Home Health Winter Hair Fall Remedies: ಚಳಿಗಾಲದಲ್ಲಿ ವಿಪರೀತ ಕೂದಲು ಉದುರುತ್ತಾ ?! ಹಾಗಿದ್ರೆ ಈ ಜ್ಯೂಸ್...

Winter Hair Fall Remedies: ಚಳಿಗಾಲದಲ್ಲಿ ವಿಪರೀತ ಕೂದಲು ಉದುರುತ್ತಾ ?! ಹಾಗಿದ್ರೆ ಈ ಜ್ಯೂಸ್ ಇದಕ್ಕೆ ರಾಮ ಬಾಣ

Winter Hair Fall Remedies
Image source: Herzindagi

Hindu neighbor gifts plot of land

Hindu neighbour gifts land to Muslim journalist

Winter Hair Fall Remedies: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಕೆಲವು ಸಮಸ್ಯೆಗಳು ಕಾಣುತ್ತವೆ. ಅಂತೆಯೇ ಚಳಿಗಾಲದಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ಸೀಳುವುದು, ತಲೆಹೊಟ್ಟು ಸಮಸ್ಯೆ ಉಂಟಾಗುತ್ತವೆ, ಇನ್ನೊಂದೆಡೆ ಚಳಿ ಇರುವ ಕಾರಣ ನಾವು ಇಡೀ ಶರೀರದ ಮೇಲೆ ಹೊದಿಕೆಯನ್ನು ಎಳೆದುಕೊಂಡು ಮಲಗುತ್ತೇವೆ. ಆದರೆ, ತಲೆತುಂಬ ಹೊದಿಕೆ ಹಾಕಿಕೊಂಡಾಗ ಅದು ಕೂದಲಿನ ತೇವಾಂಶವನ್ನು ಹೀರುವ ಕೆಲಸ ಮಾಡುತ್ತದೆ.

ಈ ಎಲ್ಲಾ ಸಮಸ್ಯೆಗೆ ಇಲ್ಲಿ ಚಳಿಗಾಲದ ಒಂದು ವಿಶೇಷ ಜ್ಯೂಸ್ ಪಾಕವಿಧಾನವನ್ನು (Winter Hair Fall Remedies) ತಿಳಿಸಿದ್ದು, ಇದರಿಂದ ಚಳಿಗಾಲದಲ್ಲಿ ನಿಮ್ಮ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನೀವು ತೆಗೆದುಹಾಕಬಹುದು. ಅಲ್ಲದೆ, ಇದನ್ನು ಕುಡಿಯುವುದರಿಂದ, ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟವು ಎಂದಿಗಿಂತಲೂ ಉತ್ತಮವಾಗಿರುತ್ತದೆ. ವಿಶೇಷವೆಂದರೆ ಚಳಿಗಾಲದಲ್ಲಿ ಪ್ರತಿದಿನ ಈ ಜ್ಯೂಸ್ ಕುಡಿದರೆ ಶೀತದ ಕೆಟ್ಟ ಪರಿಣಾಮ ಗೋಚರಿಸುವುದಿಲ್ಲ. ಈ ಜ್ಯೂಸ್‌ನ ಹೆಸರು ಎಬಿಸಿ ಜ್ಯೂಸ್ ಅಂದರೆ ಆಮ್ಲಾ-ಬೀಟ್‌ರೂಟ್-ಕ್ಯಾರೆಟ್ ಜ್ಯೂಸ್ ಎಂದರ್ಥ.

ಇದನ್ನು ಓದಿ: Peepal Tree Health Benefits: ನಿತ್ಯವೂ ನೀವು ಪೂಜಿಸುವ ಅರಳಿ ಮರದಲ್ಲೂ ಉಂಟು ಈ ಎಲ್ಲಾ ಔಷಧೀಯ ಗುಣಗಳು !!

ಎಬಿಸಿ ಜ್ಯೂಸ್ ತಯಾರಿಸಲು, ನೀವು ವಿಶೇಷವಾಗಿ ಆಮ್ಲಾ, ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಬಳಸಬೇಕು. ಮೊದಲಿಗೆ ಎಲ್ಲಾ ತರಕಾರಿಗಳನ್ನು ಸರಿಯಾಗಿ ತೊಳೆದುಕೊಳ್ಳಿ. ಸಿಪ್ಪೆ ಸುಲಿದು ಮತ್ತು ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಒಣದ್ರಾಕ್ಷಿ ವಿಶೇಷವಾಗಿ ಟೇಸ್ಟ್ ಹೆಚ್ಚಿಸಲು ಬಳಸಲಾಗುತ್ತದೆ. ರಸವು ಸಿದ್ಧವಾದ ನಂತರ, ಅದನ್ನು ಗ್ಲಾಸಿಗೆ ಹಾಕಿ ಮತ್ತು ಉಪ್ಪು ಮತ್ತು ನಿಂಬೆ ಬೆರೆಸಿ ಸೇವಿಸಿ.

ಒಂದು ವೇಳೆ ನಿಮಗೆ ಜೀರ್ಣಕಾರಿ ಸಮಸ್ಯೆ ಇದ್ದರೆ ಅಥವಾ ಜೀರ್ಣಕ್ರಿಯೆ ನಿಧಾನವಾಗಿದ್ದರೆ ನೀವು ಮೊದಲು ಬೀಟ್‌ರೂಟ್, ಆಮ್ಲಾ ಮತ್ತು ಕ್ಯಾರೆಟ್ ಅನ್ನು ಕುಕ್ಕರ್ ಗೆ ಹಾಕಿ ಒಂದು ವಿಶಲ್ ಬರುವವರೆಗೆ ಕುದಿಸಿಕೊಳ್ಳಿ. ನಂತರ ಅದನ್ನು ಕುದಿಸಲು ಬಳಸುವ ನೀರಿನೊಂದಿಗೆ ರುಬ್ಬಿಕೊಳ್ಳಿ ಮತ್ತು ಅದರ ರಸವನ್ನು ತಯಾರಿಸಿ. ಹೀಗೆ ಮಾಡುವುದರಿಂದ ಜ್ಯೂಸ್ ತ್ವರಿತವಾಗಿ ಜೀರ್ಣ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಭಾರವಾದಂತಹ ಅನುಭವ ಉಂಟಾಗುವುದಿಲ್ಲ. ಈ ರಸವನ್ನು ಮಕ್ಕಳಿಗೆ ನಿಯಮಿತವಾಗಿ ನೀಡಬಹುದು. ಇದರಿಂದಾಗಿ ಅವರ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ ಮತ್ತು ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.

ಈ ಜ್ಯೂಸ್ ನ್ನು ಬೆಳಗಿನ ಉಪಾಹಾರ ಮತ್ತು ಊಟದ ನಡುವಿನ ಸಮಯದಲ್ಲಿ ಅಥವಾ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ವಿರಾಮದ ಸಮಯದಲ್ಲಿ ಈ ರಸವನ್ನು ಸೇವಿಸಬಹುದು. ಆದರೆ ಇದನ್ನು ಹಗಲಿನಲ್ಲಿ ಮಾತ್ರ ಸೇವಿಸಲು ಯತ್ನಿಸಿ. ಇದನ್ನು ಪ್ರತಿದಿನ ಕುಡಿಯಬಹುದು. ನಿತ್ಯ ಸೇವಿಸಿದ ನಂತರವೇ ನೀವು ತ್ವರಿತ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.