Home Food ನೀವೂ ಕೂಡ ಫ್ರಿಡ್ಜ್ ನಲ್ಲಿ ಇರಿಸಿದ ಮೊಟ್ಟೆ ತಿನ್ನುತ್ತಿದ್ದೀರಾ | ಹಾಗಿದ್ರೆ ಓದಲೇಬೇಕಾಗಿದೆ ಈ ಮಾಹಿತಿ!

ನೀವೂ ಕೂಡ ಫ್ರಿಡ್ಜ್ ನಲ್ಲಿ ಇರಿಸಿದ ಮೊಟ್ಟೆ ತಿನ್ನುತ್ತಿದ್ದೀರಾ | ಹಾಗಿದ್ರೆ ಓದಲೇಬೇಕಾಗಿದೆ ಈ ಮಾಹಿತಿ!

Hindu neighbor gifts plot of land

Hindu neighbour gifts land to Muslim journalist

ಇಂದು ಯಾವುದೇ ವಸ್ತು ತಂದರೂ ಸರಿ, ಅದನ್ನು ಫ್ರಿಡ್ಜ್ ನಲ್ಲಿ ಇಟ್ಟೆ ಇಡುತ್ತೇವೆ. ಯಾಕಂದ್ರೆ, ಹಾಳಾಗದಂತೆ ಇರಿಸಬೇಕು ಎನ್ನುವಾಗ ಮೊದಲಿಗೆ ಆಲೋಚನೆ ಬರುವುದೇ ರೆಫ್ರಿಜರೇಟರ್. ಈ ಫ್ರಿಡ್ಜ್ ನಲ್ಲಿ ಇರಿಸಿದ ವಸ್ತು ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ಇಲ್ಲಿ ಮುಖ್ಯವಾಗುತ್ತೇ.

ಫ್ರಿಡ್ಜ್ ನಲ್ಲಿ ಇರಿಸುವ ಇಂತಹ ಹಲವು ವಸ್ತುಗಳಲ್ಲಿ ಮೊಟ್ಟೆ ಕೂಡ ಒಂದು. ಹೌದು. ಮೊದಲೆಲ್ಲ ಹೊರಗಡೆಯೇ ಮೊಟ್ಟೆಗಳನ್ನು ಇರಿಸಿ ಜೋಪಾನವಾಗಿ ಇಡುತ್ತಿದ್ದರು. ಆದ್ರೆ, ಇದೀಗ ಮಾತ್ರ ಎಲ್ಲದಕ್ಕೂ ಫ್ರಿಡ್ಜ್ ಒಂದೇ ಅಸ್ತ್ರ ಎಂಬಂತೆ ಅದರಲ್ಲೇ ಇರಿಸುತ್ತಾರೆ. ಆದ್ರೆ, ಫ್ರಿಡ್ಜ್ ನಲ್ಲಿ ಇರಿಸಿದ ಮೊಟ್ಟೆ ಆರೋಗ್ಯಕ್ಕೆ ಎಷ್ಟು ಉತ್ತಮ? ಇದರಿಂದಾಗೋ ಅನಾರೋಗ್ಯ ಏನೆಂಬುದು ನೀವು ತಿಳಿದಿರೋದು ಮುಖ್ಯ.

ಹಾಗಾಗಿ, ಮೊಟ್ಟೆಗಳನ್ನು ಫ್ರಿಜ್ ನಲ್ಲಿ ಏಕೆ ಇಡಬಾರದು ಎಂದು ತಿಳಿದುಕೊಳ್ಳೋಣ. ಹೌದು. ಹೆಚ್ಚಿನ ಮೊಟ್ಟೆಗಳನ್ನು ಕೋಣೆಯ ತಾಪಮಾನದಲ್ಲಿ ಇರಿಸಲು ತಜ್ಞರು ಸಲಹೆ ನೀಡುತ್ತಾರೆ. ಅಂದಹಾಗೆ, ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಏಕೆ ಇಡಬಾರದು ಎಂಬುದನ್ನು ಮೊದಲು ತಿಳಿಯೋಣ.. ಮೊಟ್ಟೆಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಮೊಟ್ಟೆಯಲ್ಲಿರುವ ಪೋಷಕಾಂಶಗಳು ಮತ್ತು ಸಾವಯವ ಸಂಯುಕ್ತಗಳ ಹೇರಳತೆಯು ಅದನ್ನು ಹೆಚ್ಚು ಹಾಳಾಗುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಅನೇಕ ಅಧ್ಯಯನಗಳು ಅವುಗಳನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಮೊಟ್ಟೆಗಳಿಗೆ ಹಾನಿಯಾಗಬಹುದು ಎಂದು ತೋರಿಸಿವೆ.

ಮೊಟ್ಟೆಗಳನ್ನು ಫ್ರಿಜ್ ನಲ್ಲಿ ಇಟ್ಟರೆ, ಸಾಲ್ಮೊನೆಲ್ಲಾ ಎಂಬ ವೈರಸ್ ಗೆ ತುತ್ತಾಗುವ ಅಪಾಯವಿದೆ. ಇದು ಹೊಟ್ಟೆ ನೋವು ಮತ್ತು ವಾಕರಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ತಜ್ಞರು ಅವುಗಳನ್ನು ತಂದ ತಕ್ಷಣ ತಿನ್ನಲು ಸಲಹೆ ನೀಡುತ್ತಾರೆ. ನೀವು ಅದನ್ನು ಫ್ರಿಜ್ ನಲ್ಲಿ ಹಾಕಿದರೆ, ಅದು ಹಾನಿಗೊಳಗಾಗುತ್ತದೆ. ಮೊಟ್ಟೆಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿದರೆ, ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತದೆ ಮತ್ತು ಆ ಮೂಲಕ ಅವು ಹಾನಿಗೊಳಗಾಗುತ್ತವೆ. ಹೀಗಾಗಿ ಫ್ರಿಡ್ಜ್ ನಲ್ಲಿ ಇರಿಸದೆಯೇ ತಿಂದರೆ ಉತ್ತಮ ಎಂದು ಹೇಳಬಹುದು. ಮೊಟ್ಟೆಗಳನ್ನು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ಇಟ್ಟರೆ ಅವುಗಳನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಲಾಗುತ್ತದೆ.