Home Health Health: ಮೈಕೈ ನೋವು ಸುಸ್ತು ಇದ್ದರೂ ಜ್ವರ ಇರಲ್ಲ: ಯಾವ ಕಾಯಿಲೆಯ ಲಕ್ಷಣ? ಇಲ್ಲಿದೆ ವಿವರ

Health: ಮೈಕೈ ನೋವು ಸುಸ್ತು ಇದ್ದರೂ ಜ್ವರ ಇರಲ್ಲ: ಯಾವ ಕಾಯಿಲೆಯ ಲಕ್ಷಣ? ಇಲ್ಲಿದೆ ವಿವರ

Hindu neighbor gifts plot of land

Hindu neighbour gifts land to Muslim journalist

Health: ಇತ್ತೀಚೆಗಿನ ಜನರು ಹಿಂದಿನವರಷ್ಟು ಗಟ್ಟಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಅವರನ್ನು ಕಾಡುತ್ತಿರುತ್ತವೆ. ಹೌದು ಜ್ವರ ಇಲ್ಲದಿದ್ದರೂ ನಿರಂತರವಾಗಿ ಸುಸ್ತು ಕಾಣಿಸುತ್ತಿದ್ದರೆ ಅದು ಈ ಈ ಖಾಯಿಲೆಗೆ ಎದೆ ಮಾಡಿಕೊಡಬಹುದು.

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಪುಲೀನ್ ಕುಮಾರ್ ಪ್ರಕಾರ ದೇಹದಲ್ಲಿ ನಿರಂತರವಾಗಿ ಸುಸ್ತು ಆಯಾಸದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಜ್ವರವಿಲ್ಲದಿದ್ದರೆ, ಇದಕ್ಕೆ ಒಂದು ಕಾರಣ ಥೈರಾಯ್ಡ್ ಅಸ್ವಸ್ಥತೆಯಾಗಿರಬಹುದಾಗಿದೆ.

ಹೆಚ್ಚಾಗಿ ಇದು ಇದು ಹೈಪೋಥೈರಾಯ್ಡಿಸಮ್ ಆಗಿರುವ ಸಾಧ್ಯತೆಇದ್ದು, ಇದರಲ್ಲಿ, ಆಯಾಸ, ಆಲಸ್ಯ, ಸ್ನಾಯು ನೋವು ಮತ್ತು ದೇಹ ತುಂಬಾನೇ ಭಾರವಾದಂತೆ ಅನಿಸುತ್ತದೆ. ಕ್ಲೀವ್‌ಲ್ಯಾಂಡ್‌ಕ್ಲಿನಿಕ್ ಪ್ರಕಾರ, ದೇಹದಲ್ಲಿನ ಥೈರಾಯ್ಡ್ ಹಾರ್ಮೋನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಹೈಪೋಥೈ ರಾಯ್ಡಿಸಮ್ ಸಂಭವಿಸುತ್ತದೆ. ಇದರ ಕೊರತೆಯು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ಆಯಾಸ ಉಂಟಾಗುತ್ತದೆ.

ಹಾಗೂ ವಿಟಮಿನ್ B12, ವಿಟಮಿನ್ ಡಿ, ಕ್ಯಾಲ್ಸಿಯಂ ಅಥವಾ ಕಬ್ಬಿಣ್ಣಾಂಶದ ಕೊರತೆ ಇದ್ದರೂ ಕೂಡ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇನ್ನೂ ಕೆಲವು ಬಾರಿ ಶುಗರ್ ಲೆವೆಲ್ ಹೆಚ್ಚಾದಾಗ ಈ ರೀತಿ ನರಗಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಇನ್ನೂ ಕೆಲವೊಮ್ಮೆ ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡದ ಸಂದರ್ಭದಲ್ಲಿ, ದೇಹದಲ್ಲಿ ಅಸ್ವಸ್ಥತೆ, ತಲೆಯಲ್ಲಿ ಭಾರ ಮತ್ತು ಆಯಾಸವೂ ಉಂಟಾಗಬಹುದಾಗಿದೆ.