Home Health ಕರ್ಪೂರದಿಂದ ಹೆಚ್ಚಾಗುತ್ತೆ ಧನಾತ್ಮಕ ಶಕ್ತಿ | ಇಂತಹ ಸಮಸ್ಯೆ ಇರುವವರು ಹಚ್ಚಲೇ ಬೇಕು ರಾತ್ರಿ ಹೊತ್ತು...

ಕರ್ಪೂರದಿಂದ ಹೆಚ್ಚಾಗುತ್ತೆ ಧನಾತ್ಮಕ ಶಕ್ತಿ | ಇಂತಹ ಸಮಸ್ಯೆ ಇರುವವರು ಹಚ್ಚಲೇ ಬೇಕು ರಾತ್ರಿ ಹೊತ್ತು ಕರ್ಪೂರ!

Hindu neighbor gifts plot of land

Hindu neighbour gifts land to Muslim journalist

ದೇವರ ಪೂಜೆಯಲ್ಲಿ ಕರ್ಪೂರ ಮಹತ್ವದ ಪಾತ್ರ ವಹಿಸುತ್ತದೆ. ಕರ್ಪೂರದ ಆರತಿ ದೇವರಿಗೆ ಹೇಗೆ ಪ್ರಿಯವೋ ಅದರಂತೆ, ಕರ್ಪೂರದಿಂದ ಇನ್ನಷ್ಟು ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸುತ್ತದೆ.

ಹೌದು. ಕರ್ಪೂರದೊಂದಿಗೆ ನೀಡಿದ ಆರತಿ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಸುಡುವುದರಿಂದ ಪರಿಸರದಲ್ಲಿರುವ ಹಲವು ಬಗೆಯ ಸೂಕ್ಷ್ಮಾಣು ಜೀವಿಗಳೂ ಸಾಯುತ್ತವೆ. ಇದಲ್ಲದೆ, ಜ್ಯೋತಿಷ್ಯದಲ್ಲಿ ಕರ್ಪೂರವನ್ನು ಬಳಸುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಕರ್ಪೂರವು ಅಶುಭ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಜೀವನದಲ್ಲಿ ಅದೃಷ್ಟವನ್ನು ಹೆಚ್ಚಿಸುತ್ತದೆ.

ಚಿಕ್ಕ ಮಕ್ಕಳಿರುವ ಮನೆಗಳ ಸುತ್ತಲೂ ಬಹಳಷ್ಟು ನಕಾರಾತ್ಮಕ ಶಕ್ತಿಯು ಪರಿಚಲನೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳು ಹೆದರುತ್ತಾರೆ ಮತ್ತು ಅಳುತ್ತಾರೆ. ಇಂತಹ ಸಮಯದಲ್ಲಿ ಮಗುವಿನ ಮೇಲಿನ ಕೆಡುಕನ್ನು ಹೋಗಲಾಡಿಸಲು.. ಪ್ರತಿದಿನ ಸಂಜೆ ಒಂದಿಷ್ಟು ಕರ್ಪೂರ ಹಚ್ಚಬೇಕು.

ಹಾಗೆಯೇ ರಾತ್ರಿ ವೇಳೆ ದುಃಸ್ವಪ್ನದಿಂದ ಬಳಲುತ್ತಿರುವವರು, ರಾತ್ರಿ ಮಲಗುವ ಕೋಣೆಯಲ್ಲಿ ಕರ್ಪೂರ ಹಚ್ಚುವುದು ಉತ್ತಮ ಪರಿಹಾರ. ಹಾಗೂ ಯಾರದೇ ಜಾತಕದಲ್ಲಿ ಪಿತೃದೋಷ ಅಥವಾ ರಾಹುದೋಷವಿದ್ದರೆ ಬೆಳಗ್ಗೆ ಮತ್ತು ಸಂಜೆ ಕರ್ಪೂರ ಹಚ್ಚುವುದು ಉತ್ತಮ. ರಾಹು-ಕೇತುಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಕರ್ಪೂರವನ್ನು ಕರವಸ್ತ್ರದಲ್ಲಿ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಇಂತಹ ಪ್ರಯೋಜನಕಾರಿ ಕರ್ಪೂರವನ್ನು ಬಳಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ…