Home Health ಗರ್ಭಿಣಿಯರಿಗೆ ನಿತ್ಯಾನಂದ ನಿಂದ ವಿಶೇಷ ಆಫರ್ | ಹೆರಿಗೆಗೆ ಕೈಲಾಸಕ್ಕೆ ಬರಲು ಆಹ್ವಾನ

ಗರ್ಭಿಣಿಯರಿಗೆ ನಿತ್ಯಾನಂದ ನಿಂದ ವಿಶೇಷ ಆಫರ್ | ಹೆರಿಗೆಗೆ ಕೈಲಾಸಕ್ಕೆ ಬರಲು ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಬಿಡದಿ ನಿತ್ಯಾನಂದ ಸ್ವಾಮೀಜಿ ಬಗೆಗಿನ ಪ್ರಚಾರಗಳನ್ನು ನೋಡಿ ಹಲವಾರು ರೀತಿಯ ಗೊಂದಲಗಳು ಉಂಟಾಗಿದೆ. ಹಾಗಿರುವಾಗ ಪ್ರಸ್ತುತ ಕೈಲಾಸದಲ್ಲಿ ಆರಾಮವಾಗಿ ಇರುವ ಬಿಡದಿ ಸ್ವಾಮಿ ನಿತ್ಯಾನಂದ ಈತನು ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದು ಆಮಂತ್ರಣ ನೀಡಿದ್ದಾನೆ. ಅಲ್ಲದೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವುದು ಈಗಾಗಲೇ ಬೆಳಕಿಗೆ ಬಂದಿರುವುದು ತಿಳಿದಿದೆ. ಈಗ ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ ಒಂದನ್ನು ನೀಡಿರುವುದು ಸುದ್ದಿಯಾಗುತ್ತಿದೆ.

ಸ್ವಾಮಿ ನಿತ್ಯಾನಂದನ ಪ್ರಕಾರ ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ವಿಶಿಷ್ಟವಾದ ಅಲೌಕಿಕವಾದ ಪ್ರಕಾಶಮಾನವಾದ ತೇಜ ಶಕ್ತಿಯುಳ್ಳ ಡಿಎನ್‍ಎ ದಯಪಾಲಿಸುವುದಾಗಿ ತಿಳಿಸಿದ್ದು, ಈ ಹೇಳಿಕೆಯು ನಾನಾ ರೀತಿಯ ಗೊಂದಲಗಳನ್ನು ಸೃಷ್ಟಿ ಮಾಡಿದೆ.ಕೈಲಾಸದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್‌ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ. ಎಂದೆಲ್ಲಾ ಹೇಳಿಕೆ ನೀಡಿರುವುದಲ್ಲದೆ ಕೈಲಾಸದಲ್ಲಿ ಹೆರಿಗೆಯಾದರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತಾಗಿ ವೀಡಿಯೋ ಮೂಲಕ ವಿವರಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.

ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಹೆರಿಗೆಗೆ ಮಾತ್ರ ಕೈಲಾಸಕ್ಕೆ ಬನ್ನಿ. ಈ ಮೂಲಕ ನಿಮ್ಮ ಮಗುವಿಗೆ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಬಳಸಿಕೊಳ್ಳಿ ಎಂದು ಮಹಿಳೆಯರ ತಲೆ ಕೆಡಿಸಿದ್ದಾನೆ .ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂತಹ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ ಒಲಿಯುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿರುತ್ತಾನೆ.

ಒಟ್ಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜನರ ಗಮನ ಸೆಳೆಯಲು ಒಂದಲ್ಲ ಒಂದು ಹೇಳಿಕೆಯೊಂದಿಗೆ ಈತನು ಸುದ್ದಿಯಾಗುತ್ತಿರುವುದು ಕಂಡು ಬರುತ್ತಿದೆ.