Home Health ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು ಮಾಡಿದ್ದೇನು...

ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು ಮಾಡಿದ್ದೇನು ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

ಸಣ್ಣ ಮಕ್ಕಳು ತುಂಟತನದಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿ ತಿನ್ನುತ್ತಾರೆ. ಅದಕ್ಕೆ ದೊಡ್ಡವರಾದವರು ಹಾನಿಕಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದ ಹಾಗೇ ಮೇಲೆ ಎತ್ತಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಐದು ವರ್ಷದ ಮಗುವೊಂದು ಚಾಕೊಲೇಟ್ ಎಂದು ಭಾವಿಸಿ ವಯಾಗ್ರ ( ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆ) ದ ನಾಲ್ಕು ಮಾತ್ರೆಗಳನ್ನು ಸೇವಿಸಿ ಒದ್ದಾಡಿ ಗಂಭೀರ ಪರಿಸ್ಥಿತಿಯನ್ನು ತಲುಪಿತ್ತು.

ಈ ಘಟನೆ ನಡೆದಿರುವುದು ಬಿಹಾರದ ಖಗಾರಿಯಾದಲ್ಲಿ. ಆಟವಾಡುತ್ತಿದ್ದ ಮಗುವೊಂದು ಚಾಕೇಲೇಟ್ ಎಂದು ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ ತೆಗೆದುಕೊಂಡಿದೆ. ಆದರೆ ಸ್ವಲ್ಪ ಸಮಯದ ನಂತರ ಮಗುವಿನ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿದೆ. ಮಗು ತಲೆತಿರುಗುತ್ತಿದೆ ಎಂದು ಹೇಳಿ ನರಳಾಡುತ್ತಾ ಬಿದ್ದಿತ್ತು.

ಪೋಷಕರು ಗಾಬರಿಗೊಂಡು ಆಸ್ಪತ್ರೆಗೆ ಕರೆದೊಯ್ದು ವಿಷಯವನ್ನೆಲ್ಲಾ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರ ಬುದ್ಧಿವಂತಿಕೆಯಿಂದ ಮಗುವಿನ ಪ್ರಾಣ ಉಳಿದಿದೆ.

ಈ ಪ್ರಕರಣವು ಕಳೆದ ಫೆ‌.26 ರಂದು ನಡೆದಿದ್ದು, ಖಗಾರಿಯಾ ಸದರ್ ಆಸ್ಪತ್ರೆಯ ಡಾ‌.ಬರ್ಕತ್ ಆಲಿ ಅವರ ಬಳಿ ಇಂತಹ ಪ್ರಕರಣ ಬಂದಾಗ, ಅವರೂ ಆಶ್ಚರ್ಯಗೊಳಗಾದರು. ಆಸ್ಪತ್ರೆಗೆ ಬಂದಾಗ ಆಘಾತಗೊಂಡಿದ್ದ ಪೋಷಕರು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಬರ್ಕತ್ ಆಲಿಗೆ , ತಮ್ಮ ಮಗು ಮನೆಯಲ್ಲಿಟ್ಟಿದ್ದ ಮ್ಯಾನ್ ಫೋರ್ಸ್ ಮಾತ್ರೆಗಳನ್ನು ಚಾಕೊಲೇಟ್ ಎಂದು ತಿಳಿದು ನುಂಗಿದೆ ಎಂದು ಹೇಳಿದ್ದಾರೆ.

ಮಗು ಒಂದೇ ಬಾರಿಗೆ ನಾಲ್ಕು ಮಾತ್ರೆ ನುಂಗಿದ್ದು, ಬಳಿಕ ಮಗುವಿನ ಖಾಸಗಿ ಭಾಗ ಬಿಗಿಯಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ದೇಹ ಬೆವರಿನಿಂದ ಕೂಡಿತ್ತು ಮತ್ತು ಮಗು ಅಳುತ್ತಿತ್ತು ಎಂದು ಪೋಷಕರು ಹೇಳಿದಾ್ ಡಾ.ಅಲಿ ಅವರಿಗೂ ಆಶ್ಚರ್ಯ ವಾಗಿತ್ತು.

ಇಂತಹ ಪ್ರಕರಣ ಅವರಲ್ಲಿಗೆ ಮೊದಲ ಬಾರಿ ಬಂದಿದ್ದರಿಂದ ಪಾಟ್ನಾದ ಏಮ್ಸ್ ನಲ್ಲಿ ಮಕ್ಕಳ ತಜ್ಞರಾಗಿರುವ ಸ್ನೇಹಿತ ವೈದ್ಯರೊಬ್ಬರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಹೇಗಾದರೂ ಮಾಡಿ ಮಗುವಿಗೆ ವಾಂತಿಯಾಗಬೇಕು ಇದರಿಂದ ಪರಿಹಾರ ಆಗುತ್ತೆ ಎಂಬ ಸಲಹೆ ನೀಡುತ್ತಾರೆ.

ಅನಂತರ ಉಪ್ಪಿನ ದ್ರಾವಣ ಕುಡಿಸಿ ಮಗುವಿಗೆ ವಾಂತಿ ಬರುವಂತೆ ಮಾಡಲಾಗಿದೆ. ಇದಾದ ಸುಮಾರು ಒಂದು ಗಂಟೆಗಳ ಕಾಲ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಂತರ ಮಗು ಸ್ವಲ್ಪ ಸಾಮಾನ್ಯನಾದಾಗ ಮನೆಗೆ ಕಳುಹಿಸಲಾಯಿತು.

ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಮಾತ್ರೆಗಳನ್ನು ಯಾರಾದರೂ ಸೇವಿಸುತ್ತಿದ್ದರೆ ಅಂತಹ ಮಾತ್ರೆಗಳು ಮಕ್ಕಳ ಕೈಗೆ ಸಿಗದಂತ ಜಾಗದಲ್ಲಿ ಇಡಬೇಕು ಎಂದು ವೈದ್ಯರು ಜನರಿಗೆ ಸಲಹೆ ನೀಡುತ್ತಾರೆ. ಮಕ್ಕಳು ಇದನ್ನು ಸೇವಿಸಿದರೆ‌ ಸಾಯಬಹುದು.