Home Health ಸೆಖೆಗಾಲದಲ್ಲಿ ಬೆವರು ಗುಳ್ಳೆ ಸಮಸ್ಯೆಯಿಂದ ಬೇಸತ್ತಿದ್ದೀರಾ ? ಇಲ್ಲಿದೆ ಕೆಲವೊಂದು ಮನೆಮದ್ದು!

ಸೆಖೆಗಾಲದಲ್ಲಿ ಬೆವರು ಗುಳ್ಳೆ ಸಮಸ್ಯೆಯಿಂದ ಬೇಸತ್ತಿದ್ದೀರಾ ? ಇಲ್ಲಿದೆ ಕೆಲವೊಂದು ಮನೆಮದ್ದು!

Hindu neighbor gifts plot of land

Hindu neighbour gifts land to Muslim journalist

ಬೇಸಿಗೆ ಬಂತೆಂದರೆ ಬೆವರು, ಸೆಖೆ ಹೆಚ್ಚಾಗುತ್ತಲೇ ಇರುತ್ತದೆ. ಚರ್ಮದಲ್ಲಿ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಅಥವಾ ಇದನ್ನು ಬೆವರು ಸಾಲೆ ಎಂದೂ ಕರೆಯುತ್ತಾರೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುವುದು ಸರ್ವೇಸಾಮಾನ್ಯ.

ಹೆಚ್ಚಾಗಿ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಅವರ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಬಿಸಿಲಿನ ತಾಪದಿಂದಾಗಿ ಚರ್ಮದಲ್ಲಿ ಸಣ್ಣ ನೀರಿನ ಗುಳ್ಳೆಗಳು ಮೂಡುತ್ತವೆ. ವಿಪರೀತ ತುರಿಕೆಯ ಪರಿಣಾಮ ತ್ವಚೆ ಉರಿಯುತ್ತದೆ.

ಮುಖ, ಕುತ್ತಿಗೆ, ಬೆನ್ನು, ಹೊಟ್ಟೆ, ಸ್ತನಗಳ ಕೆಳಭಾಗದಲ್ಲಿ ಹಿಂಭಾಗದಲ್ಲಿ ಮೊಣಕೈ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಅಕ್ಕಿ ತೊಳೆದ ನೀರನ್ನು ಹಚ್ಚಿಕೊಳ್ಳಬೇಕು. ಇದರಿಂದ ಉರಿಯೂ ಕಡಿಮೆಯಾಗುತ್ತದೆ, ಕಜ್ಜಿಗಳೂ ಮಾಯವಾಗುತ್ತದೆ.

ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಇದನ್ನು ಕಡಿಮೆ ಮಾಡಬಹುದು. ಹೀಗೆ ಮಾಡಿದರೆ ಎರಡರಿಂದ ಮೂರು ದಿನದೊಳಗೆ ಸೆಕೆ ಬೊಕ್ಕೆಗಳು ಕಡಿಮೆಯಾಗುತ್ತವೆ.

ಹೆಚ್ಚಿನ ನೀರು ಸೇವನೆ ಹಾಗೆನೇ ಕಾಟನ್ ಉಡುಪುಗಳನ್ನು ಧರಿಸುವುದು ಜೊತೆಗೆ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದರಿಂದ ಇದರಿಂದ ನಿವಾರಣೆ ಆಗುತ್ತದೆ.