ್ಬೋ ಇದೇನು ವಿಚಿತ್ರ ಸುದ್ದಿ, ಇದು ನಂಬಲು ಸಾಧ್ಯವೇ? ಎಂದೆಲ್ಲ ಯೋಚಿಸಬೇಡಿ. ಇಲ್ಲಿದೆ ನೋಡಿ ಅಚ್ಚರಿಯ ಹಾಗೂ ಕುತೂಹಲಕರವಾದ ಸಂಗತಿ.

ಹೌದು, ಕೊಲಂಬಿಯಾ(Kolambia) ಮೂಲದ ಪಾವೊಲಾ ಫ್ಲೋರೆಜ್ಮ ಎಂಬ ಹಿಳೆಯೊಬ್ಬರು ದೆವ್ವದ ಜೊತೆ ಸಂಭೋಗ ನಡೆಸಿದ ವಿಚಿತ್ರ ಅನುಭವ ಪಡೆದಿದ್ದಾಗಿ ವಾದ ಹೂಡಿದ್ದಾಳೆ. ಅಚ್ಚರಿಯ ಸಂಗತಿ ಏನೆಂದರೆ, ಕಳೆದ 20 ವರ್ಷಗಳಿಗೂ ಅಧಿಕ ಕಾಲ ದೆವ್ವದೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳಂತೆ!!

ಕೊಲಂಬಿಯಾದ ಕ್ಯಾನಲ್ 1 ಚಾನೆಲ್‌ನಲ್ಲಿ ಪ್ರಸಾರವಾಗುವ ಟಿವಿ ಶೋ ಸಿನ್ ಕ್ಯಾರೆಟಾದಲ್ಲಿ ಈಕೆ ಹೇಳುವ ಪ್ರಕಾರ ಚಿಕ್ಕವಳಿದ್ದಾಗಲೇ ಆತ್ಮದೊಂದಿಗಿನ ಇವಳ ಸಂಬಂಧ ಪ್ರಾರಂಭವಾಯಿತಂತೆ. ರಾತ್ರಿ ಮಲಗುವ ಸಮಯದಲ್ಲಿ ವಿಕಾರವಾದ ಒಂದು ದೆವ್ವ ಮನೆಗೆ ಭೇಟಿ ನೀಡುತ್ತಿತ್ತಂತೆ. ಹೀಗೆ ಬರೋಬ್ಬರಿ 20 ವರ್ಷಗಳಿಗೂ ಅಧಿಕ ಸಮಯ ಲೈಂಗಿಕ ಕ್ರಿಯೆ ಅನುಭವಿಸಿದ್ದಾಗಿ ಪಾವೊಲಾ ಹೇಳಿದ್ದಾರೆ.

‘ಒಂದು ದಿನ ನಾನು ಮಲಗಿದ್ದಾಗ ನನ್ನ ಕಾಲುಗಳಿಂದ ಎದೆಗೆ ಕೈ ನಿಧಾನವಾಗಿ ಚಲಿಸಿದ ಅನುಭವವಾಯಿತು. ಇದೊಂದು ರೀತಿಯಲ್ಲಿ ವಿಚಿತ್ರವಾಗಿದ್ದು ನಾನು ಹೆದರಿದೆ. ಅಂದಿನ ಆ ಕ್ಷಣದಿಂದ ಅವನು ನನ್ನೊಂದಿಗೆ ಸಂಭೋಗಿಸಲು ಆತ್ಮದಂತೆ ನನ್ನ ಬಳಿಗೆ ಬರಲು ಪ್ರಾರಂಭಿಸಿದನು. 20 ವರ್ಷಗಳಿಂದಲೂ ಅದು ನನ್ನ ಬಳಿಗೆ ಬರುತ್ತಿರುವುದರಿಂದ ಅದು ನನ್ನ ಆತ್ಮೀಯ ಸಂಗಾತಿ ಆಗಿದೆ’ ಎಂದು ಆಕೆ ಬಹಿರಂಗವಾಗಿ ಹೇಳಿದ್ದಾಳೆ.

 

ಇಷ್ಟೇ ಅಲ್ಲದೆ ಆ ದೆವ್ವದ ಬಗ್ಗೆ ವಿವರಿಸಿದ ಈ ಮಹಿಳೆ ಆತ ದೊಡ್ಡ ವ್ಯಕ್ತಿ. ಆದರೆ, ಆ ಒಂದು ದಿನ ಆತನ ಮುಖದ ನನಗೆ ಕಾಣಿಸಿತು. ಆತನಿಗೆ ಕೋರೆಹಲ್ಲುಗಳು ಇದ್ದವು ಮತ್ತು ಗಾರ್ಗೋಯ್ಸ್ ಮಾದರಿಯಲ್ಲಿ ಮುಖ ವಿಚಿತ್ರವಾಗಿತ್ತು. ಭಯಾನಕ ಮುಖವನ್ನು ನೋಡಿದ ಬಳಿಕ ಆತನೊಂದಿಗೆ ಯಾವುದೇ ಸಂಪರ್ಕವನ್ನು, ಸಂಬಂಧವನ್ನು ಬೆಳೆಸಲು ನನಗೆ ಇಷ್ಟವಾಗಲಿಲ್ಲ ಎಂದಿದ್ದಾಳೆ.