Home Health Vaginal swelling: ಮಹಿಳೆಯರೇ ಎಚ್ಚೆತ್ತುಕೊಳ್ಳಿ!!! ನಿಮ್ಮ ಖಾಸಗಿ ಅಂಗ ತುರಿಕೆಗೆ ಇದು ಕಾರಣ!

Vaginal swelling: ಮಹಿಳೆಯರೇ ಎಚ್ಚೆತ್ತುಕೊಳ್ಳಿ!!! ನಿಮ್ಮ ಖಾಸಗಿ ಅಂಗ ತುರಿಕೆಗೆ ಇದು ಕಾರಣ!

Hindu neighbor gifts plot of land

Hindu neighbour gifts land to Muslim journalist

Vaginal swelling: ಬಹುತೇಕ ಮಹಿಳೆಯರು ಯೋನಿ (Vaginal swelling) ತುರಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದ್ರೆ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ತಾರೆ. ಜನನಾಂಗದ ಭಾಗದಲ್ಲಿ ತುರಿಕೆ ಇದ್ದರೆ ಅದರಿಂದ ತುಂಬಾ ಮುಜುಗರ ಉಂಟು ಉಂಟಾಗುತ್ತದೆ. ಇದು ನಿಮ್ಮ ದೈನಂದಿನ ಕಾರ್ಯಗಳ ಸಮಯದಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುವುದು.

ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ ಆಗುತ್ತದೆ. ಹೌದು, ವರದಿಯೊಂದರ ಪ್ರಕಾರ, ದೈಹಿಕ ಮತ್ತು ಭಾವನಾತ್ಮಕ ಒತ್ತಡವು ಯೋನಿ ತುರಿಕೆ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ಒತ್ತಡವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದಾಗ ಇದು ಸಂಭವಿಸಬಹುದು. ರೋಗ ನಿರೋಧಕ ಶಕ್ತಿ ಒತ್ತಡದಿಂದ ಕಡಿಮೆಯಾಗ್ತಿದ್ದಂತೆ ಸೋಂಕು ಹೆಚ್ಚಿನ ಅಪಾಯವನ್ನುಂಟು ಮಾಡಲು ಶುರು ಮಾಡುತ್ತದೆ. ತುರಿಕೆ ಕಾಣಿಸಿಕೊಳ್ಳುತ್ತದೆ.

ಒತ್ತಡ ಪ್ರತಿ ಬಾರಿಯೂ ಯೋನಿಯ ತುರಿಕೆಗೆ ಕಾರಣವಾಗುವುದಿಲ್ಲ. ಯೋನಿ ಭಾಗದಲ್ಲಿ ತುರಿಕೆ ಉಂಟಾಗಲು ಯೋನಿಯು ಒಣಗುವುದು ಮತ್ತು ಕೆಲವೊಂದು ರಾಸಾಯನಿಕ ಬಳಕೆ ಅಥವಾ ರೇಜರ್ ಕಾರಣವಾಗಿರಬಹುದು.

ಇನ್ನು ಬಿಗಿಯಾದ ಒಳ ಉಡುಪು, ಬಟ್ಟೆ ಸೋಪ್,ಮೈ ಸೋಪ್,ಸುಗಂಧ ದ್ರವ್ಯ,ಟಾಯ್ಲೆಟ್ ಪೇಪರ್,ಸಾರ್ವಜನಿಕ ಶೌಚಾಲಯ ಬಳಕೆ ಇವೆಲ್ಲವುಗಳಿಂದ ಕೆಲವೊಮ್ಮೆ ಯೋನಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಬೆವರಿನಿಂದ, ಪಾಲುದಾರರೊಂದಿಗೆ ಸಂಬಂಧವನ್ನು ಬೆಳೆಸುವ ಕಾರಣ, ಮುಟ್ಟಿನ ಸಮಯ, ಯೀಸ್ಟ್ ಸೋಂಕು ಈವೆಲ್ಲವೂ ಕಾರಣವಾಗುತ್ತದೆ. ಇದರ ಹೊರತು ಅಲರ್ಜಿಯ ಪ್ರತಿಕ್ರಿಯೆ,
ಸೋರಿಯಾಸಿಸ್ ನಿಂದ ಕೂಡ ತುರಿಕೆ ಕಾಣಿಸಬಹುದು.

ಯೋನಿಯ ತುರಿಕೆ ತಪ್ಪಿಸಲು ಮೊದಲು ಸ್ವಚ್ಛತೆ ಬಹಳ ಮುಖ್ಯ. ಬೇವಿನ ಎಲೆ ನೀರಿನಿಂದ ಯೋನಿ ಸ್ವಚ್ಛಗೊಳಿಸುವುದು ಪರಿಣಾಮಕಾರಿ.
ಮುಂಜಾಗ್ರತಾ ಕ್ರಮವಾಗಿ, ಉಗುರು ತುರಿಕೆ ಮಾಡಬೇಡಿ, ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ, ಮತ್ತು ಹತ್ತಿ ಒಳ ಉಡುಪುಗಳನ್ನು ಧರಿಸಲು ಪ್ರಯತ್ನಿಸಿ, ಯೋನಿಯ ಸುತ್ತಲಿನ ಚರ್ಮವು ತುಂಬಾ ಸೂಕ್ಷ್ಮವಾಗಿದೆ ಆದ್ದರಿಂದ ನಿಮ್ಮ ಯೋನಿಯ ಸುತ್ತಲೂ ರಾಸಾಯನಿಕ ಸಂಯೋಜನೆಯನ್ನು ಬಳಸುವುದನ್ನು ನೀವು ತಪ್ಪಿಸಬೇಕು.

ಇನ್ನು ತೆಂಗಿನೆಣ್ಣೆಯು ಸ್ತ್ರೀಯರ ಖಾಸಗಿ ಅಂಗಗಳ ತುರಿಕೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಯೀಸ್ಟ್ ಸೋಂಕುಗಳಿಗೆ ಕಾರಣವಾದ ಕ್ಯಾಂಡಿಡಾ ಅಲ್ಬಿಕಾನ್ಸ್ ಅನ್ನು ಕೊಲ್ಲಲು ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ನೀವು ತೆಂಗಿನ ಎಣ್ಣೆಯನ್ನು ನೇರವಾಗಿ ತುರಿಕೆ ಇರುವ ಪ್ರದೇಶಗಳಿಗೆ ಹಾಕಬಹುದು.

ಹೆಣ್ಣುಮಕ್ಕಳು ಬಕೆಟ್‌ಗೆ ಅಡಿಗೆ ಸೋಡಾವನ್ನು ಸೇರಿಸಬಹುದು ಮತ್ತು ನಂತರ ಸ್ನಾನ ಮಾಡಬಹುದು ಅಥವಾ ಸರಳವಾಗಿ ಅಡಿಗೆ ಸೋಡಾದಿಂದ ಪೇಸ್ಟ್ ಅನ್ನು ತಯಾರಿಸಬಹುದು ಮತ್ತು ನಂತರ ಅದನ್ನು ತುರಿಕೆ ಇರುವ ಪ್ರದೇಶಗಳಿಗೆ ಅನ್ವಯಿಸಬಹುದು.

ಖಾಸಗಿ ಭಾಗಗಳಲ್ಲಿ ತುರಿಕೆ ತಡೆಯಲು ಮಹಿಳೆಯರು ಆಂಟಿ ಫಂಗಲ್ ಕ್ರೀಮ್ ಅನ್ನು ಬಳಸಬಹುದು. ತುರಿಕೆಯನ್ನು ಗುಣಪಡಿಸಲು ಸಾಮಾನ್ಯವಾಗಿ ಬಳಸುವ ಕೆಲವು ಆಂಟಿ ಫಂಗಲ್ ಕ್ರೀಮ್‌ಗಳು ಬೇಸಿಕ್ ಕೇರ್ ಮೈಕೋನಜೋಲ್ 7 ನೈಟ್ರೇಟ್ ಯೋನಿ ಕ್ರೀಮ್, ಮೊನಿಸ್ಟಾಟ್ 1-ಡೇ ಸಂಯೋಜನೆಯ ಪ್ಯಾಕ್ ಬಳಸಬಹುದು.

ಇನ್ನು ಆಪಲ್ ಸೈಡರ್ ವಿನೆಗರ್ ಸಹ ಹೆಣ್ಣಿನ ಖಾಸಗಿ ಭಾಗಗಳಲ್ಲಿ ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ನಾನ ಮಾಡುವ ಮೊದಲು, ಮಹಿಳೆಯರು ಆಪಲ್ ಸೈಡರ್ ವಿನೆಗರ್ ಅನ್ನು ಬಕೆಟಿಗೆ ಸೇರಿಸಬಹುದು.

ಇದನ್ನೂ ಓದಿ: ರಣಬೀರ್ ಜೊತೆ ಲಿಪ್ ಕಿಸ್ ಮಾಡಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು?