Home Health ಮೆಡಿಕಲ್ ಉದ್ಯೋಗಿಯ ಎಡವಟ್ಟಿನಿಂದ ವ್ಯಕ್ತಿ ಸಾವು!!!

ಮೆಡಿಕಲ್ ಉದ್ಯೋಗಿಯ ಎಡವಟ್ಟಿನಿಂದ ವ್ಯಕ್ತಿ ಸಾವು!!!

Hindu neighbor gifts plot of land

Hindu neighbour gifts land to Muslim journalist

ಆಸ್ಪತ್ರೆಯಲ್ಲಿ ವೈದ್ಯರು ಕೊಟ್ಟ ಮೆಡಿಸಿನ್ ರಸೀದಿಯನ್ನು ಮೆಡಿಕಲ್ ಗೆ ತೆಗೆದುಕೊಂಡು ಬಂದ ವ್ಯಕ್ತಿಗೆ ಮೆಡಿಕಲ್ ಸಿಬ್ಬಂದಿಯು ವ್ಯಕ್ತಿಯ ರೋಗಕ್ಕೆ ಸಂಬಂಧಪಡದ ಮದ್ದು ನೀಡಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮೆಡಿಕಲ್ ಶಾಪ್ ಸಿಬ್ಬಂದಿ ಎಡವಟ್ಟಿಗೆ ಹನಮಂತಪ್ಪ ಪಾಟೀಲ (62) ಮೃತಪಟ್ಟಿದ್ದಾರೆ. ಅವರ ಮನೆಯಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ! ಹುಬ್ಬಳ್ಳಿಯ ವೆಲ್‌ನೆಸ್‌ ಫಾರೆವರ್ ಮೆಡಿಕಲ್ ಶಾಪ್‌ನಿಂದ ಇವರು ಔಷಧ ತೆಗೆದುಕೊಂಡದ್ದೇ ಅವರ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಘಟನೆಯ ಹಿನ್ನಲೆ : ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹನಮಂತಪ್ಪ ಧಾರವಾಡದ ಮಾನಸಿಕ ತಜ್ಞ ಡಾ.ಪಾಂಡುರಂಗಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಂಡುರಂಗಿ ಅವರ ಆಸ್ಪತ್ರೆಯಲ್ಲಿ ಹನಮಂತಪ್ಪ ಅವರಿಗೆ ನೀಡಬೇಕಾದ ಮಾತ್ರೆ ಇಲ್ಲದ ಕಾರಣ ಏಪ್ರಿಲ್​ 29ರಂದು ಹನುಮಂತಪ್ಪ ಪುತ್ರ ಪ್ರವೀಣ್ ಅಲ್ಲೆ ಇದ್ದ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ಕೇಳಿದಾಗ ಈ ಕಂಪನಿಯದ್ದಿಲ್ಲ, ಬೇರೆ ಕಂಪನಿಯದ್ದು ಇದೆ. ಕೆಲಸ ಮಾಡುತ್ತೆ ಏನು ಸಮಸ್ಯೆ ಆಗಲ್ಲ ಎಂದಿದ್ದಾರೆ.

ಮಗ ಕೂಡ ಮೆಡಿಕಲ್ ನವರು ಹೇಳಿದಂತೆ ಆ ಮಾತ್ರೆಗಳನ್ನೇ ತೆಗೆದುಕೊಂಡು ಹೋಗಿದ್ದಾರೆ. 12 ದಿನ ಅದೇ ಮಾತ್ರೆಗಳನ್ನು ನೀಡಿದ್ದಾರೆ. ಆದರೆ ದಿನನ ಕಳೆದಂತೆ ಅನಾರೋಗ್ಯ ಹೆಚ್ಚಾಗಿದೆ. ಬಳಿಕ ಆಸ್ಪತ್ರೆಗೆ ಅದೇ ವೈದ್ಯರ ಬಳಿ ಕರೆದುಕೊಂಡು ಹೋದಾಗ ಡಿಪ್ರೆಶನ್ ಮಾತ್ರೆ ಬದಲು, ಕ್ಯಾನ್ಸರ್ ಮಾತ್ರೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದೇಹದ ಒಳಗೆ ಸಂಪೂರ್ಣ ಹಾಳಾಗಿದ್ದ ಕಾರಣ ಹನುಮಂತಪ್ಪ ಮೃತಪಟ್ಟಿದ್ದಾರೆ. ಈ ಸಂಬಂಧ ಮೆಡಿಕಲ್ ಶಾಪ್ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೈದ್ಯರು ಬರೆದು ಕೊಡುವ ಔಷಧದ ಚೀಟಿಯನ್ನು ಮೆಡಿಕಲ್‌ ಷಾಪ್‌ನಲ್ಲಿ ತೋರಿಸಿ ಅವರು ಕೊಟ್ಟದ್ದನ್ನು ಹಾಗೆಯೇ ತರುವುದು ಸಾಮಾನ್ಯ. ಅಂಗಡಿಯವರು ಸರಿಯಾಗಿಯೇ ಕೊಟ್ಟಿರುತ್ತಾರೆ ಎಂದು ನಂಬಿ, ಅವರು ಕೊಟ್ಟದ್ದು ಸರಿಯಿದೆಯೇ ಇಲ್ಲವೇ ಎಂದು ನೋಡಲು ಹೋಗುವುದೇ ಇಲ್ಲ. ಕನಿಷ್ಠ ವೈಧ್ಯರಿಗೂ ತೋರಿಸುವುದಿಲ್ಲ. ಮೆಡಿಕಲ್ ಶಾಪ್ ನವರು ಇತರೆ ಕಂಪನಿಗಳ ಮಾತ್ರೆ ಏನೂ ಸಮಸ್ಯೆ ಇಲ್ಲ ಎಂದು ಮನವೊಲಿಸುವ ಕೆಲಸಗಳನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮೆಡಿಕಲ್ ನಲ್ಲಿ ಕೊಟ್ಟ ಮೆಡಿಸನ್ ತಕ್ಷಣ ನಾವು ಅದೇ ದಿನ ವೈದ್ಯರಿಗೆ ತೋರಿಸಿ ನಂತರ ದೇಹಕ್ಕೆ ತೆಗೆದುಕೊಂಡರೆ ಒಳ್ಳೆಯದು
ಇಂತಹ ಘಟನೆಗಳು ನಡೆದರೆ ಇದಕ್ಕೆ ಮೆಡಿಕಲ್ ಸಂಬಂಧಪಟ್ಟವರೇ ನೇರ ಹೊಣೆಯಾಗಿರುತ್ತದೆ.