Home Food Health Tips : ಮೂಲಂಗಿಯನ್ನು ಈ ಸಮಸ್ಯೆ ಇರುವವರು ಸೇವಿಸಲೇಬಾರದು!

Health Tips : ಮೂಲಂಗಿಯನ್ನು ಈ ಸಮಸ್ಯೆ ಇರುವವರು ಸೇವಿಸಲೇಬಾರದು!

Hindu neighbor gifts plot of land

Hindu neighbour gifts land to Muslim journalist

ಮೂಲಂಗಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಮೂಲಂಗಿಯನ್ನು ಸಲಾಡ್‍ಗಳಲ್ಲಿ, ಪರೋಟಾ ಮತ್ತು ಸಾಂಬಾರ್​​ಗಳಲ್ಲಿ ಬಳಸಲಾಗುತ್ತದೆ. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ತಿನ್ನೋ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ ಈ ಮೂಲಂಗಿಯನ್ನು ಎಲ್ಲರೂ ಸೇವಿಸಬಾರದು. ಕೆಲವು ಸಮ‌ಸ್ಯೆ ಇರುವವರು ಮೂಲಂಗಿಯನ್ನು ಮರೆತೂ ಸೇವಿಸಬಾರದು.‌ ಯಾಕೆ ಗೊತ್ತಾ? ಯಾಕಂದ್ರೆ ಕೆಲವು ಕಾಯಿಲೆ ಇರುವವರು ಮೂಲಂಗಿ ಸೇವಿಸದರೆ ಆ ಕಾಯಿಲೆಗಳನ್ನು ಉಲ್ಬಣಿಸುತ್ತದೆ.

ಸಂಧಿವಾತ ರೋಗಿಗಳು : ಹಿರಿಯರಿಗೆ ಸಂಧಿವಾತದ ಸಮಸ್ಯೆ ಹೆಚ್ಚಿರುತ್ತದೆ. ಹಾಗೇ ಬಾಯಿ ಚಪಲವೂ ಹೆಚ್ಚಿರುತ್ತದೆ. ಆದರೆ ಸಂಧಿವಾತ ಇರುವವರು ರಾತ್ರಿ ಮೂಲಂಗಿಯನ್ನು ತಿನ್ನಬಾರದು.
ಇಲ್ಲವಾದಲ್ಲಿ ಈ ಸಂಧಿವಾತ ನೋವು ಹೆಚ್ಚಾಗುತ್ತದೆ. ಹಾಗಾಗಿ ಮೂಲಂಗಿಯಿಂದ ದೂರವಿರುವುದು ಉತ್ತಮ.

ಗ್ಯಾಸ್ ಸಮಸ್ಯೆ : ಗ್ಯಾಸ್ ಸಮಸ್ಯೆ ಇರುವವರು ಮೂಲಂಗಿಯನ್ನು ಸೇವಿಸಬಾರದು. ಅದರಲ್ಲೂ ಈ ಸಮಸ್ಯೆ ಇರುವವರು ರಾತ್ರಿ
ತಪ್ಪಿಯೂ ಮೂಲಂಗಿಯನ್ನು ಸೇವಿಸಬೇಡಿ. ಒಂದು ವೇಳೆ ಸೇವಿಸಿದರೆ, ಹೊಟ್ಟೆಯ ತೊಂದರೆಗಳು ಉಂಟಾಗಬಹುದು. ನಿದ್ರೆ ಬಾರದೇ ಇರಬಹುದು. ಹೀಗೆ ಹಲವು ಸಮಸ್ಯೆಗಳು ಎದುರಾಗಬಹುದು.

ಸೊಂಟ ನೋವು : ದೇಹದ ಯಾವುದೇ ಭಾಗದಲ್ಲಿ ನೋವಿದ್ದರೂ ಮೂಲಂಗಿಯನ್ನು ಸೇವಿಸಬಾರದು. ಕೈ, ಕಾಲು, ಸೊಂಟ, ಮೊಣಕಾಲು, ಭುಜ ಅಥವಾ ದೇಹದ ಇತರ ಯಾವುದೇ ಭಾಗದಲ್ಲಿ ನೋವು ಇದ್ದರೆ, ರಾತ್ರಿ ಸಮಯದಲ್ಲಿ ಮೂಲಂಗಿಯನ್ನು ಸೇವಿಸಬಾರದು. ಸೇವಿಸಿದರೆ ದೇಹದಲ್ಲಿ ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಆರೋಗ್ಯ ಕೆಡುತ್ತದೆ. ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಮೂತ್ರಪಿಂಡದ ಸಮಸ್ಯೆ : ಮೂತ್ರಪಿಂಡದ ಸಮಸ್ಯೆ ಇದ್ದವರು ಮೂಲಂಗಿಯನ್ನು ತಿನ್ನಬಾರದು. ತಿಂದರೆ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರು ಹೆಚ್ಚಿನ ನೀರಿನಂಶಾದ ಪದಾರ್ಥಗಳನ್ನು ಸೇವಿಸಬಾರದು. ಆದರೆ ಮೂಲಂಗಿಯಲ್ಲಿ ಹೆಚ್ಚಿನ ನೀರಿನಂಶ ಇದೆ. ಹಾಗಾಗಿ ಸೇವಿಸಬಾರದು. ಅಲ್ಲದೆ, ಮೂಲಂಗಿ ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿದ್ದು, ಇದು ಆರೊಗ್ಯಕ್ಕೆ ಹಾನಿ ಉಂಟುಮಾಡುತ್ತದೆ.

ಕಡಿಮೆ ರಕ್ತದೊತ್ತಡ : ಮೂಲಂಗಿಯನ್ನು ಹೆಚ್ಚು ಸೇವಿಸಿದರೆ ಲೋ ಬಿಪಿ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಹೈ ಬಿಪಿ ಸಮಸ್ಯೆ ಇರುವವರಿಗೆ ಉಪಯುಕ್ತವಾಗಿದೆ. ಇದರಲ್ಲಿನ ಪೊಟ್ಯಾಸಿಯಮ್ ಬಿಪಿಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಕಡಿಮೆ ಬಿಪಿ ಇರುವವರಿಗೆ ಅದು ಬಿಪಿಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಹೆಚ್ಚು ಬಿಪಿ ಇರುವವರಿಗೆ ಕಡಿಮೆ ಆಗುತ್ತದೆ. ಹಾಗಾಗಿ ಹೆಚ್ಚು ಬಿಪಿ ಇರುವವರಿಗೆ ಲಾಭದಾಯಕವಾಗಿದೆ.

ಥೈರಾಯ್ಡ್ : ಮೂಲಂಗಿ ಸೇವನೆಯಿಂದ ಹಾರ್ಮೋನ್ ಸ್ರವಿಸುವಿಕೆ ಇನ್ನಷ್ಟು ನಿಧಾನವಾಗುತ್ತದೆ. ಕಚ್ಚಾ ಮೂಲಂಗಿಯು ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯನ್ನು ತಡೆಯುವ ಗೋಯಿಟ್ರೋಜೆನ್ ಎಂಬ ಸಂಯುಕ್ತವನ್ನು ಹೊಂದಿದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಮೂಲಂಗಿ ಸೇವಿಸಬಾರದು. ಇದು ಮಾತ್ರವಲ್ಲದೆ, ಈ ರೋಗ ಇರುವವರು ಎಲೆಕೋಸು, ಹೂಕೋಸು ಮತ್ತು ಸೋಯಾಬೀನ್ ಕೂಡ ಸೇವಿಸಬಾರದು.