Home Health Men Health: ಪುರುಷರು ಹಸಿ ಈರುಳ್ಳಿ ತಿಂದ್ರೆ ಈ ಶಕ್ತಿ ನಿಮ್ಮಲ್ಲಿ ಯಾವತ್ತೂ ಕಮ್ಮಿ ಆಗೋಲ್ಲ!

Men Health: ಪುರುಷರು ಹಸಿ ಈರುಳ್ಳಿ ತಿಂದ್ರೆ ಈ ಶಕ್ತಿ ನಿಮ್ಮಲ್ಲಿ ಯಾವತ್ತೂ ಕಮ್ಮಿ ಆಗೋಲ್ಲ!

Men Health

Hindu neighbor gifts plot of land

Hindu neighbour gifts land to Muslim journalist

Men Health: ಎಲ್ಲರ ಅಡುಗೆ ಮನೆಯಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಕೆಲವರಿಗೆ ಈರುಳ್ಳಿ ಇಲ್ಲದಿದ್ದರೆ ಅಡುಗೆ ಮಾಡೋಕೆ ಮನಸೇ ಬರಲ್ಲ. ಮುಖ್ಯವಾಗಿ ಅಡುಗೆಗಳ ರುಚಿ ಹೆಚ್ಚಿಸುವ ಈರುಳ್ಳಿ, ಆರೋಗ್ಯಕ್ಕೂ (Men Health) ಹತ್ತಾರು ಪ್ರಯೋಜನ ನೀಡುತ್ತದೆ.

Actor Darshan Case: ದರ್ಶನ್‌ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ

ಹೌದು, ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳು ಬೀರುತ್ತದೆ. ಈರುಳ್ಳಿಯಲ್ಲಿರುವ ಪೊಟ್ಯಾಸಿಯಮ್, ಬಿ ಜೀವಸತ್ವಗಳು, ವಿಟಮಿನ್ ಸಿ, ಖನಿಜಗಳು ಆರೋಗ್ಯವನ್ನು ಉತ್ತೇಜಿಸಲು ಎಲ್ಲಾ ರೀತಿ ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ.

ಇನ್ನು ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಮತ್ತು ಸಲ್ಫರ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಈರುಳ್ಳಿಯು ಫ್ಲೇವನಾಯ್ಡ್ಗಳು, ಪಾಲಿಫಿನಾಲ್ಗಳು ಮತ್ತು ಸಲ್ಫರ್ ಸಂಯುಕ್ತಗಳಂತಹ ಫೈಟೊಕೆಮಿಕಲ್ಗಳನ್ನು ಸಹ ಒಳಗೊಂಡಿದೆ. ಇವುಗಳು ಈರುಳ್ಳಿಯ ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿಮೈಕ್ರೊಬಿಯಲ್ ಮತ್ತು ಆಂಟಿಕ್ಯಾನ್ಸರ್ ಗುಣಲಕ್ಷಣಗಳನ್ನು ಹೆಚ್ಚಿಸುತ್ತವೆ.

Uppinangady: ಮಲಗಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್‌; ಹತ್ತನೇ ತರಗತಿ ಬಾಲಕನ ಬಂಧನ

ಇನ್ನು ಈರುಳ್ಳಿಯಲ್ಲಿರುವ ಆಲಿಲ್ ಸಲ್ಫೈಡ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿಯನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಈರುಳ್ಳಿಯಲ್ಲಿ ಫೈಬರ್ ಹೇರಳವಾಗಿದೆ. ಇದು ಜೀರ್ಣಾಂಗದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತದೆ ಮತ್ತು ಬ್ಯಾಕ್ಟೀರಿಯಾವು ಜೀರ್ಣಕ್ರಿಯೆಗೆ ಬೇಕಾದ ಸಣ್ಣ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುತ್ತದೆ.

ಈರುಳ್ಳಿಯಲ್ಲಿರುವ ಕ್ರೋಮಿಯಂ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹಿಗಳು ತಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು ಸೇವಿಸಬೇಕು. ಈರುಳ್ಳಿ ತಿಂದರೆ ಮೂತ್ರ ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಲ್ಲಿರುವ ಕೆಟ್ಟ ಪದಾರ್ಥಗಳು ತುಂಬಾ ಸುಲಭವಾಗಿ ಹೋಗುತ್ತವೆ.

ವಿಶೇಷವಾಗಿ ಪುರುಷರಲ್ಲಿ ಈರುಳ್ಳಿಯು ಕಾಮೋತ್ತೇಜಕ ಅಂಶ ಹೆಚ್ಚಿಸುತ್ತದೆ. ಅಂದರೆ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಲು ಪುರುಷರಿಗೆ ಸಹಾಯ ಮಾಡುತ್ತದೆ. ಇದು ಉತ್ತಮ ಲೈಂಗಿಕ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ.

ಅದರಲ್ಲೂ ಹಸಿ ಈರುಳ್ಳಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇವು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತವೆ. ಅದಕ್ಕಾಗಿ ಮೊಸರಿನಿಂದ ಈರುಳ್ಳಿ ಸಲಾಡ್ ಶೀತ ಮತ್ತು ತೇವಾಂಶವನ್ನು ಒದಗಿಸುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.