Home Health ಭಾರತದ ‘ಕೆಮ್ಮಿನ ಸಿರಪ್’ನಿಂದ 66 ಮಕ್ಕಳ ಸಾವು: WHO ಎಚ್ಚರಿಕೆ

ಭಾರತದ ‘ಕೆಮ್ಮಿನ ಸಿರಪ್’ನಿಂದ 66 ಮಕ್ಕಳ ಸಾವು: WHO ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

ಮೇಡನ್ ಫಾರ್ಮಾಸ್ಯುಟಿಕಲ್ಸ್ (Maiden Pharmaceuticals Limited ) ತಯಾರಿಸಿದ ಕೆಮ್ಮಿನ ಸಿರಪ್ ಗಳು ( Cough syrups ) ಡೈಥಿಲೀನ್ ಸ್ಟೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ (diethylene glycol and ethylene glycol) ಅನ್ನು ಹೊಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization -WHO) ಬುಧವಾರ ಘೋಷಿಸಿದೆ.

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಹಾಗೂ ಶೀತದ ಸಿರಪ್‌ಗಳ (Cough Syrup) ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳು ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ (Gambia) 66 ಮಕ್ಕಳ ಸಾವಿಗೆ ಸಂಬಂಧಪಟ್ಟಿವೆ ಎಂದು ಹೇಳಲಾಗಿದೆ.

‘ನಾಲ್ಕು ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯದ ವಿಶ್ಲೇಷಣೆಯು ಅವುಗಳಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥೈಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಅನ್ನು ಮಾಲಿನ್ಯಕಾರಕಗಳಾಗಿ ಹೊಂದಿವೆ ಎಂದು ದೃಢಪಡಿಸುತ್ತದೆ’ ಎಂದು ಡಬ್ಲ್ಯುಎಚ್‌ಒ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯಲ್ಲಿ ತಿಳಿಸಿದೆ.

ಈ ಉತ್ಪನ್ನಗಳನ್ನು ಬಳಸಿರುವುದರ ಅಡ್ಡ ಪರಿಣಾಮ ಗ್ಯಾಂಬಿಯಾದಲ್ಲಿ ಮಾತ್ರವೇ ಕಂಡುಬಂದಿದೆ. ಹಾಗೆನೇ ಈ ಉತ್ಪನ್ನಗಳನ್ನು ಇತರ ದೇಶಗಳಿಗೂ ವಿತರಿಸಲಾಗಿದೆ ಎಂಬುದು ತಿಳಿದುಬಂದಿದೆ.

ಯಾವ ನಾಲ್ಕು ಸಿರಪ್‌ಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ?: ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್ (Promethazine Oral Solution), ಕೋಫಾಕ್ಸ್‌ಮಾಲಿನ್ ಬೇಬಿ ಕಾಫ್ ಸಿರಪ್ (Kofexmalin Baby Cough Syrup), ಮ್ಯಾಕೋಫ್ ಬೇಬಿ ಕಾಫ್ ಸಿರಪ್ (Makoff Baby Cough Syrup) ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ 30 (Magrip N Cold Syrup).

ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧವನ್ನು ತಯಾರು ಮಾಡಿದೆ. ಕೆಮ್ಮು, ಶೀತಕ್ಕಾಗಿ ಈ ಸಿರಪ್ ನೀಡಲಾಗಿದ್ದು, ಇದರ ಸೇವನೆಯಿಂದ ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿದ್ದಾರೆ. ಈ ಸಿರಪ್ ಗ್ಯಾಂಬಿಯಾಗೆ ರಫ್ತು ಮಾಡಲಾಗಿತ್ತು. ಇದರ ಸೇವನೆಯಿಂದ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದು, ಹಾಗಾಗಿ ಈ ಕಂಪನಿ ತಯಾರಿಸುವ ನಾಲ್ಕು ಸಿರಪ್‌ಗಳ ಮೇಲೆ ತನಿಖೆ ನಡೆಸಲು ಕೋರಿದೆ. ವಿಶ್ವ ಸಂಸ್ಥೆ ಸೂಚನೆ ಮೇರೆಗೆ ತನಿಖೆ ಆರಂಭವಾಗಿದ್ದು, ಶೀಘ್ರವೇ ವರದಿ ನೀಡುವುದಾಗಿ ತಿಳಿಸಿದೆ.