Home Health ನಿಮ್ಮ ನಿದ್ರಾಭಂಗಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು !!!

ನಿಮ್ಮ ನಿದ್ರಾಭಂಗಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು !!!

Hindu neighbor gifts plot of land

Hindu neighbour gifts land to Muslim journalist

ದೈನಂದಿನ ದಿನಚರಿಯಲ್ಲಿ ಜೀವನಶೈಲಿಯು ನಿಜವಾಗಿಯೂ ಉತ್ತಮ ನಿದ್ರೆಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆರೋಗ್ಯಕರವಾಗಿರಲು ಉತ್ತಮ ಆಹಾರದ ಜೊತೆಗೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ಉತ್ತಮ ಆರೋಗ್ಯ, ಸದೃಢ ಶರೀರ, ಉಲ್ಲಸಿತ ಮನಸ್ಸು ಮತ್ತು ಮನೋಭಾವನೆಗೆ ಸಾಕಷ್ಟು ನಿದ್ದೆಯ ಅಗತ್ಯವಿದೆ.
ಅಸಮರ್ಪಕ ಆಹಾರ ಸೇವನೆ ಮತ್ತು ಸಲ್ಲದ ಪಾನೀಯಗಳನ್ನು ಸೇವಿಸುವ ಕ್ರಮ ಹಾಗೂ ಕೆಲಸದ ಒತ್ತಡ ಗಾಢ ನಿದ್ದೆ ಪಡೆಯಲು ಅಡ್ಡಿಪಡಿಸುತ್ತವೆ. ಇದಕ್ಕೆ ನಿದ್ರಾ ಭಂಗಿಯೂ ಕೂಡ ಕೆಲವೊಮ್ಮೆ ಕಾರಣವಾಗುತ್ತದೆ. ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ಹಾಗಾಗಿ ಸರಿಯಾದ ಭಂಗಿಯಲ್ಲಿ ನಿದ್ರೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಒತ್ತಡ ನಿವಾರಣೆಯಾಗುತ್ತದೆ.

ಬೆನ್ನು ಮೇಲೆ ಹಾಕಿ ಮಲಗುವುದರಿಂದ ಬೆನ್ನುಮೂಳೆಯು ಸಹಜ ಸ್ಥಿತಿಯಲ್ಲಿಯೇ ಉಳಿಯುತ್ತದೆ. ಬೆನ್ನೆಲುಬಿನ ತೊಂದರೆಗಳಿರುವವರು ಈ ರೀತಿ ಮಲಗಿದರೆ ಅವರಿಗೆ ಸುಖಕರ ನಿದ್ದೆ ಸಿಗುತ್ತದೆ. ಅಂಗಾತ ಮಲಗುವಾಗ ಮಂಡಿಗಳ ಕೆಳಗೆ ಒಂದು ಚಿಕ್ಕ ದಿಂಬನ್ನು ಇಟ್ಟುಕೊಂಡರೆ ಬೆನ್ನೆಲುಬಿನ ಒತ್ತಡ ಇನ್ನಷ್ಟು ಕಡಿಮೆಯಾಗುತ್ತದೆ. ಬೆನ್ನ ಮೇಲೆ ಮಲಗುವ ಮೂಲಕ ಉಸಿರಾಟ ಅತಿ ಸೂಕ್ತವಾದ ಭಂಗಿಯಲ್ಲಿರುವ ಕಾರಣ ಗರಿಷ್ಠ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಚರ್ಮದಲ್ಲಿ ನೆರಿಗೆ ಮೂಡುವ ಸಾಧ್ಯತೆ ಕಡಿಮೆಯಾಗಿ ವೃದ್ಧಾಪ್ಯ ದೂರವಾಗುತ್ತದೆ.

ಒಂದೇ ಕಡೆ ಮಲಗುವುದರಿಂದ ಬೆನ್ನಿಗೆ ಬೀಳುವ ಒತ್ತಡವೂ ಕಡಿಮೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಎಡಮಗ್ಗುಲಲ್ಲಿ ಮಲಗುವ ಮೂಲಕ ಉತ್ತಮಗೊಳ್ಳುವ ರಕ್ತಪರಿಚಲನೆ ತಾಯಿ ಮತ್ತು ಮಗುವಿನ ಅರೋಗ್ಯಕ್ಕೆ ಪೂರಕವಾಗಿದೆ ಎಂಬುದು ರುಜುವಾತಾಗಿದೆ. ಈ ಭಂಗಿಯಲ್ಲಿ ಆಮ್ಲೀಯತೆ ಹಿಂದೆ ಸರಿಯುವ ಮತ್ತು ಎದೆಯುರಿಯುಂಟಾಗುವ ಸಾಧ್ಯತೆಯೂ ಕಡಿಮೆಯಾಗಿ, ಆರಾಮದಾಯಕ ಭಾವನೆಯನ್ನು ನೀಡುತ್ತದೆ.

ಹೊಟ್ಟೆ ಅಥವಾ ಎದೆ ಮೇಲೆ ಮಲಗುವುದರಿಂದ ಬೆನ್ನುಹುರಿಗೆ ಸೂಕ್ತವಾದ ಆಧಾರ ದೊರಕದೇ ಬೆನ್ನುಹುರಿಯ ಮೇಲೆ ಅತಿ ಹೆಚ್ಚಿನ ಒತ್ತಡ ಬೀಳುವ ಕಾರಣ ಬೆನ್ನುನೋವು ಮತ್ತು ಕುತ್ತಿಗೆ ನೋವು ಎದುರಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಈ ರೀತಿಯಾಗಿ ಮಲಗುವುದು ತುಂಬಾ ಅಪಾಯಕಾರಿ ಎಂದು ಸಂಶೋಧನೆ ಸಾಬೀತುಪಡಿಸಿದೆ. ಈ ಭಂಗಿಯಲ್ಲಿ ಮಲಗುವುದರಿಂದ ಶ್ವಾಸಕೋಶ ಮತ್ತು ಎದೆಯ ಕುಹರದ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ತಜ್ಞರ ಪ್ರಕಾರ ಹೊಟ್ಟೆ, ಬೆನ್ನು ಅಥವಾ ಬದಿಯಲ್ಲಿ ಮಲಗುವುದರಿಂದ ಗೊರಕೆಯ ಜೊತೆಗೆ ಬೆನ್ನುನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ನಿದ್ರಾಹೀನತೆಯಿಂದ ಮಾನಸಿಕ ಸಮಸ್ಯೆಗಳು, ರೋಗ ನಿರೋಧಕತೆ, ಚಯಾಪಚಯದ ಮೇಲೂ ಪರಿಣಾಮ ಬೀರುತ್ತದೆ. ಇದರೊಂದಿಗೆ ಸರಿಯಾದ ಭಂಗಿಯಲ್ಲಿ ಮಲಗಿದರೆ, ಒತ್ತಡ ಮತ್ತು ರಕ್ತಪರಿಚಲನೆಯ ಸಮಸ್ಯೆ ದೂರವಾಗುತ್ತದೆ.