Home Food ಒಂದು ತಿಂಗಳವರೆಗೆ ಟೀ- ಕಾಫೀ ಸೇವನೆ ಬಿಟ್ಟು ಬಿಡಿ, ಈ ಬದಲಾವಣೆ ಗಮನಿಸಿ!

ಒಂದು ತಿಂಗಳವರೆಗೆ ಟೀ- ಕಾಫೀ ಸೇವನೆ ಬಿಟ್ಟು ಬಿಡಿ, ಈ ಬದಲಾವಣೆ ಗಮನಿಸಿ!

Hindu neighbor gifts plot of land

Hindu neighbour gifts land to Muslim journalist

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ ಎದ್ದಾಗಿಂದ ಆರಂಭವಾಗಿ ದಿನ ಅಂತ್ಯವನ್ನು ಟೀ ಕುಡಿಯುವುದರ ಮುಕೇನ ಕೊನೆಗೊಳಿಸುತ್ತಾರೆ.

ಆದ್ರೆ, ಇದು ಆರೋಗ್ಯಕ್ಕೆ ಒಳಿತೆ ಕೆಡುಕೆ ಎಂಬುದೇ ಹಲವರಿಗೆ ತಿಳಿಯದೆ ಹೋಗಿದೆ. ಅಂತಹ ಗೊಂದಲದಲ್ಲಿ ನೀವು ಕೂಡ ಇದ್ದರೆ ನಿಮಗಿದೆ ಇಲ್ಲಿ ಉತ್ತರ. ಟೀ, ಕಾಫೀಯಲ್ಲಿ ಕೆಫೀನ್ ಅಂಶವಿದ್ದು, ಇದು ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ವೇಳೆ ಈ ಮಾತಲ್ಲಿ ನಂಬಿಕೆ ಇಲ್ಲದವರು, ಒಂದು ತಿಂಗಳವರೆಗೆ ಕಾಫಿ ಅಥವಾ ಟೀ ಸೇವನೆಯನ್ನು ನಿಲ್ಲಿಸಿ ನೋಡಬಹುದು. ಬಳಿಕ ಇದರಿಂದ ಆರೋಗ್ಯದಲ್ಲಿ ಆಗುವ ಅನೇಕ ಬದಲಾವಣೆಗಳನ್ನು ನೋಡಬಹುದು. ಇದರಿಂದ ಉಂಟಾಗುವ ಬದಲಾವಣೆಯ ಕೆಲವು ಅಂಶಗಳು ಇಲ್ಲಿವೆ ನೋಡಿ..

ರಕ್ತದೊತ್ತಡದ ನಿಯಂತ್ರಣ:
ಚಹಾ ಮತ್ತು ಕಾಫಿ ನಮಗೆ ಆಯಾಸದಿಂದ ಪರಿಹಾರವನ್ನು ನೀಡುತ್ತದೆ ನಿಜ. ಆದರೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ಕೆಫೀನ್ ಅಂಶವಿರುವುದರಿಂದ ಒಂದು ತಿಂಗಳ ಕಾಲ ಟೀ, ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಉತ್ತಮ ನಿದ್ರೆ:
ಚಹಾವನ್ನು ಬಿಡುವುದು ನಿಮ್ಮ ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುತ್ತಿದ್ದಿರಿ, ಈಗೆಷ್ಟು ಪ್ರಮಾಣದಲ್ಲಿ ಮಾಡುತ್ತಿದ್ದೀರಿ ಎಂದು ನೀವೇ ಊಹಿಸಿಕೊಳ್ಳಿ, ಬದುಕು ಬದಲಾದಂತೆ ಜೀವನಶೈಲಿಯೂ ಬದಲಾಗುತ್ತದೆ. ಹೀಗಿರುವಾಗ ನಾವು ಹೆಚ್ಚು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಆಯಾಸ, ಒತ್ತಡ, ಆಹಾರ ಪದ್ಧತಿಗಳು ಇವುಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಉತ್ತಮ ನಿದ್ದೆ ಮಾಡಲು ಕಾಫಿ ಅಥವಾ ಟೀಯನ್ನು ಬಿಡಬೇಕು.

ಹಲ್ಲುಗಳಲ್ಲಿ ಬಿಳುಪು ಬರುವುದು:
ಚಹಾ ಮತ್ತು ಕಾಫಿಯಂತಹ ಬಿಸಿ ಪದಾರ್ಥಗಳು ನಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕವಾಗಿದೆ, ಇದು ಅವುಗಳ ಬಣ್ಣವನ್ನು ತೆಗೆದುಹಾಕುವುದು ಮಾತ್ರವಲ್ಲದೆ ದುರ್ಬಲಗೊಳಿಸುತ್ತವೆ. ನೀವು ಒಂದು ತಿಂಗಳು ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ಹಲ್ಲುಗಳಿಗೆ ಆಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಬಹುದು. ಟೀ-ಕಾಫಿ ಸ್ವಲ್ಪ ಆಮ್ಲೀಯವಾಗಿದ್ದು ಇದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ.