Home Health ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

Hindu neighbor gifts plot of land

Hindu neighbour gifts land to Muslim journalist

ಗದಗ :ಹುಟ್ಟಿ ಒಂದೇ ದಿನವಾದ ಮಗುವಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು,ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ.

ಗದಗ ಇಬ್ಬರು ಹಾಗೂ ರೋಣ ಪಟ್ಟಣದ ಇಬ್ಬರು ಹೀಗೆ ನಾಲ್ಕು ಜನ ಗರ್ಭಿಣಿಯರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.ಇನ್ನು ಹುಟ್ಟಿದ ಮಗುವಿಗೆ ಹಾಸ್ಪಿಟಲ್ ನಲ್ಲೇ ಇನ್ಫೆಕ್ಷನ್ನಿಂದ ಪಾಸಿಟಿವ್ ಆಗಿರಬಹುದು. ಆದರೆ ತಾಯಿಗೆ ನೆಗೆಟಿವ್ ಇದ್ದು, ಮಗುವನ್ನು ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೇ 4 ವರ್ಷದ ಮಗು, 11 ವರ್ಷದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು, ಉಳಿದಂತೆ 84 ಮಕ್ಕಳು 11 ವರ್ಷದ ಮೇಲ್ಪಟ್ಟವರಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕ ಪಡೆವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.