Home Food Salt Coffee | ಉಪ್ಪು ಕಾಫಿ ಕುಡಿದಿದ್ದೀರಾ ? ಇದರ ಪ್ರಯೋಜಗಳೇನು? ಸಂಪೂರ್ಣ ವಿವರ ಇಲ್ಲಿದೆ

Salt Coffee | ಉಪ್ಪು ಕಾಫಿ ಕುಡಿದಿದ್ದೀರಾ ? ಇದರ ಪ್ರಯೋಜಗಳೇನು? ಸಂಪೂರ್ಣ ವಿವರ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಪ್ರತಿ ಮನೆಯ ಬೆಳಗ್ಗಿನ ದಿನಚರಿ ಕಾಫಿ ಇಲ್ಲವೇ ಟೀ ಸೇವನೆಯಿಂದ ಆರಂಭವಾಗಿ ಮನಸ್ಸಿಗೆ ಆಹ್ಲಾದಕರ ಭಾವನೆ ನೀಡುತ್ತದೆ. ಕಾಫಿ ಇಲ್ಲವೇ ಟೀ ಯ ಸೇವನೆಯು ಚಟದಂಟೆ ಕೆಲವರನ್ನು ಆವರಿಸಿಬಿಟ್ಟಿದೆ. ಅಷ್ಟೇ ಅಲ್ಲದೆ ಹಲವರ ದಿನಚರಿಯ ಒಂದು ಭಾಗವಾಗಿದೆ.

ಚಹಾ ಮತ್ತು ಕಾಫಿ ಮನಸನ್ನು ಉತ್ತೇಜಿಸುವ ಜೊತೆಗೆ ಸಂಜೆಯ ಸಮಯದಲ್ಲಿ ಯು ಹಿತಕರ ಅನುಭವವನ್ನು ಕೂಡ ನೀಡುತ್ತದೆ. ಪ್ರದೇಶ ಹಾಗೂ ಆಹಾರಕ್ರಮ ಹಾಗೂ ಜೀವನಶೈಲಿಗೆ ಅನುಗುಣವಾಗಿ ಕಾಫಿ ತಯಾರಿಸುವ ವಿಧಾನದಲ್ಲೂ ಬದಲಾವಣೆಗಳಿವೆ.

ಕಾಫಿಯ ರುಚಿಗೆ ಮನಸೋಲದೆ ಇರುವವರೆಯಿಲ್ಲ ಎಂದರೂ ತಪ್ಪಾಗಲಾರದು. ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಕಾಫಿಗೆ ಹೆಚ್ಚು ಬೇಡಿಕೆ ಜೊತೆಗೆ ಜನಪ್ರಿಯತೆ ಕೂಡ ಇದೆ. ವಿದೇಶ ಗಳಲ್ಲಿ ಕಾಫಿಯನ್ನು ಉಪ್ಪು ಹಾಕಿ ತಯಾರಿಸುತ್ತಾರೆ. ಇಟಾಲಿಯನ್ ಎಸ್ಸೆಸೊ ಕಾಫಿ ವಿಶ್ವಪ್ರಸಿದ್ಧವಾಗಿದ್ದು, ಮೆಕ್ಸಿಕನ್ನರು ಕಂದು ಸಕ್ಕರೆಯೊಂದಿಗೆ ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಕಾಫಿಯನ್ನು ಕುಡಿಯುತ್ತಾರೆ.

ಟರ್ಕಿಯಲ್ಲಿ ಕಾಫಿ ಸ್ವಲ್ಪ ವಿಚಿತ್ರವಾಗಿದೆ. ಅಲ್ಲದೇ ಬಣ್ಣ ಗಾಢ ಕಪ್ಪು, ದಪ್ಪ ಮತ್ತು ಸ್ಟ್ರಾಂಗ್ ಆಗಿರುತ್ತದೆ.

ನಿಮಗೆ ಉಪ್ಪು ಬೆರೆಸಿದ ಕಾಫಿ ಗೊತ್ತೇ ? ಅಲ್ಲಿನ ಜನರ ನೆಚ್ಚಿನ ಕಾಫಿ ಇದಾಗಿದೆ. ಈ ಉಪ್ಪು ಸಹಿತ ಕಾಫಿ ಕುಡಿಯುವುದರಿಂದ ರಕ್ತವು ತುಂಬಾ ತೆಳುವಾಗುವುದನ್ನು ತಡೆಯಬಹುದು. ಉಪ್ಪು ಸಹಿತ ಈ ಕಾಫಿಯ ಇತಿಹಾಸವು ತುಂಬಾ ಹಳೆಯದು. ಆದರೆ ಕಾಫಿಗೆ ನೇರವಾಗಿ ಉಪ್ಪನ್ನು ಸೇರಿಸುವ ಬದಲು ನೈಸರ್ಗಿಕವಾಗಿ ಮಿಶ್ರಿತ ನೀರನ್ನು ಇದಕ್ಕೆ ಬಳಸಲಾಗುತ್ತದೆ.

ಟರ್ಕಿ ಮತ್ತು ಹಂಗೇರಿಯಂತಹ ದೇಶಗಳಲ್ಲಿ ಸಮುದ್ರದ ನೀರು ನದಿಗಳನ್ನು ಸಂಧಿಸುವ ನದಿಮೂಲೆಗಳಿಂದ ನೀರನ್ನು ಸಂಗ್ರಹಿಸಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಇದರಿಂದಾಗಿ ಈ ನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಕಾಫಿಯನ್ನು ಉಪ್ಪು ನೀರಿನಲ್ಲಿ ಕುದಿಸಿದಾಗ, ಕಾಫಿ ನೈಸರ್ಗಿಕವಾಗಿ ಹೆಚ್ಚು ನೊರೆಯನ್ನು ಉತ್ಪಾದಿಸುತ್ತದೆ.

ಕಾಫಿಗೆ ಉಪ್ಪು ಹಾಕಿದರೆ ಹುಳಿ ಸಿಹಿ, ಕಹಿ, ಖಾರ, ಉಪ್ಪು ಹೀಗೆ ಐದು ಬಗೆಯ ರುಚಿಗಳನ್ನು ನಾಲಿಗೆ ಪತ್ತೆ ಮಾಡುತ್ತದೆ. ಈ ಐದು ರುಚಿಗಳ ಸಂಯೋಜನೆಯಿಂದ ಕಹಿ ಉಂಟಾಗುತ್ತದೆ. ಏಕೆಂದರೆ ನಾಲಿಗೆಯ ಮೇಲಿನ ರುಚಿ ಮೊಗ್ಗುಗಳು ಕ್ಯಾಲ್ಸಿಯಂ ಅಯಾನುಗಳನ್ನು ಬಿಡುಗಡೆ ಮಾಡುತ್ತವೆ. ಕೆಫೀನ್ ಕೂಡ ಕಾಫಿ ರುಚಿಯನ್ನು ಸ್ವಲ್ಪ ಕಹಿ ಮಾಡುತ್ತದೆ. ಪರಿಣಾಮವಾಗಿ, ಕ್ಯಾಲ್ಸಿಯಂ ಅಯಾನುಗಳು ರುಚಿ ಮೊಗ್ಗುಗಳಿಂದ ಬಿಡುಗಡೆಯಾಗುತ್ತವೆ ಮತ್ತು ಮೆದುಳನ್ನು ತಲುಪಿ ಕಹಿ ರುಚಿಯ ಸಂದೇಶವನ್ನು ತಲುಪಿಸುತ್ತವೆ. ಮತ್ತೊಂದೆಡೆ, ಉಪ್ಪಿನಲ್ಲಿರುವ ಸೋಡಿಯಂ ಅಯಾನುಗಳು ಉಪ್ಪು ರುಚಿಯ ಬಿಡುಗಡೆ ಮಾಡುತ್ತವೆ. ಹಾಗಾಗಿ ಕಾಫಿಗೆ ಉಪ್ಪು ಹಾಕಿ ಕುಡಿದರೆ ಕಹಿ ರುಚಿ ಕಡಿಮೆಯಾಗಿ ಸಿಹಿ ರುಚಿ ಕ್ರಮೇಣ ಕಾಣಿಸಿಕೊಳ್ಳುತ್ತದೆ.

ಉಪ್ಪು ಸಹಿತ ಕಾಫಿ ತಯಾರಿಸುವ ವಿಧಾನ ಈ ಉಪ್ಪನ್ನು ನೇರವಾಗಿ ನೀರಿಗೆ ಸೇರಿಸಬಾರದು. ಕಾಫಿಗೆ ಉಪ್ಪು ಸೇರಿಸಿ. ಅಂದರೆ ಕಾಫಿ ಬೀಜವನ್ನು ಪುಡಿ ಮಾಡುವಾಗ ಉಪ್ಪು ಹಾಕಬೇಕು. ಕಾಫಿ ಪುಡಿಯನ್ನು ಉಪ್ಪಿನೊಂದಿಗೆ ಬೆರೆಸಿದ ನಂತರ, ಬೆಚ್ಚಗಿನ ನೀರಿನಿಂದ ಕಾಫಿ ಮಾಡಿ. ಸುಮಾರು 10 ಗ್ರಾಂ ಕಾಫಿ ಪುಡಿಗೆ 0.1 ಗ್ರಾಂ ಉಪ್ಪನ್ನು ಸೇರಿಸಬೇಕು.ಅಂದರೆ ಕಾಫಿ ಪುಡಿ ಮತ್ತು ಉಪ್ಪಿನ ಅನುಪಾತ 100:1 ಆಗಿರಬೇಕು. ಕಾಫಿಗೆ ಹಾಲು ಸೇರಿಸುವ ಬದಲು, ಉಪ್ಪು ಸಹಿತ ಕಪ್ಪು ಕಾಫಿ ಕುಡಿಯುವುದು ಉತ್ತಮ.
ಉಪ್ಪು ಸಹಿತ ಕಾಫಿ ಕೇಳಿದಾಗ ಅಚ್ಚರಿಯಾದರೂ ಇದರಿಂದ ಕೆಲವು ಪ್ರಯೋಜನಗಳಿವೆ.