Home Health Chicken Gunya: ಯಾದಗಿರಿ ಜಿಲ್ಲೆಗೆ ಕಂಟಕವಾಗಿದ್ಯಾ “ಚಿಕನ್ ಗುನ್ಯಾ” ? 100 ಕ್ಕೂ ಹೆಚ್ಚು...

Chicken Gunya: ಯಾದಗಿರಿ ಜಿಲ್ಲೆಗೆ ಕಂಟಕವಾಗಿದ್ಯಾ “ಚಿಕನ್ ಗುನ್ಯಾ” ? 100 ಕ್ಕೂ ಹೆಚ್ಚು ಜನರು ನರಳಾಟ.!

Chicken Gunya

Hindu neighbor gifts plot of land

Hindu neighbour gifts land to Muslim journalist

Chicken Gunya: ಯಾದಗಿರಿ : ಚಿಕನ್ ಗುನ್ಯಾ ಮುಖ್ಯವಾಗಿ ಒಂದು ವೈರಲ್ ಸೋಂಕು ಎನಿಸಿದ್ದು, ಇದು ಸೊಳ್ಳೆಗಳಿಂದ ಮನುಷ್ಯರಿಗೆ ಹರಡಿದ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುವ ಗುಣ ಲಕ್ಷಣವಾಗಿದೆ. ಇದೀಗ ಯಾದಗಿರಿ ಜಿಲ್ಲೆಗೆ ಚಿಕನ್ ಗುನ್ಯಾ (Chicken Gunya) ಭೀತಿ ಹೆಚ್ಚಾಗುತ್ತಿದ್ದು, 100 ಕ್ಕೂ ಹೆಚ್ಚುಜನರಲ್ಲಿ ಕಾಣಿಸಿದ್ದು, ನರಳಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಜ್ವರ ಮತ್ತು ಮೈ ಕೈ ನೋವು ಚಿಕನ್ ಗುನ್ಯಾದ ಸಾಮಾನ್ಯ ರೋಗ ಲಕ್ಷಣಗಳು. ಇದರ ಜೊತೆಗೆ ರೋಗ ಲಕ್ಷಣಗಳು ವಿಪರೀತಗೊಂಡಾಗ ಮುಖದ ಮೇಲೆ ಅಲ್ಲಲ್ಲಿ ಕಲೆಗಳು ಕಂಡು ಬರುವುದು ಮಾತ್ರವಲ್ಲದೆ ತಲೆ ನೋವು, ವಿಪರೀತ ಆಯಾಸ, ವಾಕರಿಕೆ, ವಾಂತಿಯ ಲಕ್ಷಣಗಳು ಸಹ ಗೋಚರಿಸಬಹುದಾಗಿದ್ದು, ಬೈಲಾಪುರ ತಾಂಡಾದ 100ಕ್ಕೂ ಹೆಚ್ಚು ಜನರಲ್ಲಿ ಉಲ್ಬಣಿಸುತ್ತಿದ್ದು ಹಾಸಿಗೆ ಹಿಡಿದ ದುರಂತ ಘಟನೆ ನಡೆದಿದೆ. ಜೀವನಾಧರಕ್ಕಾಗಿ ಕೂಲಿನಾಲಿ ಮಾಡುತ್ತಿದ್ದ ಜನರು ಇದೀಗ ರೋಗದಿಂದ ಕೆಲಸಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ರೋಗದಿಂದ ಬೇಸತ್ತು ಹೋಗಿದ್ದು, ಜನರ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಅಲ್ಲದೇ ಕೊಳಚೆ ತುಂಬಿದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಚತೆ ಮಾಡಲು ಸ್ಥಳೀಯ ಜನರು ಆಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.