Uppinangady: ಮಲಗಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್‌; ಹತ್ತನೇ ತರಗತಿ ಬಾಲಕನ ಬಂಧನ

Share the Article

Uppinangady: ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಆರೋಪಿ ಹತ್ತನೇ ತರಗತಿಯ ಬಾಲಕನ್ನು ಬಂಧನ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಬಾಲಕ ಹೇಮಾವತಿ ಅವರ ಮನೆಯಲ್ಲಿ ತಂಗಿದ್ದು, ಈತ ಅವರ ಅಕ್ಕನ ಮಗನಾಗಿದ್ದು, ಹತ್ತನೇ ತರಗತಿ ವಿದ್ಯಾರ್ಥಿ. ಈ ಬಾಲಕ ಹೇಮಾವತಿ ಅವರು ಮಲಗಿದ್ದಲ್ಲಿ ಹೋಗಿ ದೇಹ ಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋಧ ಮಾಡಿದ್ದು, ಈ ವೇಳೆ ಆರೋಪಿ ಬಾಲಕ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಲೆ ಬಾಲಕ ಹೇಳಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೃತ ಹೇಮಾವತಿ ಅವರು ಪತಿ ವಿಠಲ ಪೈ ಅವರು ನೀಡಿದ ದೂರಿನಲ್ಲಿ ” ನನ್ನ ಪತ್ನಿ ಹೇಮಾವತಿ ಆಕೆಯ ತಾಯಿ ಮನೆಯಲ್ಲಿ ಇದ್ದು, ಮಲಗಿದ್ದಲ್ಲೇ ಮೃತ ಹೊಂದಿದ್ದಾಳೆ. ಬಿಳಿಯೂರು ಗ್ರಾಮದ ದರ್ಖಾಸ್ತು ಎಂಬಲ್ಲಿ ಹೋಗಿ ನಾನು ನೋಡಿದಾಗ, ಪತ್ನಿಯ ದೇಹದಲ್ಲಿ ಗಾಯದ ಗುರುತು ಕಂಡು ಬಂದಿದೆ. ಸಾಂದರ್ಭಿಕವಾಗಿ ಜೂ.16 ರಂದು ರಾತ್ರಿ ಪತ್ನಿಯ ಅಕ್ಕನ ಮಗ ಕೂಡಾ ಮನೆಗೆ ಬಂದಿದ್ದು, ಸಂಶಯದ ಆಧಾರದಲ್ಲಿ ದೂರು ನೀಡಲಾಗಿದೆ.  ಅಂದು ರಾತ್ರಿ ಪತ್ನಿಯ ತಾಯಿ, ಪತ್ನಿಯ ಅಕ್ಕನ ಮಗ ಮತ್ತು ಪತ್ನಿ ಊಟ ಮಾಡಿ ಮಲಗಿದ್ದರು ಎಂದು ಹೇಳಲಾಗಿದೆ.

ನಂತರ 17 ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಮೃತರ ಪತಿ ದೂರಿನಲ್ಲಿ ತಿಳಿಸಿದ್ದಾರೆ.

ವಿಠಲ ಪೈ ಅವರ ದೂರಿನ ಮೇರೆಗೆ ಆರೋಪಿ ಬಾಲಕನನ್ನು ವಿಚಾರಣೆ ಮಾಡಿಸಿದಾಗ ಕೊಲೆ ಮಾಡಿರುವುದು ತಿಳಿದು ಬಂದಿದೆ. ಇದೀಗ ಅಪ್ರಾಪ್ತ ಬಾಲಕನನ್ನು ಬಂಧನ ಮಾಡಲಾಗಿದ್ದು, ಕೊಲೆ ಪ್ರಕರಣ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.