Home Food ಹೊಟ್ಟೆಯ ಬೊಜ್ಜು ಕರಗಿಸಲು ಹರಸಾಹಸ ಪಡುವ ಅಗತ್ಯವಿಲ್ಲ!! ಈ ಎರಡು ವಿಧಾನಗಳಿಂದ ಎಲ್ಲವೂ ಸುಲಭ ಸಾಧ್ಯ!!

ಹೊಟ್ಟೆಯ ಬೊಜ್ಜು ಕರಗಿಸಲು ಹರಸಾಹಸ ಪಡುವ ಅಗತ್ಯವಿಲ್ಲ!! ಈ ಎರಡು ವಿಧಾನಗಳಿಂದ ಎಲ್ಲವೂ ಸುಲಭ ಸಾಧ್ಯ!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು,ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಮಾಡಿಕೊಂಡು ದೇಹ ದಂಡಿಸುವುದು ಕಂಡುಬರುತ್ತದೆ.ಕೆಲವರು ಜಿಮ್ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಬೆವರು ಇಳಿಸುತ್ತಿದ್ದು,ಹೆಚ್ಚಿನವರಿಗೆ ಅದ್ಯಾವುದಕ್ಕೂ ಸಮಯಾವಕಾಶ ಇರುವುದಿಲ್ಲ.ಇಂತಹವರಿಗೆ ಬೊಜ್ಜು ಕರಗಿಸಲು ಇಲ್ಲಿದೆ ಎರಡು ಸುಲಭದ ವಿಧಾನ.

ಮುಂಜಾನೆ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಬೊಜ್ಜು ಕರಗಲು ಸಹಕಾರಿಯಾಗುತ್ತದೆ. ಏಕೆಂದರೆ ನೀರು ದೇಹದ ಸಮತೋಲನವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಬಿಸಿ ನೀರಿಗೆ ಒಂದೆರಡು ಸ್ಪೂನ್ ಜೇನು ತುಪ್ಪ, ಅಥವಾ ಲಿಂಬೆ ರಸ ಸೇರಿಸಿ ಸೇವಿಸಿದರೆ ಇನ್ನೂ ಉತ್ತಮವಾಗಿ ಬೊಜ್ಜು ಬಹುಬೇಗನೆ ಕರಗಿಬಿಡುತ್ತದೆ.

ಅಲ್ಲದೇ ಹಗಲು ಹೊತ್ತಿನಲ್ಲಿ ಪ್ರೊಟೀನ್ ಮತ್ತು ನಾರಿನಾಂಶವಿರುವ ಆಹಾರಗಳನ್ನು ಸೇವಿಸಿದರೆ ದಿನವಿಡೀ ಆಗುವ ಹಸಿವನ್ನು ಕಡಿಮೆ ಮಾಡಿಕೊಳ್ಳಲು ಉಪಕಾರಿಯಾಗಲಿದ್ದು, ದೇಹಕ್ಕೆ ಶಕ್ತಿ ತುಂಬುತ್ತದೆ. ಬೆಳಗ್ಗಿನ ಆಹಾರದಲ್ಲಿ ಮೊಟ್ಟೆ, ಮೊಸರು ಕಾಳುಗಳನ್ನು ಸೇರಿಸಿಕೊಂಡರೆ ಬಳಿಕದ ಸಮಯದಲ್ಲಿ ಕರಿದ ತಿನಿಸುಗಳು ಹಾಗೂ ಇನ್ನಿತರ ಕೊಬ್ಬಿನಾಂಶವಿರುವ ಆಹಾರಗಳಿಂದ ದೂರವಿರಬೇಕು.

ಸುಲಭವಾದ ಕೆಲವು ವ್ಯಾಯಾಮಗಳನ್ನು ಮಾಡಿಕೊಂಡರೆ ಇನ್ನೂ ಉತ್ತಮವಾಗಿ ಬೊಜ್ಜು ಕರಗಲು ಸಹಕಾರಿಯಾಗಲಿದ್ದು, ಹೆಚ್ಚಿನ ಕೊಬ್ಬು ತುಂಬಿದ ಆಹಾರ, ಪಾನೀಯಗಳನ್ನು ಸೇವಿಸುವುದನ್ನು ಮಿತವಾಗಿಸಬೇಕು.