Home Health Drinking Water: ಅತಿಯಾಗಿ ನೀರು ಕುಡಿದ್ರೆ ಕೋಮಾಗೆ ಹೋಗ್ಬೋದು ಹುಷಾರ್!

Drinking Water: ಅತಿಯಾಗಿ ನೀರು ಕುಡಿದ್ರೆ ಕೋಮಾಗೆ ಹೋಗ್ಬೋದು ಹುಷಾರ್!

Hindu neighbor gifts plot of land

Hindu neighbour gifts land to Muslim journalist

Drinking Water: ನೀರು ಭೂಮಿ ಮೇಲೆ ಬದುಕುವ ಪ್ರತಿಯೊಂದು ಜೀವಿಗೂ ಮುಖ್ಯವಾಗಿದೆ. ಹೀಗಾಗಿ ಆರೋಗ್ಯಯುತವಾಗಿರಲು ಶುದ್ಧ ನೀರು ಕುಡಿಯುವುದು ಮುಖ್ಯವಾಗಿದೆ. ನೀರು(Drinking Water) ನಮ್ಮ ಶರೀರದ ಜೀವಕೋಶಗಳಲ್ಲಿ ಇರುವ ತ್ಯಾಜ್ಯಗಳನ್ನು ತೊಡೆದು ಹಾಕುತ್ತದೆ ಮತ್ತು ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ನಮ್ಮ ಶರೀರವು ಸರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದಲ್ಲಿ ನಾವು ಸಾಕಷ್ಟು ಪ್ರಮಾಣದಲ್ಲಿ ಪಾನೀಯಗಳು ಮತ್ತು ನೀರನ್ನು ಹೊಂದಿರುವ ಆಹಾರಗಳನ್ನು ಸೇವಿಸಿ ದೇಹದ ನೀರಿನ ಅವಶ್ಯಕತೆಯನ್ನು ಪೂರೈಸಬೇಕು.

ದಿನಕ್ಕೆ ಕನಿಷ್ಠ ಎಂದರೆ 11 ರಿಂದ 12 ಲೋಟ ನೀರು ಕುಡಿಯಬೇಕು. ನೀರಿನ ಅವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ಬಿಸಿ ಅಥವಾ ತೇವಭರಿತ ವಾತಾವರಣವು ನಮ್ಮನ್ನು ಬೆವರುವಂತೆ ಮಾಡುತ್ತದೆ. ಇಂಥ ಸಂದರ್ಭಗಳಲ್ಲಿ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ತ್ವಚೆಯ ಕಾಂತಿ ಹೆಚ್ಚುವಂತೆ ಮಾಡಲು ಕೂಡ ನೀರು ಅಗತ್ಯವಾಗಿದೆ. ಆದ್ರೆ, ಅತೀ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ?

ಹೌದು. ಪ್ರತಿ ನಿಮಿಷವೂ ನೀರು ಕುಡಿಯುವ ಅಭ್ಯಾಸವು ಕೋಮಾದಂತಹ ಮಾರಣಾಂತಿಕ ವೈದ್ಯಕೀಯ ಸ್ಥಿತಿಗೆ ಬಲಿಪಶು ಮಾಡಬಹುದು. ಏಕೆಂದರೆ ಅತಿಯಾಗಿ ನೀರು ಕುಡಿಯುವುದರಿಂದ(Drinking Water) ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗುವುದಲ್ಲದೆ ಆಂತರಿಕ ಜೀವಕೋಶಗಳಲ್ಲಿ ನೀರಿನ ಊತವೂ ಹೆಚ್ಚುತ್ತದೆ.

ಪ್ರತಿ ನಿಮಿಷವೂ ನೀರು ಕುಡಿಯುವ ಬಯಕೆಯು ಮಾನಸಿಕ ಮತ್ತು ನರವೈಜ್ಞಾನಿಕ ಸಮಸ್ಯೆಯ ಸಂಕೇತವಾಗಿದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಪ್ರತಿದಿನ ಕುಡಿಯುತ್ತಿದ್ದರೆ ಅಥವಾ ಎರಡರಿಂದ ಮೂರು ನಿಮಿಷಗಳಿಗೊಮ್ಮೆ ನೀರು ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ ತಕ್ಷಣ ಎಚ್ಚರಿಕೆ ವಹಿಸುವುದು ಅಗತ್ಯ.

ವೈದ್ಯಕೀಯ ಭಾಷೆಯಲ್ಲಿ, ಕೋಮಾಗೆ ಕಾರಣವಾಗುವ ಈ ಸ್ಥಿತಿಯನ್ನು ಹೈಪೋನಾಟ್ರೀಮಿಯಾ ಎಂದು ಕರೆಯಲಾಗುತ್ತದೆ. ಅನೇಕ ನರವೈಜ್ಞಾನಿಕ ಬದಲಾವಣೆಗಳು ನಡೆಯುತ್ತವೆ. ಸೋಡಿಯಂ ಪ್ರಮಾಣ ಕಡಿಮೆ ಆಗುವುದರಿಂದ ಚಡಪಡಿಕೆ, ಸುಸ್ತು, ತಲೆಸುತ್ತು, ಕಡಿಮೆ ಬಿಪಿ, ವಾಕರಿಕೆ ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೀಗಾಗಿ ದೇಹಕ್ಕೆ ಎಷ್ಟು ಅಗತ್ಯವೊ ಅಷ್ಟೇ ನೀರು ಕುಡಿದು ಆರೋಗ್ಯ ಸುಧಾರಿಸುವುದು ಉತ್ತಮ.

ಇದನ್ನೂ ಓದಿ : ಸಿಂಗರಿಸಿದ ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60ರ ಅಜ್ಜಿ!